ETV Bharat / state

ಗಣಿನಾಡಲ್ಲಿ ಜಿಲ್ಲಾಧಿಕಾರಿಯಿಂದ ಧ್ವಜಾರೋಹಣ...

ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನ ಮತ್ತು ಕೊಡುಗೆಗಳನ್ನು ನೆನಪಿಸಿಕೊಳ್ಳುವುದು ಹಾಗೂ ಅವರಿಗೆ ನಮ್ಮ ಕೃತಜ್ಞತೆ ಗಳನ್ನು ಸಲ್ಲಿಸುವುದು ಅಭಿಮಾನದ ಸಂಗತಿಯಾಗಿದೆ ಎಂದು ಬಳ್ಳಾರಿ ಡಿಸಿ ನಕುಲ್​ ಹೇಳಿದರು.

ಧ್ವಜಾರೋಹಣ
author img

By

Published : Aug 15, 2019, 1:16 PM IST

ಬಳ್ಳಾರಿ: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಇಂದು ಬೆಳಗ್ಗೆ 9 ಗಂಟೆಗೆ ಬಳ್ಳಾರಿ ಜಿಲ್ಲಾಧಿಕಾರಿ ಎಸ್‌.ಎಸ್‌.ನಕುಲ್‌ ಧ್ವಜಾರೋಹಣ ನೆರವೇರಿಸಿದರು.

ನಂತರ ಮಾತನಾಡಿದ ಅವರು. ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನ ಮತ್ತು ಕೊಡುಗೆಗಳನ್ನು ನೆನಪಿಸಿಕೊಂಡು ಕೃತಜ್ಞತೆ ಸಲ್ಲಿಸಬೇಕು. ಹೋರಾಟದಲ್ಲಿ ಭಾಗಿಯಾದವರಲ್ಲಿ ಅನೇಕರು ಇಂದು ನಮ್ಮೊಂದಿಗಿದ್ದಾರೆ. ಅನೇಕರು ನಮ್ಮನ್ನು ಅಗಲಿದ್ದಾರೆ ಅವರೆಲ್ಲರಿಗೂ ನಮ್ಮ ನಮನಗಳು ಎಂದರು. ಬಳ್ಳಾರಿಯು ಸ್ವಾತಂತ್ರ್ಯ ಹೋರಾಟದಲ್ಲಿ ಮೂಲಭೂತವಾಗಿ ಗಾಂಧಿವಾದದ ಸ್ವರೂಪ ಹೊಂದಿತ್ತು, ಅಹಿಂಸೆಯ ದಾರಿ ಹಿಡಿದಿತ್ತು ಎಂದು ನೆನಪಿಸಿದರು.

ಭ್ರಷ್ಟಾಚಾರ ರಹಿತ ಆಡಳಿತ: ಭ್ರಷ್ಟಾಚಾರ ರಹಿತ ಆಡಳಿತ ನಿರ್ಮಿಸಲು ನಾವೆಲ್ಲರೂ ಪಣತೊಡೋಣ. ಹಾಗೂ ಇನ್ನಿತರ ಜಿಲ್ಲೆಗಳಿಗೂ ಈ ಜಿಲ್ಲೆಯ ಆಡಳಿತದ ಕಾರ್ಯವೈಖರಿ ಮಾದರಿಯಾಗಬೇಕೆಂದರು. ವಿದ್ಯಾರ್ಥಿಗಳು ವಿವಿಧ ಬಗೆಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಶಾಸಕ ಸೋಮಶೇಖರ ರೆಡ್ಡಿ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು.

Intro:ಗಣಿನಾಡಲ್ಲಿ 73ರ ಸ್ವಾತಂತ್ರ್ಯ ದಿನಾಚರಣೆಗೆ ಜಿಲ್ಲಾಧಿಕಾರಿ ನಕುಲ್ ಅವರಿಂದ ಧ್ವಜಾರೋಹಣ.

Body:ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಇಂದು ಬೆಳಿಗ್ಗೆ 9 ಗಂಟೆಗೆ ಬಳ್ಳಾರಿ ಜಿಲ್ಲಾಧಿಕಾರಿ ನಕುಲ್ ಅವರು ಧ್ವಜಾರೋಹಣ ಮಾಡಿದರು. ನಂತರ ಮಾತನಾಡಿದ ಅವರು ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನ ಮತ್ತು ಕೊಡುಗೆಗಳನ್ನು ನೆನಪಿಸಿಕೊಳ್ಳುವುದು ಹಾಗೂ ಅವರಿಗೆ ನಮ್ಮ ಕೃತಜ್ಞತೆ ಗಳನ್ನು ಸಲ್ಲಿಸುವುದು ಅಭಿಮಾನದ ಸಂಗತಿಯಾಗುದೆ ಎಂದು ತಿಳಿಸಿದರು. ‌

ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ನೋವು, ಹಿಂಸೆ , ಅವಮಾನ ಗಳನ್ನು ಅನುಭವಿಸಿದ ಹಾಗೂ ಅಪಾರ ತ್ಯಾಗ ಮಾಡಿದ ಜನರಲ್ಲಿ ಅನೇಕರು ಇಂದು ನಮ್ಮೊಂದಿಗಿದ್ದಾರೆ ಅನೇಕರು ನಮ್ಮನ್ನು ಅಗಲಿದ್ದಾರೆ ಅವರೆಲ್ಲರಿಗೂ ನಮ್ಮ ನಮನಗಳು ಸಲ್ಲಬೇಕು ಎಂದು ತಿಳಿಸಿದರು ‌.

ಬಳ್ಳಾರಿ ಜಿಲ್ಲೆಯ ಸ್ವಾತಂತ್ರ್ಯ ಹೋರಾಟವು ಮೂಲಭೂತವಾಗಿ ಗಾಂಧಿವಾದ ಸ್ವರೂಪದಾಗಿತ್ತು. ಯಾವುದೇ ಹಿಂಸೆಗೆ ಅವಕಾಶ ನೀಡದಂತೆ, ಅಹಿಂಸಾವಾದವನ್ನು ಅನುಸರಿಸಿ ಹೋರಾಟ ನಡೆಸಲಾಯಿತು.

ನಗರದ ಶಾಲಾ ಕಾಲೇಜ್ ಗಳ 44 ತುಕಡಿಗಳು ಈ ಪಥಸಂಚಲದಲ್ಲಿ ಭಾಗವಹಿಸಿದವು. ತುಕಡಿಯ ನಾಯಕರಾಗಿ ಡಿವೈಎಸ್ಪಿ ಜಾವಿದ್ ಇನಾಂದರ್ ನಡೆಸಿದರು. ವಿದ್ಯಾರ್ಥಿಗಳು ವಿವಿಧ ಬಗೆಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

Conclusion:ಈಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸಿಇಒ ನಿತೀನ್ ಕುಮಾರ್, ಎಸ್.ಪಿ ಸಿ.ಕೆ ಬಾಬಾ, ವಿಧಾನ ಪರಿಷತ್ ಸದಸ್ಯ ಕೆ.ಸಿ ಕೊಂಡಯ್ಯ, ನಿಸಾರ್ ಅಹಮ್ಮದ್, ಶಾಸಕ ಸೋಮಶೇಖರ ರೆಡ್ಡಿ, ಸಂಸದ ವೈ.ದೇವೆಂದ್ರಪ್ಪ, ಜಿಲ್ಲಾ ಪಂಚಾಯತ್ ಅಧ್ಯಕ್ಷ ಭಾರತಿ ತಿಮ್ಮರೆಡ್ಡಿ, ಉಪಾಧ್ಯಕ್ಷ ದೀನಾ ಮಂಜುನಾಥ ಮತ್ತು ನೂರಾರು ಶಾಲಾ ಕಾಲೇಜ್ ಮಕ್ಕಳು ಹಾಗೂ ಪ್ರೇಕ್ಷಕರು ಹಾಜರಿದ್ದರು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.