ಗೋಕಾಕ್: ಉಪಚುನಾವಣೆ ಹಿನ್ನೆಲೆ ಗೋಕಾಕ್ನಲ್ಲಿ ಪ್ರಚಾರದ ಭರಾಟೆ ಜೋರಾಗಿದೆ. ಆದರಲ್ಲೂ ಜನರಿಗೆ ಜಾರಕಿಹೊಳಿ ಸಹೋದರರ ನಡುವಿನ ಹೋರಾಟ ಕುತೂಹಲ ಮೂಡಿಸಿದ್ದು, ಯಾರಿಗೆ ಮತ ನೀಡುವುದು ಎಂಬ ಗೊಂದಲದಲ್ಲಿದ್ದಾರೆ.
ತಾಲೂಕಿನ ಖನಗಾಂವ್ ಗ್ರಾಮದl್ಲಿ ಚುನಾವಣಾ ಪ್ರಚಾರ ವೇಳೆ ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ ಮಾತನಾಡಿ, ಖನಗಾಂವ್ ಗ್ರಾಮ ನನ್ನ ರಾಜಕೀಯದ ಭದ್ರ ಕೋಟೆಯಾಗಿದ್ದು, ಈ ಜನರು ನನ್ನನ್ನು ಯಾವತ್ತೂ ಕೈಬಿಟ್ಟಿಲ್ಲ. ಕಳೆದ ಹಲವು ದಿನಗಳಿಂದ ನನ್ನ ವಿರುದ್ಧ ಅನೇಕರು ಮಾಡುತ್ತಿರುವ ಆರೋಪಕ್ಕೆ ನೀವೇ ಉತ್ತರ ನೀಡಬೇಕು ಎನ್ನುತ್ತ ಮತದಾರರನ್ನು ಸೆಳೆಯುವ ಕೆಲಸ ಮಾಡುತ್ತಿದ್ದಾರೆ.
ಕಮಲ ಹೂವಿನ ಚಿಹ್ನೆಗೆ ಮತ ನೀಡುವಂತೆ ಜನರಿಗೆ ಯುವಕರು ಟ್ರೈನಿಂಗ್ ಕೊಡಬೇಕಾಗಿದೆ. ಕಳೆದ ಐದು ಬಾರಿ ನಾನು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಗೆದ್ದಿದ್ದೆ. ಈ ಬಾರಿ ಬಿಜೆಪಿಯಿಂದ ಸ್ಪರ್ಧಿಸಿದ್ದೇನೆ. ನನ್ನ ಪಕ್ಷದ ಗುರುತು ಕಮಲ ಎಂದರು. ನಮ್ಮ ಕ್ಷೇತ್ರದ ಜನರ ತಲೆಯಲ್ಲಿ ಕೈ ಚಿಹ್ನೆ ಅಚ್ಚಾಗಿದೆ. ಕಾಂಗ್ರೆಸ್ ಪಕ್ಷದಲ್ಲೂ ಓರ್ವ ಸಾಹುಕಾರ್ ಇದ್ದಾನೆ. ಹೀಗಾಗಿ ಗೊಂದಲಕ್ಕೊಳಗಾಗದೇ ಕಮಲದ ಚಿಹ್ನೆ ಇರುವ ಸಾಹುಕಾರ್‌ಗೆ ಮತ ಹಾಕಿ. ನಮ್ಮ ವಿರೋಧಿಗಳು ನಮ್ಮನ್ನು ಅನರ್ಹರು, ನೈತಿಕತೆ ಇಲ್ಲ ಅಂತಾ ಅಪಮಾನ ಮಾಡ್ತಿದಾರೆ. ಆದ್ರೆ ಪ್ರಚಂಡ ಬಹುಮತದಿಂದ ನನ್ನನ್ನು ಆರಿಸಿ ತಂದು ಅವರಿಗೆ ಉತ್ತರ ಕೊಡಬೇಕು ಎಂದು ರಮೇಶ್ ಜಾರಕಿಹೊಳಿ ಕರೆ ನೀಡಿದ್ರು.