ETV Bharat / state

ಸರ್ಕಾರಿ ಭೂಮಿ ಬೇರೆಯವರಿಗೆ ಮಂಜೂರು: ನಾಲ್ವರು ಅಧಿಕಾರಿಗಳು ಸಸ್ಪೆಂಡ್‌

author img

By

Published : May 11, 2022, 9:11 AM IST

ನಕಲಿ ದಾಖಲೆ ಸೃಷ್ಠಿಸಿ ಸರ್ಕಾರಿ ಭೂಮಿಯನ್ನು ಬೇರೆಯವರಿಗೆ ಅಕ್ರಮವಾಗಿ ಮಂಜೂರು ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಅಧಿಕಾರಿಗಳ ವಿರುದ್ಧ ವಿಜಯನಗರ ಡಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ.

officers suspended over government land sanction case, officers suspended by Vijayanagara DC, government land sanction case, ಸರ್ಕಾರಿ ಜಮೀನು ಮಂಜೂರಾತಿ ಪ್ರಕರಣದಲ್ಲಿ ಅಧಿಕಾರಿಗಳ ಅಮಾನತು, ವಿಜಯನಗರ ಡಿಸಿಯಿಂದ ಅಮಾನತುಗೊಂಡ ಅಧಿಕಾರಿಗಳು, ಸರ್ಕಾರಿ ಭೂಮಿ ಮಂಜೂರಾತಿ ಪ್ರಕರಣ,
ನಾಲ್ಕು ಅಧಿಕಾರಿಗಳು ಅಮಾನತುಗೊಳಿಸಿದ ಡಿಸಿ ಅನಿರುದ್ಧ

ವಿಜಯನಗರ (ಹೊಸಪೇಟೆ): ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಭೂಮಿಯನ್ನು ಖಾಸಗಿ ವ್ಯಕ್ತಿಗಳಿಗೆ ಅಕ್ರಮವಾಗಿ ಮಂಜೂರು ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂದಾಯ ನಿರೀಕ್ಷಕ ಸಿ.ಎಂ.ಕೊಟೇಶ, ಪ್ರಥಮ ದರ್ಜೆ ಸಹಾಯಕ ಎ.ಹೆಚ್.ಪುನೀತ್ ಕುಮಾರ್​ ಎಂಬುವವರನ್ನು ಅಮಾನತುಗೊಳಿಸಿ ವಿಜಯನಗರ ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್ ಆದೇಶಿಸಿದ್ದಾರೆ.

ಅಕ್ರಮದಲ್ಲಿ ಭಾಗಿಯಾಗಿರುವ ಹೂವಿನ ಹಡಗಲಿ ತಾಲೂಕಿನ ಗ್ರೇಡ್-2 ತಹಶೀಲ್ದಾರ್ ನಟರಾಜ್, ಶಿರಸ್ತೇದಾರ್ ಡಿ.ಮಹಮ್ಮದ್ ಗೌಸ್​ರನ್ನು ಕಚೇರಿಯ ಕರ್ತವ್ಯದಿಂದ ಬಿಡುಗಡೆಗೊಳಿಸಿ ಶಿಸ್ತು ಕ್ರಮ ಜರುಗಿಸುವಂತೆ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಪ್ರಾದೇಶಿಕ ಆಯುಕ್ತರಿಗೆ ಶಿಫಾರಸು ಮಾಡಿದ್ದಾರೆ.

ಇದನ್ನೂ ಓದಿ: ಪಿಎಸ್​​ಐ ನೇಮಕಾತಿ ಅಕ್ರಮ: ಡಿವೈಎಸ್​ಪಿ ಸೇರಿ 12 ಪೊಲೀಸ್ ಸಿಬ್ಬಂದಿ ಅಮಾನತು

ಪ್ರಕರಣದ ವಿವರ: ಹೂವಿನ ಹಡಗಲಿ ತಾಲೂಕಿನ ದಾಸರಹಳ್ಳಿ ಕಂದಾಯ ಗ್ರಾಮದ ಸರ್ವೇ ನಂ. 229/ಡಿ/1 ವಿಸ್ತೀರ್ಣ 10.36 ಎಕರೆ ಸರ್ಕಾರಿ ಭೂಮಿಯನ್ನು ದಾಸರಹಳ್ಳಿಯ ವಿಶಾಲಾಬಾಯಿ ಎಂಬುವವರಿಗೆ 4.98 ಎಕರೆ, ಗೌರಿಬಾಯಿಗೆ 3.28, ಕೊಟ್ರಿಬಾಯಿಗೆ 2.10 ಎಕರೆ ಭೂಮಿಯನ್ನು ನಿಯಮಬಾಹಿರವಾಗಿ ಮಂಜೂರು ಮಾಡಲಾಗಿತ್ತು. ಈ ಬಗ್ಗೆ ತನಿಖೆಗೆ ಜಿಲ್ಲಾಡಳಿತ ತಂಡ ರಚನೆ ಮಾಡಿದೆ. ಇತ್ತೀಚಿಗೆ ತನಿಖಾ ತಂಡ ಸಲ್ಲಿಸಿದ್ದ ವರದಿ ಆಧರಿಸಿ ಜಿಲ್ಲಾಧಿಕಾರಿ ಕ್ರಮ ಕೈಗೊಂಡಿದ್ದಾರೆ. ಈ ಹಿಂದೆ ಅಕ್ರಮ ಭೂ ಮಂಜೂರಾತಿ ಮಾಡಿ ಸರ್ಕಾರಕ್ಕೆ ಮೋಸ ಮಾಡಿರುವ ನಾಲ್ವರ ವಿರುದ್ಧ ಹೂವಿನ ಹಡಗಲಿ ಪಟ್ಟಣ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.