ಬಳ್ಳಾರಿ: ನಗರದ ಹೊರವಲಯದ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಇಂದು 8ನೇ ಘಟಿಕೋತ್ಸವ ನಡೆಯಿತು.
ಈ ಸಮಯದಲ್ಲಿ ರೈತ, ಕೃಷಿ, ಕಾರ್ಮಿಕ, ಸೂಪರ್ವೈಸರ್ ಹಾಗೂ ಶಿಕ್ಷಕರ ಮಕ್ಕಳು ಚಿನ್ನದ ಪದಕಗಳನ್ನು ಪಡೆದು ಹರ್ಷ ವ್ಯಕ್ತಪಡಿಸಿದರು. ಪೂರ್ವ ಸಿದ್ಧತೆ, ಶಿಸ್ತು, ಸಮಯ ಪಾಲನೆಯಿಂದ ವಿದ್ಯಾಭ್ಯಾಸ ಮಾಡಿ, ತಂದೆ-ತಾಯಿಗಳ ಪ್ರೋತ್ಸಾಹ ಹಾಗೂ ಗುರುಗಳ ಬೋಧನೆಯಿಂದ ಪ್ರಥಮ ರ್ಯಾಂಕ್ ಪಡೆಯುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಪದಕ ವಿಜೇತ ವಿದ್ಯಾರ್ಥಿಗಳು ಹೇಳಿಕೊಂಡರು. ಕೊರೊನಾ ಭೀತಿಯಿಂದಾಗಿ ನಮ್ಮ ಜೊತೆಗೆ ತಂದೆ-ತಾಯಿ, ಪೋಷಕರಿಗೆ ಅನುಮತಿ ಇಲ್ಲದೆ ಇರುವುದು ಬೇಸರ ತರಿಸಿದೆ ಎಂದರು.
ಕಾರ್ಯಕ್ರಮದಲ್ಲಿ ವಿವಿಯ ಕುಲಪತಿ ಪ್ರೊ. ಸಿದ್ದು ಪಿ. ಅಲಗೂರ, ಕುಲಸಚಿವೆ ಪ್ರೊ. ತುಳಸಿ ಮಾಲ, ಮೌಲ್ಯಮಾಪನ ಕುಲಸಚಿವ ಪ್ರೊ. ಶಶಿಕಾಂತ್ ಎಸ್. ಉಡಿಕೇರಿ ಚಿನ್ನದ ಪದಕಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಿದರು.