ETV Bharat / state

ಬಳ್ಳಾರಿಯಲ್ಲಿ 43 ಮಂದಿ ವೈದ್ಯರಿಗೆ ಸೋಂಕು: ಜಿಲ್ಲಾ ಆರೋಗ್ಯ ಅಧಿಕಾರಿ ಮಾಹಿತಿ - ವೈದ್ಯರಿಗೆ ಕೊರೊನಾ ಸೋಂಕು

ಗಣಿ ಜಿಲ್ಲೆಯಲ್ಲಿ 43 ಮಂದಿ ವೈದ್ಯರಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಆರೋಗ್ಯಾಧಿಕಾರಿ ಡಾ.ಹೆಚ್.ಎಲ್.ಜನಾರ್ಧನ ತಿಳಿಸಿದ್ದಾರೆ. ಅಲ್ಲದೇ ಅವರಲ್ಲಿ ಮದ್ಯವಯಸ್ಕ ವೈದ್ಯರೇ ಹೆಚ್ಚಾಗಿದ್ದಾರೆ.

DHO Janardhana
ಡಿಹೆಚ್​ಒ ಜನಾರ್ಧನ
author img

By

Published : Jul 9, 2020, 10:30 AM IST

ಬಳ್ಳಾರಿ: ಜಿಲ್ಲೆಯಲ್ಲಿ ಈವರೆಗೆ ಅಂದಾಜು 108 ಮಂದಿ ಆರೋಗ್ಯ ಸೇವೆಯಲ್ಲಿ ತೊಡಗಿಕೊಂಡಿರುವ ವಾರಿಯರ್ಸ್​ಗಳಿಗೆ ಕೊರೊನಾ ಸೋಂಕು ಅಂಟಿದೆ. ಆ ಪೈಕಿ 43 ಮಂದಿ ಖಾಸಗಿ ಮತ್ತು ಸರ್ಕಾರಿ ವೈದ್ಯರೇ ಹೆಚ್ಚಿದ್ದಾರೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆರೋಗ್ಯಾಧಿಕಾರಿ ಡಾ. ಹೆಚ್. ಎಲ್. ಜನಾರ್ಧನ ತಿಳಿಸಿದ್ದಾರೆ.

ಬಳ್ಳಾರಿಯಲ್ಲಿ 43 ಮಂದಿ ವೈದ್ಯರಿಗೆ ಕೊರೊನಾ ಸೋಂಕು: ಡಿಹೆಚ್​ಒ ಜನಾರ್ಧನ

ಬಳ್ಳಾರಿಯ ಡಿಹೆಚ್‌ಒ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಖಾಸಗಿ ಆಸ್ಪತ್ರೆಯ 4 ಮಂದಿ ವೈದ್ಯರು ಸೇರಿದಂತೆ ಸರ್ಕಾರಿ ವೈದ್ಯರಿಗೂ ಕೂಡ ಸೋಂಕು ತಗುಲಿದೆ. ಅದರಲ್ಲಿ ಮದ್ಯವಯಸ್ಸಿನವರಿಗೆ ಹೆಚ್ಚಾಗಿ ಕಾಣಿಸಿಕೊಂಡಿದೆ. ಸ್ನಾತಕೋತ್ತರ ಪದವಿ ಸೋಂಕು ಕಾಣಿಸಿದೆ. ವೈದ್ಯರಲ್ಲೂ ಕೂಡ ಮಧುಮೇಹ (ಸಕ್ಕರೆ ಕಾಯಿಲೆ) ರಕ್ತ ದೊತ್ತಡ (ಬಿಪಿ) ಕಾಯಿಲೆಯಿಂದ ಬಳಲುತ್ತಿರುವವರೂ ಇದ್ದಾರೆ. ಈಗಾಗಲೇ ಅವರೆಲ್ಲರೂ ಕೂಡ ಗುಣಮುಖರಾಗಿದ್ದಾರೆ. ಅಲ್ಲದೇ, ಬಳ್ಳಾರಿಯ ವಿಮ್ಸ್ ಹಾಗೂ ಜಿಲ್ಲಾ ಕೋವಿಡ್ - 19 ಆಸ್ಪತ್ರೆಯ ಡಿ ಗ್ರೂಪ್ ನೌಕರರು, ಲ್ಯಾಬ್ ಟೆಕ್ನಿಷಿಯನ್ ಸೇರಿದಂತೆ ಇತರೆ ವಲಯದ ಸಿಬ್ಬಂದಿಗೂ ಕೂಡ ಕೊರೊನಾ ಸೋಂಕಿರೋದು ದೃಢಪಟ್ಟಿದೆ ಎಂದು ಅವರು ತಿಳಿಸಿದ್ದಾರೆ.
ಈಗಾಗಲೇ 53 ಕ್ಕೂ ಅಧಿಕ ಮಂದಿ ಗುಣಮುಖರಾದ ಹಿನ್ನೆಲೆಯಲ್ಲಿ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಅಂದಾಜು 30 ಕ್ಕೂ ಅಧಿಕ‌ ಮಂದಿಯನ್ನ ಐಸೊಲೇಷನ್​ನಲ್ಲಿ ಇರಿಸಲಾಗಿದೆ. ಅವರೆಲ್ಲರೂ ಕೂಡ ಗುಣಮುಖರಾಗುತ್ತಿದ್ದು, ಶೀಘ್ರವೇ ಬಿಡುಗಡೆಗೊಳಿಸಲು ಕ್ರಮ ವಹಿಸಲಾಗುವುದು ಎಂದರು.

ರೋಗ ನಿರೋಧಕ ಶಕ್ತಿ ಹೆಚ್ಚಿದ್ದರೆ ಕೊರೊನಾ ಸೋಂಕು ಹರಡುವಿಕೆಯ ಪ್ರಮಾಣ ಕಡಿಮೆ:

ಯಾರಲ್ಲಿ ಈ ರೋಗ ನಿರೋಧಕ ಶಕ್ತಿ ಹೆಚ್ಚಿರುತ್ತೆ, ಅಂಥವರಿಗೆ ಈ ಕೊರೊನಾ ಸೋಂಕು ಹರಡುವಿಕೆಯ ಪ್ರಮಾಣ ಕಇಮೆಡ ಇರುತ್ತೆ. ರೋಗ ನಿರೋಧಕ ಶಕ್ತಿ ಪ್ರಮಾಣ ಕಡಿಮೆ ಇದ್ದರೆ ಸೋಂಕಿನ ಗುಣಲಕ್ಷಣಗಳು ಹೆಚ್ಚಿರುತ್ತೆ. ಬಿಪಿ, ಶುಗರ್ ಕಾಯಿಲೆ ನಿಯಂತ್ರಣ ಇರದೇ ಇರುವವರ ಬಳಿಯೇ ಈ ಸೋಂಕು ಹೆಚ್ಚಾಗಿ ಸುಳಿಯುತ್ತೆ. ಅಲ್ಲದೇ, ಉಸಿರಾಟದ ತೊಂದರೆ, ಕಿಡ್ನಿ ಸಮಸ್ಯೆ ಸೇರಿದಂತೆ ಇತರೆ ಅನಾರೋಗ್ಯದಿಂದ ಬಳಲುತ್ತಿದ್ದವರಲ್ಲಿ ಈ ಸೋಂಕು ಇರುವುದು ಹೆಚ್ಚಾಗಿ ಧೃಡಪಟ್ಟಿದೆ ಎಂದು ಡಿಹೆಚ್​ಒ ಜನಾರ್ಧನ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.