ಬಳ್ಳಾರಿ : ಇಲ್ಲಿನ 4ನೇ ವಾರ್ಡಿನಲ್ಲಿ ಕಾಂಗ್ರೆಸ್ ಪಕ್ಷದಿಂದ 22 ವರ್ಷದ ಯುವತಿ ಚುನಾಯಿತರಾಗಿದ್ದಾರೆ. ಪಾಲಿಕೆ ಪ್ರವೇಶಿಸುವ ಮೂಲಕ ಅತಿ ಕಿರಿಯ ವಯಸ್ಸಿನ ಸದಸ್ಯರಾಗಿ ಗಮನ ಸೆಳೆದಿದ್ದಾರೆ.
ಗೆಲುವಿನ ಬಳಿಕ ಮಾತನಾಡಿದ 4ನೇ ವಾರ್ಡಿನ ವಿಜೇತೆ ತ್ರಿವೇಣಿ ಅವರು, ಮೊದಲ ಬಾರಿಗೆ ಚಿಕ್ಕ ವಯಸ್ಸಿಗೆ ಸದಸ್ಯಳಾಗಿರುವುದಕ್ಕೆ ಖುಷಿಯಾಗುತ್ತಿದೆ.
ಮತದಾರರು ನನ್ನನ್ನು ಗೆಲ್ಲಿಸಿರುವುದರಿಂದ ಅಭೂತ ಪೂರ್ವ ಕೆಲಸಗಳನ್ನು ಮಾಡಿ ಮತದಾರರ ನಿರೀಕ್ಷೆ ಉಳಿಸಿಕೊಳ್ಳುವೆ ಎಂದರು.
ಹೆಲ್ತ್ ಇನ್ಸ್ಪೆಕ್ಟರ್ ಕೋರ್ಸಿನ ಫೈನಲ್ ಇಯರ್ನಲ್ಲಿ ವ್ಯಾಸಾಂಗ ಮಾಡುತ್ತಿರುವ ಈ ಸದಸ್ಯೆ, ತಮ್ಮ ವಾರ್ಡಿನ ಸಮಸ್ಯೆಗಳನ್ನ ಆಲಿಸಿ, ಬಗೆಹರಿಸಲು ನಾನು ಪ್ರಾಮಾಣಿಕವಾಗಿ ಶ್ರಮಿಸುವೆ ಎಂದ್ರು. ಇನ್ನು, ಕಳೆದ ಬಾರಿ ಮಹಾನಗರ ಪಾಲಿಕೆ ಸದಸ್ಯರಾಗಿ ತೃತೀಯ ಲಿಂಗಿ ಆಯ್ಕೆಯಾಗುವ ಮೂಲಕ ಗಮನ ಸೆಳೆದಿದ್ದರು.