ಬಳ್ಳಾರಿ: ತುರ್ತು ನಿಗಾ ಘಟಕದಲ್ಲಿ ವೆಂಟಿಲೇಟರ್ ಸಹಾಯವಿಲ್ಲದೆ ಬದುಕಲಾರದ ಸ್ಥಿತಿಯಲ್ಲಿದ್ದ ವ್ಯಕ್ತಿವೋರ್ವ ತನ್ನ ಎರಡೂ ಕಣ್ಣುಗಳನ್ನು ದಾನಮಾಡಿ ಮಾನವೀಯತೆ ಮೆರೆದಿದ್ದಾರೆ.
![A person donates eyes](https://etvbharatimages.akamaized.net/etvbharat/prod-images/kn-bly-1-eye-donate-in-vims-death-ravi-7203310_29122019104952_2912f_1577596792_334.jpg)
ಬಳ್ಳಾರಿ ನಗರದ ಚಲುವಾದಿ ಬೀದಿ ನಿವಾಸಿ ರವಿ ಚಲವಾದಿ (62) ಎಂಬುವರು ಸಾವಿನಲ್ಲೂ ತಮ್ಮ ಎರಡೂ ಕಣ್ಣುಗಳನ್ನು ವಿಮ್ಸ್ನ ನಿತ್ಯಜ್ಯೋತಿ ನೇತ್ರದಾನ ಸಂಸ್ಥೆಗೆ ದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ. ಕಳೆದ ಕೆಲ ದಿನಗಳಿಂದ ಮೆದುಳು ಸೋಂಕಿನ ಕಾಯಿಲೆಯಿಂದ ಬಳಲುತ್ತಿದ್ದ ಅವರು ಇಂದು ಕೊನೆಯುಸಿರೆಳಿದಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ವಿಮ್ಸ್ನ ನಿತ್ಯಜ್ಯೋತಿ ನೇತ್ರದಾನ ಸಂಸ್ಥೆಯಲ್ಲಿ ನೇತ್ರದಾನ ಮಾಡಿ ಇತರರಿಗೆ ಮಾದರಿಯಾಗಿದ್ದಾರೆ.
ಮೃತರು ಪತ್ನಿ, ಪುತ್ರ, ಪುತ್ರಿ ಹಾಗೂ ಮೊಮ್ಮಕ್ಕಳು, ಅಳಿಯ, ಜಿಲ್ಲಾ ವರದಿಗಾರ ವೆಂಕೋಬಿ ಸಂಗನಕಲ್ಲು ಸೇರಿದಂತೆ ಇನ್ನಿತರೆ ಸಂಬಂಧಿಕರನ್ನು ಅಗಲಿದ್ದಾರೆ.