ETV Bharat / state

ಜ್ಞಾನವನ್ನು ಸಮಾಜದ ಒಳಿತಿಗೆ ಬಳಸಿ ; ಪ್ರೊ. ರಜನೀಶ್ ಜೈನ್

ಓರ್ವ ಸಾಮಾನ್ಯ ವ್ಯಕ್ತಿ ತನ್ನ ಜೀವನದ ಸವಾಲುಗಳನ್ನು ಎದುರಿಸುವ ಸಾಮರ್ಥ್ಯ ಪಡೆದುಕೊಳ್ಳುವ, ಚಾರಿತ್ರ್ಯದ ದೃಢತ್ವ ಹೊರೆಸೆಳೆಯುವ, ತನ್ನನ್ನು ತಾನು ಪರಿಪೂರ್ಣ ವ್ಯಕ್ತಿಯಾಗಿ ಸ್ವಯಂ ನಿರ್ಮಿಸಿಕೊಳ್ಳಲು ಬೇಕಾಗುವ ಮಹತ್ವಾಕಾಂಕ್ಷೆ ಮತ್ತು ಧೈರ್ಯ ಇವೆಲ್ಲವುಗಳನ್ನು ಒದಗಿಸುವ ಶಿಕ್ಷಣ ವ್ಯವಸ್ಥೆಯನ್ನು ಪಡೆಯುವ ಅಗತ್ಯತೆ ನಮಗಿದೆ..

convocation program
ವಿಜಯನಗರ ಶ್ರೀ ಕೃಷ್ಣ ದೇವರಾಯ ವಿಶ್ವವಿದ್ಯಾಲಯದ ಘಟಿಕೋತ್ಸವ
author img

By

Published : Dec 30, 2020, 6:49 AM IST

ಬಳ್ಳಾರಿ : ವಿಶ್ವವಿದ್ಯಾಲಯದಲ್ಲಿ ಗಳಿಸಿದ ಜ್ಞಾನವನ್ನು ಮಾನವೀಯತೆಯೊಂದಿಗೆ ಬೆಸೆದು ನಮ್ಮ ರಾಷ್ಟ್ರದ ಅಭಿವೃದ್ಧಿಗೆ ಮತ್ತು ಸಮಾಜದ ಒಳಿತಿಗೆ ಗಣನೀಯ ಕೊಡುಗೆ ನೀಡಲು ಮುಂದಾಗಬೇಕು ಎಂದು ವಿಜಯನಗರ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯದ ಧನಸಹಾಯ ಆಯೋಗದ ಕಾರ್ಯದರ್ಶಿಗಳಾದ ಪ್ರೊ. ರಜನೀಶ್ ಜೈನ್ ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

doctorate for s guru acharya
ಎಸ್. ಗುರು ಆಚಾರ್ಯ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ

ವಿಜಯನಗರ ಶ್ರೀ ಕೃಷ್ಣ ದೇವರಾಯ ವಿಶ್ವವಿದ್ಯಾಲಯದಲ್ಲಿ ಏರ್ಪಡಿಸಿದ್ದ ವಿವಿಯ 8ನೇ ಘಟಿಕೋತ್ಸವದಲ್ಲಿ ಆನ್‍ಲೈನ್ ಮೂಲಕ ಘಟಿಕೋತ್ಸವ ಭಾಷಣ ಮಾಡಿದರು. ಓರ್ವ ಸಾಮಾನ್ಯ ವ್ಯಕ್ತಿ ತನ್ನ ಜೀವನದ ಸವಾಲುಗಳನ್ನು ಎದುರಿಸುವ ಸಾಮರ್ಥ್ಯ ಪಡೆದುಕೊಳ್ಳುವ, ಚಾರಿತ್ರ್ಯದ ದೃಢತ್ವ ಹೊರೆಸೆಳೆಯುವ, ತನ್ನನ್ನು ತಾನು ಪರಿಪೂರ್ಣ ವ್ಯಕ್ತಿಯಾಗಿ ಸ್ವಯಂ ನಿರ್ಮಿಸಿಕೊಳ್ಳಲು ಬೇಕಾಗುವ ಮಹತ್ವಾಕಾಂಕ್ಷೆ ಮತ್ತು ಧೈರ್ಯ ಇವೆಲ್ಲವುಗಳನ್ನು ಒದಗಿಸುವ ಶಿಕ್ಷಣ ವ್ಯವಸ್ಥೆಯನ್ನು ಪಡೆಯುವ ಅಗತ್ಯತೆ ನಮಗಿದೆ ಎಂದರು.

ವಿದ್ಯಾರ್ಥಿಗಳೇ ತಮ್ಮ ಮುಂಬರುವ ಜೀವನವು ಹೆಚ್ಚಿನ ಉತ್ಸುಕತೆಯಿಂದ, ಅನ್ವೇಷಣೆಯಿಂದ ಕೂಡಿರುತ್ತದೆ. ಬಹಳಷ್ಟು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಹಾಗೆಯೇ ಅವಕಾಶಗಳನ್ನು ಉಪಯೋಗಿಸಿಕೊಳ್ಳಬಹುದಾಗಿರುತ್ತದೆ.

ನೀವು ತಮ್ಮ ಜೀವನ ಶೈಲಿಯಲ್ಲಿ ಭೌತಿಕ, ಮಾನಸಿಕ ಸಮತೋಲನ ಕಾಪಾಡಿಕೊಳ್ಳುತ್ತಾ ಸಂಬಂಧಗಳನ್ನು ಗೌರವಿಸುತ್ತಾ ತಮ್ಮ ಕಾರ್ಯ ವೈಖರಿಗಳನ್ನು ಹೆಚ್ಚು ಹೆಚ್ಚು ಫಲದಾಯಕವನ್ನಾಗಿ ಮಾಡಿಕೊಳ್ಳಬೇಕು. ಅದಕ್ಕಾಗಿ ಸತ್ಯ, ಸಮರ್ಥತೆ, ಸಂಕಲ್ಪ, ಸಂಯಮ ಮತ್ತು ಸಂವೇದನಾ ಶೀಲತೆ ಎಂಬ ಪ್ರಮುಖ ಮಾರ್ಗದರ್ಶಿ ಲಕ್ಷಣಗಳನ್ನು ಅಳವಡಿಸಿಕೊಳ್ಳಬೇಕು ಎಂದರು.

students
ವಿದ್ಯಾರ್ಥಿ ಸಮೂಹ

ಈ ಸುದ್ದಿಯನ್ನೂ ಓದಿ: ದೈವ ಹಾಕಿದ ನೈವೇದ್ಯ ಸ್ವೀಕರಿಸಲು ಬಾರದ ಮೀನುಗಳು.. ಕಾರಣವೇನು.?

ಈ ಘಟಿಕೋತ್ಸವದಲ್ಲಿ 8,065 ವಿದ್ಯಾರ್ಥಿಗಳು ಸ್ನಾತಕ ಪದವಿ, 1,585 ವಿದ್ಯಾರ್ಥಿಗಳ ಸ್ನಾತಕೋತ್ತರ ಪದವಿ ಹಾಗೂ 43 ವಿದ್ಯಾರ್ಥಿಗಳಿಗೆ ಡಾಕ್ಟರೇಟ್ ಪದವಿ ಸೇರಿದಂತೆ ವಿಶ್ವವಿದ್ಯಾಲಯವು 9,693 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಇದೇ ಸಂದರ್ಭದಲ್ಲಿ ಮಂತ್ರಾಲಯದ ಎಸ್. ಗುರು ಆಚಾರ್ಯ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.