ETV Bharat / state

ಮಳೆಯಿಂದಾಗಿ ಹೂವಿನಹಡಗಲಿಯಲ್ಲಿ 90ಕ್ಕೂ ಹೆಚ್ಚು ಮನೆಗಳಿಗೆ ಹಾನಿ!

ಸುರಿಯುತ್ತಿರುವ ವಿಪರೀತ ಮಳೆಯಿಂದಾಗಿ‌ ಹೂವಿನಹಡಗಲಿ ತಾಲೂಕಿನಾದ್ಯಂತ ಹಲವು ಗ್ರಾಮಗಳಲ್ಲಿ 90ಕ್ಕೂ ಅಧಿಕ ಮನೆಗಳ ತಡೆಗೋಡೆ, ಮೇಲ್ಛಾವಣಿಯ ಕುಸಿತ ಕಂಡಿವೆ.

90 homes collapse in huvinahadagali
author img

By

Published : Aug 10, 2019, 4:54 AM IST

ಬಳ್ಳಾರಿ: ಜಿಲ್ಲೆಯ ಹೂವಿನಹಡಗಲಿ ತಾಲೂಕಿನಾದ್ಯಂತ ಸುರಿದ ವಿಪರೀತ ಮಳೆಯಿಂದಾಗಿ‌ ಹಲವು ಗ್ರಾಮಗಳಲ್ಲಿ 90ಕ್ಕೂ ಅಧಿಕ ಮನೆಗಳ ತಡೆಗೋಡೆ, ಮೇಲ್ಛಾವಣಿಯ ಕುಸಿತ ಕಂಡಿದ್ದು, ದುರದೃಷ್ಟಾವಶಾತ್​ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಅಲ್ಲದೆ, ಹೊಲ, ಗದ್ದೆಗಳು ಮಳೆ ನೀರಿನಿಂದ ಜಲಾವೃತವಾಗಿದೆ.

ಚಿಗುರೊಡೆಯುವ ಮುನ್ನವೇ ಬೆಳೆಗಳು ನೆಲಕಚ್ಚಿವೆ. ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆನಷ್ಟ ಉಂಟಾಗಿದೆ ಎಂದು ಕೃಷಿ‌‌ ಇಲಾಖೆ ಅಂದಾಜಿಸಿದೆ. ಇಲ್ಲಿ ಬರಗಾಲದಲ್ಲಿ ಸುರಿಯುತ್ತಿದ್ದ ತುಂತುರು ಮಳೆಯ ನೀರಿನ ತೇವಾಂಶದಲ್ಲೇ ನಾನಾ ಬೆಳೆಗಳನ್ನು ಬೆಳೆಯಲಾಗುತ್ತಿತ್ತು. ಈಗ ವಿಪರೀತ ಮಳೆಯಿಂದಾಗಿ ಬೆಳೆನಷ್ಟ ಉಂಟಾಗಿರುವುದರಿಂದ ರೈತರ ಮೊಗದಲಿ ಆತಂಕದ ಸೂತಕದ ಛಾಯೆ ಮಡುಗಟ್ಟಿದೆ.

90 ಮನೆಗಳಿಗೆ ಹಾನಿ: ತಾಲೂಕಿನ ಕುರುವತ್ತಿಯಲ್ಲಿ 25 ಮನೆಗಳು ಸೇರಿದಂತೆ ಹಿರೇಹಡಗಲಿ ಹೋಬಳಿಯಲ್ಲಿ 60, ಹಡಗಲಿ ಹೋಬಳಿಯಲ್ಲಿ 35 ಮನೆಗಳು ಸೇರಿದಂತೆ 90ಕ್ಕೂ ಅಧಿಕ ಮನೆಗಳು ಕುಸಿತಗೊಂಡಿವೆ. ಜನ, ಜಾನುವಾರುಗಳಿಗೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

Intro:ಬಿಎಸ್ ವೈ ಸಿಎಂ ಆದಾಗೆಲ್ಲಾ ಬೆಂಬಿಡದ ಈ ಪ್ರವಾಹದ ಭೀತಿ
ವಿಪರೀತ ಮಳೆಯಿಂದಾಗಿ ಹಡಗಲಿ ತಾಲೂಕಿನಾದ್ಯಂತ 98 ಮನೆಗಳಿಗೆ ಹಾನಿ!
ಬಳ್ಳಾರಿ: ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನಾದ್ಯಂತ ಸುರಿದ ವಿಪರೀತ ಮಳೆಯಿಂದಾಗಿ‌ ನಾನಾ ಗ್ರಾಮಗಳ ಅಂದಾಜು 98ಕ್ಕೂ ಅಧಿಕ ಮನೆಗಳ ತಡೆಗೋಡೆ, ಮೇಲ್ಛಾವಣೆಯ ಕುಸಿತ ಕಂಡಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಹೇಳಲಾಗುತ್ತದೆ.
ಈ ಹೂವಿನ‌ ಹಡಗಲಿ ತಾಲೂಕಿನಲ್ಲಿ ನಿನ್ನೆಯ ದಿನ ಹಾಗೂ ಇವತ್ತಿನ ದಿನವೂ ಕೂಡ ಮಳೆಯು ವಿಪರೀತವಾಗಿ ಸುರಿದಿದ್ದು, ಹೊಲ, ಗದ್ದೆಗಳು ಮಳೆಯ ನೀರಿನಿಂದ ಜಲಾವೃತಗೊಂಡಿರುವ ದೃಶ್ಯವಂತೂ ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ.
ವಿಪರೀತ ಮಳೆ ಸುರಿದ ಪರಿಣಾಮ ಜನಜೀವನ ಅಸ್ತವ್ಯಸ್ತ ಗೊಂಡಿದೆ. ರೈತಾಪಿವರ್ಗ ಮಾತ್ರ ಈ ಮಳೆಯಿಂದ ಅಪಾರ ಪ್ರಮಾಣದ ಬೆಳೆನಷ್ಟವನ್ನು‌ ಅನುಭವಿಸುತ್ತದೆ. ಚಿಗುರೊಡೆ
ಯುವ ಮುನ್ನವೇ ನಾನಾ ಬೆಳೆಗಳು ಸಂಪೂರ್ಣ ನಾಶವಾಗಿವೆ. ಅದರಿಂದ ಲಕ್ಷಾಂತರ ರೂ.ಗಳ ಮೌಲ್ಯದ ಬೆಳೆನಷ್ಟ ಉಂಟಾಗಿರ ಬಹುದೆಂದು ಕೃಷಿ‌‌ ಇಲಾಖೆಯು ಅಂದಾಜಿಸಿದೆ.
ಬರಗಾಲದ ಹಿನ್ನಲೆ ಯಲ್ಲಿ ಮಳೆಯಾಶ್ರಿತ ಜಮೀನುಗಳಲ್ಲಿ ಆಗೊಮ್ಮೆ, ಹೀಗೊಮ್ಮೆ ಸುರಿದ ಜಿಟಿಜಿಟಿ ಹಾಗೂ ತುಂತುರು ಮಳೆಯ ನೀರಿನ ತೇವಾಂಶ ದಲ್ಲೇ ನಾನಾ ಬೆಳೆಗಳನ್ನು ಬೆಳೆಯ ಲಾಗಿತ್ತಾದರೂ, ಅದು ಕೈಗೆಟುಕುವ ಮುನ್ನವೇ ವಿಪರೀತವಾಗಿ ಮಳೆಯಿಂದ ಜಲಾವೃತಗೊಂಡು ಸಂಪೂರ್ಣವಾಗಿ ಬೆಳೆನಷ್ಟ ಉಂಟಾಗಿರೋದು ರೈತರ ಮೊಗದಲಿ ಆತಂಕದ ಸೂತಕದ ಛಾಯೆ ಮಡುಗಟ್ಟಿದೆ. ಇದರಿಂದ ರೈತರು ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ ಎಂತಲೂ ಹೇಳಬಹುದು.
98 ಮನೆಗಳಿಗೆ ಹಾನಿ: ತಾಲೂಕಿನ ಕುರುವತ್ತಿಯಲ್ಲಿ 15 ಭಾಗಶಃ ಕುಸಿದರೆ, 10 ಕಚ್ಚಾ ಮನೆಗಳು ಸೇರಿದಂತೆ ಒಟ್ಟಾರೆಯಾಗಿ 25 ಮನೆಗಳಿಗೆ ಹಾನಿಯುಂಟಾಗಿದೆ. ಹರವಿಯಲ್ಲಿ 10 ಮನೆಗಳು ಭಾಗಶಃ ಕುಸಿದಿವೆ. ಹರವಿ ಸಿದ್ದಾಪುರ 3 ಭಾಗಶಃ ಲಿಂಗನಾಯ್ಕ
ನಹಳ್ಳಿಯಲ್ಲಿ 4, ಹಿರೆಬನ್ನಿ ಮಟ್ಟಿಯಲ್ಲಿ 5, ನಡವಿನಹಳ್ಳಿ 2 (ತೀವ್ರ ಕಚ್ಚಾಮನೆ), ದಾಸನಹಳ್ಳಿಯಲ್ಲಿ 3, ಹೊಳಲು ಗ್ರಾಮದಲ್ಲಿ 3,
ಮಕರಬ್ಬಿಯಲ್ಲಿ 5, ಹಿರೇಹಡಗಲಿ ಹೋಬಳಿಯಲ್ಲಿ 60, ವರಕನ ಹಳ್ಳಿಯಲ್ಲಿ 1, ಉತ್ತಂಗಿಯಲ್ಲಿ 2, ಇಟಗಿಯಲ್ಲಿ 3, ಮಾಗಳದಲ್ಲಿ 2, ನಾಗತಿ ಬಸಾಪುರದಲ್ಲಿ 6, ನವಲಿಯಲ್ಲಿ 4, ಹಿರೇಕೊಳಚೆಯಲ್ಲಿ 4, ಕೊಂಬಲಿಯಲ್ಲಿ 3, ಕೆ.ಅಯ್ಯನಹಳ್ಳಿಯಲ್ಲಿ 2, ಬೀರಬ್ಬಿಯಲ್ಲಿ 6, ಕಾಲ್ವಿಯಲ್ಲಿ 2, ದಾಸರಹಳ್ಳಿಯಲ್ಲಿ 6, ಹಡಗಲಿ ಹೋಬಳಿಯಲ್ಲಿ 35 ಮನೆಗಳು ಸೇರಿದಂತೆ ಒಟ್ಟಾರೆಯಾಗಿ ಹಡಗಲಿ ತಾಲೂಕಿನಲ್ಲಿ ಅಂದಾಜು 98 ಕ್ಕೂ ಅಧಿಕ ಮನೆಗಳಿಗೆ ಹಾ‌ನಿಯುಂಟಾಗಿರುವ ಕುರಿತು ವರದಿಯಾಗಿದೆ. ಜನ, ಜಾನುವಾರುಗಳಿಗೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲದಿರುವುದು ತಹಸೀಲ್ದಾರ್ ರವರ ವರದಿಯಿಂದ ಖಾತರಿಯಾಗಿದೆ.
Body:ಸಿಎಂ ಬಿಎಸ್ ವೈಗೂ ಪ್ರವಾಹದ ಭೀತಿಗೂ ಸಾಮ್ಯತೆ ಇದೆಯಾ: ಬಿ.ಎಸ್.ಯಡಿಯೂರಪ್ಪನವ್ರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗಲೆಲ್ಲಾ ರಾಜ್ಯದಲ್ಲಿ ಭೀಕರ ಪ್ರವಾಹದ ಭೀತಿ ಎದುರಾಗುತ್ತದೆ. ಈ ಪ್ರವಾಹಕ್ಕೂ ಬಿಎಸ್ ವೈ ಸಿಎಂ ಆಗಿ ಅಧಿಕಾರವಹಿಸಿಕೊಂಡಿದ್ದಕ್ಕೂ ಏನೋ ಒಂಥರದ ಸಾಮ್ಯತೆ ಇರೋ ಹಾಗೆ ಕಾಣಿಸುತ್ತೆ ಎಂಬ ರಾಜಕೀಯ ಲೆಕ್ಕಾಚಾರ ಶುರುವಾಗಿದೆ.
ಹಾಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನವ್ರು ಈಗಾಗಲೇ ನಾಲ್ಕನೇ ಬಾರಿಗೂ ಈ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅಧಿಕಾರವಹಿಸಿಕೊಂಡಾಗಿನಿಂದಲೂ ಸಿಎಂ ಬಿಎಸ್ ವೈ ಅವರು ಹೆಚ್ಚು ಓಡಾಡಿದ್ದು ಈ ಪ್ರವಾಹ ಪೀಡಿತ ಪ್ರದೇಶಗಳತ್ತ ಎಂಬುದು ಈಗ ಕಟುಸತ್ಯ. ಈ ಹಿಂದೆಯೂ ಕೂಡ ಬಿಎಸ್ ವೈ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸದ್ದಾಗಲೂ ಸಹ ಇಂಥದ್ದೇ ಸಮಸ್ಯೆಯನ್ನು ಎದುರಿಸುತ್ತಿದ್ದರು. ರಾಜ್ಯ ಹಾಗೂ ಹೊರರಾಜ್ಯದ ಪ್ರಮುಖ ದೇಗುಲಗಳಲ್ಲಿ ವಿಶೇಷಪೂಜೆ ಪೂರೈಸಿ ಬಂದರೂ ಕೂಡ ಈ ಜಲಪ್ರಳಯದ ಭೀತಿ ಮಾತ್ರ ಸಿಎಂ
ಬಿಎಸ್ ವೈ ಅವರಿಂದ ದೂರಾಗಲಿಲ್ಲವಲ್ಲ ಎಂಬುದು ಈ ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿದೆ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_5_HDL_HEAVY_RAIN_HOUSES_DAMAGE_7203310

KN_BLY_5a_HDL_HEAVY_RAIN_HOUSES_DAMAGE_7203310

KN_BLY_5b_HDL_HEAVY_RAIN_HOUSES_DAMAGE_7203310

KN_BLY_5c_HDL_HEAVY_RAIN_HOUSES_DAMAGE_7203310
ETV Bharat Logo

Copyright © 2024 Ushodaya Enterprises Pvt. Ltd., All Rights Reserved.