ETV Bharat / state

ಹೊಸಪೇಟೆ: ಮೊಹರಂ ಪ್ರಯುಕ್ತ ಬೆಂಕಿ ಕೆಂಡದಿಂದ ಸ್ನಾನ ಮಾಡಿದ ಭಕ್ತ ಸಮೂಹ - A devotees bathed in fire at hospet

ತಮ್ಮ ಇಷ್ಟಾರ್ಥ ಸಿದ್ಧಿಯಾಗುತ್ತದೆ ಎಂಬ ನಂಬಿಕೆಯಿಂದ ಮೊಹರಂ ಹಬ್ಬದ ಪ್ರಯುಕ್ತ ಭಕ್ತರು ಕೆಂಡದ ಸ್ನಾನ ಮಾಡಿದರು.

fire
author img

By

Published : Aug 20, 2021, 11:08 AM IST

Updated : Aug 20, 2021, 1:06 PM IST

ಹೊಸಪೇಟೆ (ವಿಜಯನಗರ): ಮೊಹರಂ ಹಬ್ಬದ ಪ್ರಯುಕ್ತ ಭಕ್ತರು ಕೆಂಡದ ಸ್ನಾನ ಮಾಡಿದ ಘಟನೆ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ನಾಗತಿ ಬಸಾಪುರ ಗ್ರಾಮದಲ್ಲಿ ನಡೆದಿದೆ.

ಬಸಾಪುರ ಗ್ರಾಮದ ಫಕೀರಸ್ವಾಮಿ ದರ್ಗಾದ ಮುಂದೆ ಪ್ರತಿ ವರ್ಷ ಮೊಹರಂ ಪ್ರಯುಕ್ತ ಗ್ರಾಮಸ್ಥರು ಈ ಆಚರಣೆಯನ್ನು ನಡೆಸಿಕೊಂಡು ಬಂದಿದ್ದಾರೆ. ಮೊಹರಂ ಕತ್ತಲ ರಾತ್ರಿಯಂದು ಕೆಂಡದಿಂದ ಸ್ನಾನ ಮಾಡಲು ಭಕ್ತರು ತಲೆ ಮೇಲೆ ಬಟ್ಟೆ ಹಾಕಿಕೊಂಡು ಸಾಲುಗಟ್ಟಿ ಕುಳಿತುಕೊಳ್ಳುತ್ತಾರೆ. ಬಳಿಕ ಒಬ್ಬ ವ್ಯಕ್ತಿ ಕೆಂಡವನ್ನು ಭಕ್ತರ ತಲೆಮೇಲೆ ಸುರಿಯುತ್ತಾನೆ. ನಂತರ ಹಿಂದೆ ನಿಂತ ಜನರು ಭಕ್ತರ ಮೇಲೆ ನೀರು ಎರಚುತ್ತಾರೆ. ಇದು ಮೊದಲಿನಿಂದ ನಡೆದುಕೊಂಡ ಬಂದ ಪದ್ಧತಿಯಂತೆ.

ನಾಗತಿ ಬಸಾಪುರ ಗ್ರಾಮದಲ್ಲಿ ಕೆಂಡದ ಸ್ನಾನ ಮಾಡಿದ ಭಕ್ತರು

ಹೀಗೆ ಕೆಂಡವನ್ನು ಮೈ ಮೇಲೆ ಹಾಕಿಸಿಕೊಂಡರೆ ತಮ್ಮ ಇಷ್ಟಾರ್ಥ ಸಿದ್ಧಿಯಾಗುತ್ತದೆ ಎಂಬ ನಂಬಿಕೆ ಭಕ್ತರದ್ದು. ಈ ಕೆಂಡದ ಸ್ನಾನದಲ್ಲಿ ಭಾಗಿಯಾಗಲು ವಿಜಯನಗರ, ದಾವಣಗೆರೆ ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಿಂದ ಭಕ್ತರು ಆಗಮಿಸಿದ್ದಾರೆ. ಆದರೆ ಸ್ವಲ್ಪ ಎಚ್ಚರ ತಪ್ಪಿದ್ರೂ ಅಪಾಯ ಕಟ್ಟಿಟ್ಟ ಬುತ್ತಿ.

Last Updated : Aug 20, 2021, 1:06 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.