ಬಳ್ಳಾರಿ: ನಗರದ ಹೊರವಲಯದಲ್ಲಿರುವ ಕುವೆಂಪು ನಗರದ ಹಿಂಭಾಗದಲ್ಲಿ ಹಾದು ಹೋಗಿರುವ ತುಂಗಭದ್ರಾ ಬಲದಂಡೆ ಕಾಲುವೆಯಲ್ಲಿ ಟಾಟಾ ಏಸ್ ತೊಳೆಯಲು ಹೋದ ವ್ಯಕ್ತಿ ವಾಹನ ಸಮೇತ ಕಾಲು ಜಾರಿ ಕಾಲುವೆಯಲ್ಲಿ ಬಿದ್ದು ಸಾವನ್ನಪ್ಪಿದ್ದಾನೆ.
ನಗರದ ಕೌಲ್ ಬಜಾರ್ ನಿವಾಸಿ ಅಹಮ್ಮದ್ ( 68 ವರ್ಷ) ಸಾವನ್ನಪ್ಪಿರುವ ವ್ಯಕ್ತಿ. ಇನ್ನು ಸ್ಥಳಕ್ಕೆ ಅಗ್ನಿಶಾಮಕ ದಳದ ಅಧಿಕಾರಿಗಳು ಮತ್ತು ಸಿಬ್ಬಂದಿ ಆಗಮಿಸಿದ್ದು, ಕಾರ್ಯಾಚರಣೆ ನಡೆಸಿ ಟಾಟಾ ಏಸ್ ಮತ್ತು ವ್ಯಕ್ತಿಯ ಮೃತದೇಹವನ್ನು ಹೊರ ತೆಗೆದಿದ್ದಾರೆ.