ಬೆಳಗಾವಿ: ಕಬಡ್ಡಿ ಆಡುತ್ತಿದ್ದ ಎರಡು ತಂಡಗಳ ಬೆಂಬಲಿಗರ ನಡುವೆ ಕ್ಷುಲ್ಲಕ ಕಾರಣಕ್ಕೆ ನಡೆದ ಗಲಾಟೆಯಲ್ಲಿ ಕೈಗೆ ಸಿಕ್ಕ ಕಟ್ಟಿಗೆಗಳಿಂದ ಯುವಕರು ಬಡಿದಾಡಿಕೊಂಡ ಘಟನೆ ರಾಮದುರ್ಗ ತಾಲೂಕಿನ ಚಂದರಗಿ ಗ್ರಾಮದಲ್ಲಿ ನಡೆದಿದೆ.
ಕ್ರೀಡಾ ಶಾಲೆಯ ಆವರಣದಲ್ಲಿ ವಲಯಮಟ್ಟದ ಕ್ರೀಡಾ ಪಂದ್ಯಾವಳಿ ಆಯೋಜನೆ ಮಾಡಲಾಗಿತ್ತು. ಚಂದರಗಿ ಹಾಗೂ ಕಟಕೋಳ ಶಾಲೆಯ ವಿದ್ಯಾರ್ಥಿಗಳ ತಂಡಗಳ ಮಧ್ಯೆ ಫೈನಲ್ ಪಂದ್ಯ ನಡೆಯುತ್ತಿತ್ತು. ಈ ವೇಳೆ ಕ್ಷುಲ್ಲಕ ಕಾರಣಕ್ಕೆ ಎರಡು ಯುವಕರ ಗುಂಪುಗಳ ನಡುವೆ ಆರಂಭವಾದ ಗಲಾಟೆ ವಿಕೋಪಕ್ಕೆ ತಿರುಗಿದ್ದು, ಕೈಗೆ ಸಿಕ್ಕ ಬಡಿಗೆ ಹಿಡಿದು ಯುವಕರು ಬಡಿದಾಡಿಕೊಂಡಿದ್ದಾರೆ.
ಎರಡು ಗ್ರಾಮಗಳ ಯುವಕರ ಬಡಿದಾಟ ನೋಡಿದ ಸ್ಥಳೀಯರು, ಶಾಲಾ ವಿದ್ಯಾರ್ಥಿಗಳು ಎದ್ದು ಬಿದ್ದು ಓಡಿಹೋಗಿದ್ದಾರೆ. ಸ್ಥಳಕ್ಕೆ ಕಟಕೋಳ ಪೊಲೀಸರು ಆಗಮಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಈ ಕುರಿತು ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.
ಓದಿ: ಬಿಜೆಪಿ ಕಾರ್ಯಕರ್ತರ ದೊಣ್ಣೆಯಿಂದ ಥಳಿಸಿದ ಟಿಎಂಸಿ ಶಾಸಕ: ವಿಡಿಯೋ