ಬಳ್ಳಾರಿ: ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಹೋಬಳಿ ಹೊರವಲಯದಲ್ಲಿಂದು ಖಾಸಗಿ ಬಸ್ ಪಲ್ಟಿಹೊಡೆದ ಪರಿಣಾಮ 26 ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.
![bus accident](https://etvbharatimages.akamaized.net/etvbharat/prod-images/kn-bly-03-13-private-bus-pulti-news-script-7203310_13052019185227_1305f_1557753747_89.jpg)
ಬಳ್ಳಾರಿಯಿಂದ ದಾವಣಗೆರೆಯತ್ತ ಸಾಗುತ್ತಿದ್ದ ಎಸ್ಆರ್ಎಂಎಸ್ ಖಾಸಗಿ ಬಸ್ ಕಂದಕಕ್ಕೆ ಉರುಳಿದೆ. ಬಸ್ ಬೀಳುತ್ತಿದ್ದಂತೆಯೇ ಜೋರಾಗಿ ಶಬ್ಧ ಕೇಳಿ ಬಂದಿದ್ದು, ಗಾಬರಿಗೊಂಡ ಗುಡೇಕೋಟೆ ಜನರು ಬಸ್ ಇದ್ದಲ್ಲಿ ಒಡೋಡಿ ಬಂದು ಪ್ರಾಣಾಪಾಯದಲ್ಲಿದ್ದ ಪ್ರಯಾಣಿಕರ ರಕ್ಷಣೆಗೆ ಮುಂದಾಗಿದ್ದಾರೆ. ಇನ್ನೂ ಬಸ್ನ ಒಂದು ಭಾಗ ನೆಲ ಕಚ್ಚಿದ್ದು, ಆ ಬದಿಯಲ್ಲಿ ಕುಳಿತಿದ್ದ ಪ್ರಯಾಣಿಕರಿಗೆ ಏನಾಗಿದೆ ಎಂಬ ಮಾಹಿತಿ ಇನ್ನೂ ತಿಳಿದುಬಂದಿಲ್ಲ.
ಪೊಲೀಸ್ ಮೂಲಗಳ ಪ್ರಕಾರ ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಯಾವುದೇ ಸಾವು, ನೋವು ಸಂಭವಿಸಿಲ್ಲ. ಇನ್ನೂ ಮೂರ್ನಾಲ್ಕು ಮಂದಿ ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿದ್ದು, ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.