ಹೊಸಪೇಟೆ: ತಾಲೂಕಿನಲ್ಲಿ ದಿನದಿಂದ ದಿನಕ್ಕೆ ಕೊರೊನಾ ಹರಡುವಿಕೆ ಜಾಸ್ತಿಯಾಗುತ್ತಿದ್ದು, ಬುಧವಾರದಂದು 26 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಗಾದಿಗನೂರಿನಲ್ಲಿ-5, ನಗರದ ಅಮರಾವತಿ ಪ್ರದೇಶ- 1, ಚಪ್ಪರದಹಳ್ಳಿ-3, ಚಿತ್ತವಾಡ್ಗಿ-3, ಕಂಚಗಾರಪೇಟೆ-2, ರೈಲ್ವೆ ಸ್ಟೇಷನ್ ರಸ್ತೆ- 2, ಟಿಬಿಡ್ಯಾಂ ಪ್ರದೇಶದಲ್ಲಿ ಒಂದು ಪ್ರಕರಣ ಸೇರಿದಂತೆ ಒಟ್ಟು 26 ಪ್ರಕರಣಗಳು ಪತ್ತೆಯಾಗಿವೆ.
ಕೊರೊನಾ ಒಟ್ಟು ಪ್ರಕರಣಗಳು 110ರ ಗಡಿ ದಾಟಿದ್ದು, 81 ಸಕ್ರಿಯ ಪ್ರಕರಣಗಳಿವೆ ಎಂದು ಡಿಎಚ್‍ಒ ಡಾ. ಜನಾರ್ದನ ತಿಳಿಸಿದ್ದಾರೆ.
ಕೊರೊನಾ ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆ ಆರೋಗ್ಯ ಇಲಾಖೆ ಕೂಡ ಮುನ್ನೆಚ್ಚರಿಕಾ ಕ್ರಮ ವಹಿಸಿದ್ದು, ಸೋಂಕಿತರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರನ್ನು ಪತ್ತೆ ಹಚ್ಚಿ ಸ್ವ್ಯಾಬ್ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸುತ್ತಿದೆ ಎಂದು ಆರೋಗ್ಯೆ ಇಲಾಖೆ ತಿಳಿಸಿದೆ.