ಬಳ್ಳಾರಿ: ದೇಶದ ಅತಿ ದೊಡ್ಡ ಉಕ್ಕು ಉತ್ಪಾದನಾ ಕಂಪನಿ ಜಿಂದಾಲ್ ಕಾರ್ಖಾನೆಯಲ್ಲಿ ನಷ್ಟದ ನೆಪ ಹೇಳಿ ಕಾರ್ಮಿಕರನ್ನು ಕೆಲಸದಿಂದ ತೆಗೆದು ಹಾಕಲಾಗುತ್ತಿದ್ದು, ನನಗೆ ನ್ಯಾಯಾ ಬೇಕು ಅಂತಾ ಕಾರ್ಮಿಕನೊಬ್ಬ ಏಕಾಂಗಿಯಾಗಿ ಹೋರಾಟ ಮಾಡುತ್ತಿದ್ದಾನೆ.
ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಜಿಂದಾಲ್ನಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡಿದ ಕಾರಣ ರಾಜ್ಯದಲ್ಲಿಯೇ ಸದ್ದು ಮಾಡಿತ್ತು. ಈಗ ಕಾರ್ಮಿಕರನ್ನು ಕೆಲಸದಿಂದ ಕೈಬಿಡುತ್ತಿದೆ. ಸಾವಿರಾರು ನೌಕರರ ಕೆಲಸಕ್ಕೆ ಕುತ್ತು ತಂದಿದೆ. ಇದರಿಂದ ಕಾರ್ಮಿಕರು ಆಕ್ರೋಶಗೊಂಡು ಪ್ರತಿಭಟನೆಗೆ ಇಳಿದಿದ್ದಾರೆ.
ಇಂದು ತನ್ನ ಕೆಲಸ ಕಳೆದುಕೊಂಡ ಕಾರ್ಮಿಕನೊಬ್ಬ ನನಗೆ ನ್ಯಾಯಾ ಕೊಡಿಸಿ ಅಂತಾ ಜಿಂದಾಲ್ ಮುಖ್ಯದ್ವಾರದ ಬಳಿ ಏಕಾಂಗಿಯಾಗಿ ಪ್ರತಿಭಟನೆ ಮಾಡುತ್ತಿದ್ದಾನೆ. ಜಿಂದಾಲ್ ಕಾರ್ಖಾನೆಯಿಂದ ಏಕಾ ಏಕಿ ನೌಕರರನ್ನು ಕಿಕ್ ಔಟ್ ಮಾಡಲಾಗುತ್ತಿದೆ. ನಷ್ಟದ ನೆಪ, ಕೆಲಸದಲ್ಲಿ ತೃಪ್ತಿಯಿಲ್ಲ ಹಾಗೂ 50 ವರ್ಷ ಮೇಲ್ಪಟ್ಟ ನೌಕರರನ್ನು ಕಾರಣ ಹೇಳದೆ ಕೆಲಸದಿಂದ ತೆಗೆದು ಹಾಕುತ್ತಿದೆ ಎನ್ನಲಾಗಿದೆ.
ಕಿಚಡಿ ಪ್ರಕಾಶ್ ಎಂಬ ಜಿಂದಾಲ್ ನೌಕರ ಕಳೆದ 5 ವರ್ಷಗಳಿಂದ ಕಾರ್ಖಾನೆಯಲ್ಲಿ ಜೆಇ ಆಗಿ ಕೆಲಸ ಮಾಡುತ್ತಿದ್ದಾನೆ. ಏಕಾ ಏಕಿ ಕೆಲಸದಿಂದ ಕೈಬಿಟ್ಟಿರುವುದರಿಂದ ಇಂದು ಧರಣಿ ಕುಳಿತು ನ್ಯಾಯಾ ಕೇಳುತ್ತಿದ್ದಾನೆ. ಈಗಾಗಲೆ ಸ್ಥಳಕ್ಕೆ ಪೊಲೀಸರು ಮತ್ತು ಜಿಂದಾಲ್ ಸಿಬ್ಬಂದಿ ಆಗಮಿಸಿದ್ದು, ಧರಣಿ ಕೈಬಿಡುವಂತೆ ಮನವಿ ಮಾಡಿದ್ದಾರೆ.