ETV Bharat / state

ಯೆಸ್​ ಬ್ಯಾಂಕ್ ದಿವಾಳಿ​ : ಆತಂಕದಲ್ಲಿ ಕುಂದಾನಗರಿ ಗ್ರಾಹಕರು

ನಷ್ಟದ ಸುಳಿಯಲ್ಲಿರುವ ಯೆಸ್ ಬ್ಯಾಂಕ್ ಅ​ನ್ನು ಆರ್​ಬಿಐ ಸೂಪರ್ ಸೀಡ್ ಮಾಡಿರುವ ಹಿನ್ನೆಲೆ ನಗರದಲ್ಲಿ ಯೆಸ್ ಬ್ಯಾಂಕ್ ಗ್ರಾಹಕರು ಆತಂಕಕ್ಕೀಡಾಗಿದ್ದರು.

Yes Bank Consumers fear in Belagavi
ಆತಂಕದಲ್ಲಿ ಕುಂದಾನಗರಿ ಗ್ರಾಹಕರು
author img

By

Published : Mar 7, 2020, 10:35 AM IST

ಬೆಳಗಾವಿ: ನಷ್ಟದ ಸುಳಿಯಲ್ಲಿರುವ ಯೆಸ್ ಬ್ಯಾಂಕ್​ನ್ನು ಆರ್​ಬಿಐ ಸೂಪರ್ ಸೀಡ್ ಮಾಡಿರುವ ಹಿನ್ನೆಲೆ ನಗರದಲ್ಲಿ ಯಸ್ ಬ್ಯಾಂಕ್ ಗ್ರಾಹಕರು ಆತಂಕಕ್ಕೀಡಾಗಿದ್ದಾರೆ.

ಯೆಸ್ ಬ್ಯಾಂಕ್ ನತ್ತ ಆಗಮಿಸಿದ ಗ್ರಾಹಕರು, ಈ ಕುರಿತು ಮಾಹಿತಿ ಪಡೆದರು. ನಗರದ ಕ್ಲಬ್ ರಸ್ತೆಯಲ್ಲಿರುವ ಯೆಸ್ ಬ್ಯಾಂಕ್ ಶಾಖೆಗೆ ನೋಟಿಸ್‌ ಅಂಟಿಸಲಾಗಿದೆ. ಇದಲ್ಲದೇ ಯೆಸ್ ಬ್ಯಾಂಕ್ ಎಟಿಎಂಗೆ ನೋ ಸರ್ವೀಸ್ ಬೋರ್ಡ್ ಹಾಕಲಾಗಿದೆ.

ಆತಂಕದಲ್ಲಿ ಕುಂದಾನಗರಿ ಗ್ರಾಹಕರು

ಬ್ಯಾಂಕ್​ನ ಆರ್ಥಿಕ ಸ್ಥಿತಿ ಸಾಕಷ್ಟು ಕುಸಿದಿರೋದ್ರಿಂದ ಗ್ರಾಹಕರ ಹಣ ವಾಪಸಾತಿ ಮೇಲೆ ನಿರ್ಬಂಧ ವಿಧಿಸಲಾಗಿದ್ದು, ಅಕೌಂಟ್​ಗೆ 50 ಸಾವಿರ ರೂ. ಮಾತ್ರ ಹಣ ವಾಪಸ್ ಪಡೆಯಬಹುದಾಗಿದೆ. ಈ ಹಿನ್ನೆಲೆಯಲ್ಲಿ ಜನ 50 ಸಾವಿರ ರೂಗಳನ್ನಾದರೂ ವಾಪಸ್ ಪಡೆದರಾಯಿತು ಎಂದು ಬ್ಯಾಂಕ್​ ಬಳಿ ಜಮಾಯಿಸಿದ್ದರು. ಇನ್ನು ಕೆಲವರು ಎಟಿಎಂ ಬಳಿ ಹಣ ವಾಪಸ್ ಪಡೆಯಲು ಕ್ಯೂ ಹಚ್ಚಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.