ಬೆಳಗಾವಿ: ಬೆಳಗಾವಿ ಹೊರವಲಯದ ಐತಿಹಾಸಿಕ ಸ್ಥಳವಾದ ರಾಜಹಂಸಗಢ ಕೋಟೆಯಲ್ಲಿ ಎಣ್ಣೆ ಪಾರ್ಟಿ ಮಾಡುತ್ತಿದ್ದ ಯುವಕರ ಮೇಲೆ ಮತ್ತೊಂದು ಗುಂಪು ದೊಣ್ಣೆಯಿಂದ ದಾಳಿ ಮಾಡಿರುವ ಘಟನೆ ರಾಜಹಂಸಗಢ ಕೋಟೆ ಆವರಣದಲ್ಲಿ ನಡೆದಿದೆ.
ಪಾರ್ಟಿ ಮಾಡುತ್ತಿದ್ದ ಯುವಕರ ಮೇಲೆ ಮತ್ತೊಂದು ಯುವಕರ ಗುಂಪಿನಲ್ಲಿದ್ದವರು ಬೆಲ್ಟ್, ದೊಣ್ಣೆಯಿಂದ ಹೊಡೆದಿದ್ದಾರೆ. ಎರಡು ಗುಂಪುಗಳ ಮಧ್ಯೆ ನಡೆದ ಮಾರಾಮಾರಿ ಸ್ಥಳೀಯರ ಮೊಬೈಲ್ನಲ್ಲಿ ಸೆರೆಯಾಗಿದೆ.
ಓದಿ...ಮಧುರೈನಲ್ಲಿ ಜಲ್ಲಿಕಟ್ಟು ಸಂಭ್ರಮ: 58 ಮಂದಿಗೆ ಗಾಯ
ಪವಿತ್ರ ಸ್ಥಳದಲ್ಲಿ ಪಾರ್ಟಿ ಮಾಡುತ್ತಿರುವುದು ಎಷ್ಟು ಸರಿ ಎಂದು ಒಂದು ಯುವಕರ ಗುಂಪು ಮೋಜು-ಮಸ್ತಿಯಲ್ಲಿ ತೊಡಗಿದ್ದ ಯುವಕರನ್ನು ಪ್ರಶ್ನಿಸಿದೆ. ಉಭಯ ಗುಂಪಿನ ಮಧ್ಯೆ ಆರಂಭವಾದ ವಾಗ್ವಾದ ಬಳಿಕ ವಿಕೋಪಕ್ಕೆ ತಿರುಗಿದೆ. ಬಳಿಕ ದೊಣ್ಣೆ ಹಾಗೂ ಬೆಲ್ಟಿನಿಂದ ಯುವಕರು ಹೊಡೆದಾಡಿಕೊಂಡಿದ್ದಾರೆ. ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.