ETV Bharat / state

ನಾಯಿ ಮರಿ ಜೀವ ಉಳಿಸಲು ಹೋಗಿ ಯುವಕ ಸಾವು - man went to save dog and died

ನಾಯಿ ಮರಿ ಜೀವ ಉಳಿಸಲು ಹೋದ‌ ಬೈಕ್ ಸವಾರ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಪಟ್ಟಣದ ಹೊರವಲಯದಲ್ಲಿರುವ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ನಡೆದಿದೆ.

Young man who went to save dog died
ನಾಯಿ ಮರಿ ಜೀವ ಉಳಿಸಲು ಹೋಗಿ ಯುವಕ ಸ್ಥಳದಲ್ಲಿ ಸಾವು
author img

By

Published : Dec 22, 2019, 6:01 PM IST

ಚಿಕ್ಕೋಡಿ: ನಾಯಿ ಮರಿ ಜೀವ ಉಳಿಸಲು ಹೋದ‌ ಬೈಕ್ ಸವಾರ ಅಪಘಾತದಿಂದ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಪಟ್ಟಣದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ನಡೆದಿದೆ.

ಸೌರಭ ಕಾಶಾಳಕರ (24) ಸ್ಥಳದಲ್ಲಿ ಸಾವನ್ನಪ್ಪಿದ ಯುವಕ.

ನಾಯಿ ಮರಿ ಜೀವ ಉಳಿಸಲು ಹೋಗಿ ಯುವಕ ಸ್ಥಳದಲ್ಲಿ ಸಾವು

ಈತ ಮಹಾರಾಷ್ಟ್ರದ ಅಜರಾ ತಾಲೂಕಿನ ಕಾನೊಳಿ ಗ್ರಾಮದಿಂದ ನಿಪ್ಪಾಣಿ ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿ ತನ್ನ ಊರು ಕೊಲ್ಲಾಪುರಕ್ಕೆ ತೆರಳುತ್ತಿದ್ದ. ಈ ವೇಳೆ ರಸ್ತೆಯ ಮಧ್ಯದಲ್ಲಿ ನಾಯಿ ಮರಿಯೊಂದು ಓಡಿ ಬರುತ್ತಿದ್ದನ್ನು ಕಂಡಿದ್ದಾನೆ. ಆಗ ಅದರ ಜೀವ ಉಳಿಸಲು ಹೋಗಿ ಬೈಕ್​ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ತಲೆಗೆ ಗಂಭೀರವಾಗಿ ಗಾಯವಾಗಿದೆ. ಇದೇ ವೇಳೆ ಹಿಂದಿನಿಂದ ಮತ್ತೊಂದು ಅಪರಿಚಿತ ವಾಹನ ಆತನ ಮೈಮೇಲೆ ಹರಿದ ಪರಿಣಾಮ ಆತ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.

ಸ್ಥಳಕ್ಕೆ ನಿಪ್ಪಾಣಿ ಪಟ್ಟಣದ ಬಸವೇಶ್ವರ ಚೌಕ ಠಾಣೆ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಿಪ್ಪಾಣಿ ಬಸವೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ನಾಯಿ ಮರಿ ಜೀವ ಉಳಿಸಲು ಹೋಗಿ ಯುವಕ ಸ್ಥಳದಲ್ಲಿ ಸಾವುBody:

ಚಿಕ್ಕೋಡಿ :

ನಾಯಿ ಮರಿ ಜೀವ ಉಳಿಸಲು ಹೋದ‌ ಬೈಕ ಸವಾರ ಸ್ಥಳದಲ್ಲಿಯೇ ಸಾವನಪ್ಪಿದ್ದಾನೆ ಮನುಷ್ಯತ್ವ ಮರೆಯಲು ಹೋದವನೆ ಯಮಲೋಕ ಸೇರಿದ ಘಟನೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಪಟ್ಟಣದ ಹೊರ ವಲಯದ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ನಡೆದಿದೆ.

ಸೌರಭ ಕಾಶಾಳಕರ (24) ಸ್ಥಳದಲ್ಲಿ ಸಾವನ್ನಪ್ಪಿದ ಯುವಕ ಇತನು ಮಹಾರಾಷ್ಟ್ರದ ಅಜರಾ ತಾಲೂಕಿನ ಕಾನೊಳಿ ಗ್ರಾಮದಿಂದ ನಿಪ್ಪಾಣಿ ರಾಷ್ಟ್ರೀಯ ಹೆದ್ದಾರಿ
ಮಾರ್ಗವಾಗಿ ಸ್ವಂತ ಊರು ಕೊಲ್ಲಾಪುರಕ್ಕೆ ತೆರುಳುತ್ತಿದ್ದ ಸಮಯದಲ್ಲಿ ರಸ್ತೆಯ ಮದ್ಯದಲ್ಲಿ ನಾಯಿ ಮರಿಯೋಂದು ಓಡಿ
ಬರುತ್ತಿದ್ದರಿಂದ ಅದರ ಜೀವವನ್ನು ಉಳಿಸಲು ಹೋಗಿ ಆತನ ದ್ವಿಚಕ್ರ ವಾಹನದ ನಿಯಂತ್ರಣ ತಪ್ಪಿ ಡಿವೈಡರಗೆ ಡಿಕ್ಕಿ ಹೊಡೆದು ತಲೆಗೆ ಗಂಭೀರವಾಗಿ ಗಾಯಗೊಂಡ ಪರಿಣಾಮ ಹಿಂದಿನಿಂದ ಮತ್ತೊಂದು ಅಪರಿಚಿತ ವಾಹನ ಆತನ ಮೈ ಮೇಲೆ ಹರಿದ ಪರಿಣಾಮ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ನಡೆದಿದೆ.

ಸ್ಥಳಕ್ಕೆ ನಿಪ್ಪಾಣಿ ಪಟ್ಟಣದ ಬಸವೇಶ್ವರ
ಚೌಕ ಠಾಣೆ ಪೋಲಿಸರು ಬೇಟಿ ನೀಡಿದ್ದಾರೆ. ಈ ಕುರಿತು ನಿಪ್ಪಾಣಿ ಬಸವೇಶ್ವರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Conclusion:ಸಂಜಯ ಕೌಲಗಿ
ಚಿಕ್ಕೋಡಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.