ETV Bharat / state

10 ಸಾವಿರ ಆಂಟಿಜೆನ್ ಕಿಟ್​ಗಳ ಖರೀದಿ: ಇನ್ಮುಂದೆ ಕೊರೊನಾ ಖಾತ್ರಿಗೆ ಕೇವಲ 30 ನಿಮಿಷ ಸಾಕು - ಕೊರೊನಾ

ಆಂಟಿಜೆನ್ ಕಿಟ್​ಗಳು ಕೋಮೊರ್ಬಿಡಿಟಿ ಮತ್ತು ಇನ್ನಿತರ ದೀರ್ಘಾವಧಿ ಕಾಯಿಲೆಗಳಿಂದ ಬಳಲುತ್ತಿರುವವರಲ್ಲಿ ಕೆಮ್ಮು, ನೆಗಡಿ, ಶೀತ, ತಲೆನೋವಿನಂತಹ ರೋಗದ ಗುಣಲಕ್ಷಣಗಳು ಕಂಡು ಬಂದಲ್ಲಿ ಅಂತಹವರಿಗೆ ತಕ್ಷಣ ಈ ಕಿಟ್‌ಗಳ ಮೂಲಕ ಪರೀಕ್ಷಿಸಲಾಗುತ್ತದೆ. 30 ನಿಮಿಷದೊಳಗೆ ನಮಗೆ ವರದಿ ಲಭ್ಯವಾಗುತ್ತದೆ.

SS. Nakul
ಎಸ್.ಎಸ್.ನಕುಲ್
author img

By

Published : Jun 30, 2020, 8:43 AM IST

ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲೆಗೆ ಈಗಾಗಲೇ 10 ಸಾವಿರ ಆಂಟಿಜೆನ್ ಕಿಟ್‌ಗಳನ್ನ ಖರೀದಿಸಲಾಗಿದ್ದು, ಆ ಕಿಟ್​ಗಳನ್ನ ವಿಮ್ಸ್ ಆಸ್ಪತ್ರೆಯಲ್ಲಿರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ.

ಆಂಟಿಜೆನ್ ಕಿಟ್​ಗಳ ಬಗ್ಗೆ ತಿಳಿಸುತ್ತಿರುವ ಜಿಲ್ಲಾಧಿಕಾರಿ

ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಆಂಟಿಜೆನ್ ಕಿಟ್​ಗಳು ಕೋಮೊರ್ಬಿಡಿಟಿ ಮತ್ತು ಇನ್ನಿತರ ದೀರ್ಘಾವಧಿ ಕಾಯಿಲೆಗಳಿಂದ ಬಳಲುತ್ತಿರುವವರಲ್ಲಿ ಕೆಮ್ಮು, ನೆಗಡಿ, ಶೀತ, ತಲೆನೋವಿನಂತಹ ರೋಗದ ಗುಣಲಕ್ಷಣಗಳು ಕಂಡುಬಂದಲ್ಲಿ ಅಂತವರಿಗೆ ತಕ್ಷಣ ಈ ಕಿಟ್‌ಗಳ ಮೂಲಕ ಪರೀಕ್ಷಿಸಲಾಗುತ್ತದೆ. 30 ನಿಮಿಷದೊಳಗೆ ನಮಗೆ ವರದಿ ಲಭ್ಯವಾಗುತ್ತದೆ ಎಂದರು.

ಜಿಂದಾಲ್ ಒಳಗಡೆಯೇ ಪಾಸಿಟಿವ್ ಬಂದರೇ ಸೊಂಕಿತ ವ್ಯಕ್ತಿಗೆ ಚಿಕಿತ್ಸೆ ಸೇರಿದಂತೆ ಎಲ್ಲ ರೀತಿಯ ಚಿಕಿತ್ಸೆಯನ್ನು ಜಿಂದಾಲ್‌ನವರೇ ಹಾಗೂ ಅವರ ವೈದ್ಯರೇ ನಿರ್ವಹಿಸಲಿದ್ದಾರೆ. ಈಗಾಗಲೇ 17 ಮಂದಿ ಒಳಗಡೆ ಚಿಕಿತ್ಸೆ ಪಡೆಯುತ್ತಿದ್ದಾರೆ. ನಿತ್ಯ ವರದಿ ಜಿಲ್ಲಾಡಳಿತಕ್ಕೆ ಕಳುಹಿಸಿಕೊಡಲಾಗುತ್ತಿದೆ ಎಂದರು. ಇದಲ್ಲದೇ, ಡೇಟ್​ ಅಡಿಟ್‌ನ್ನು ನಾಳೆ ಮಧ್ಯಾಹ್ನ ವಿಡಿಯೋ ಕಾನ್ಪರೆನ್ಸ್ ಮೂಲಕ ಬೆಂಗಳೂರಿನ ನುರಿತ ತಜ್ಞರು ನಡೆಸಲಿದ್ದಾರೆ. ಸಾವು ತಡೆಗಟ್ಟುವಿಕೆ, ಆರೋಗ್ಯ ಸುಧಾರಣೆ ಮತ್ತು ಸುರಕ್ಷತೆ ಹಾಗೂ ಇನ್ನಿತರ ವಿಷಯಗಳು ಚರ್ಚೆಗೆ ಬರಲಿವೆ ಎಂದರು.

ದುರ್ಬಲ ವರ್ಗದವರಿಗೆ, ರೋಗ ಲಕ್ಷಣ ಇರುವವರಿಗೆ ಕ್ಷಿಪ್ರ ಗತಿಯಲ್ಲಿ ತಪಾಸಣೆ:

ಇನ್ಮುಂದೆ ವಿಮ್ಸ್, ಜಿಲ್ಲಾ ಕೋವಿಡ್ ಆಸ್ಪತ್ರೆ, ಸಂಜೀವಿನಿ ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಗಂಭೀರ ಸ್ವರೂಪದ ಈ ಸೊಂಕಿನಿಂದ ಬಳಲುತ್ತಿರುವವರಿಗೆ ಮಾತ್ರ ಚಿಕಿತ್ಸೆ ನೀಡಲು ತೀರ್ಮಾನಿಸಲಾಗಿದ್ದು, ಗಂಭೀರವಲ್ಲದ ಮತ್ತು ರೋಗದ ಗುಣ ಲಕ್ಷಣವಿರದ ಸೊಂಕಿತರಿಗೆ ತಾಲೂಕು ಆಸ್ಪತ್ರೆ, ಸಮುದಾಯ ಆಸ್ಪತ್ರೆ ಹಾಗೂ ಆಯ್ದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಚಿಕಿತ್ಸೆ ನೀಡಲು ತೀರ್ಮಾನಿಸಲಾಗಿದೆ ಎಂದರು.

ಇನ್ನು ಇದಕ್ಕೆ ಸಂಬಂಧಿಸಿದಂತೆ ತಾಲೂಕು ಆರೋಗ್ಯ ಅಧಿಕಾರಿಗಳು ಅಗತ್ಯ ಸಿದ್ಧತೆಗಳನ್ನ ಕೂಡಲೇ ಕೈಗೆತ್ತಿಕೊಳ್ಳಬೇಕು. ತಹಸೀಲ್ದಾರರಿಗೂ ಸೂಚನೆ ನೀಡಲಾಗಿದ್ದು, ಅವರ ಸಮನ್ವಯದೊಂದಿಗೆ ಯಾವುದೇ ರೀತಿಯ ಗೊಂದಲಕ್ಕೆ ಆಸ್ಪದ ನೀಡದಂತೆ ತಮ್ಮ ವೈದ್ಯರ ಮೂಲಕ ಚಿಕಿತ್ಸೆ ನೀಡಬೇಕು ಎಂದು ಡಿಸಿ ಸೂಚನೆ ನೀಡಿದ್ರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.