ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಹೊಸದಾಗಿ 71 ಕೊರೊನಾ ಪಾಸಿಟಿವ್ ಕೇಸ್ಗಳು ಪತ್ತೆಯಾಗಿದ್ದು, ಇದರಿಂದ ಸೋಂಕಿತರ ಸಂಖ್ಯೆ 1343ಕ್ಕೆ ಏರಿಕೆಯಾಗಿದೆ.

ಜಿಲ್ಲೆಯಲ್ಲಿಂದು 71 ಮಂದಿಗೆ ಈ ಮಹಾಮಾರಿ ಕೊರೊನಾ ಸೋಂಕಿರೋದು ದೃಢಪಟ್ಟಿದೆ. ಈವರೆಗೆ ಅಂದಾಜು 479 ಮಂದಿ ಜಿಂದಾಲ್ ಸಮೂಹ ಸಂಸ್ಥೆಯ ಉಕ್ಕು ಕಾರ್ಖಾನೆ ನೌಕರರಿಗೆ ಸೋಂಕಿರೋದು ದೃಢಪಟ್ಟಿದೆ.

ಹೀಗಾಗಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1343ಕ್ಕೆ ಏರಿಕೆಯಾಗಿದ್ದು, 580 ಮಂದಿ ಗುಣಮುಖರಾಗಿದ್ದಾರೆ. 36 ಮಂದಿ ಸಾವನ್ನಪ್ಪಿದ್ದು, 727 ಸಕ್ರಿಯ ಪ್ರಕರಣಗಳಿವೆ.