ಬೆಳಗಾವಿ: ಇಬ್ಬರು ಮಕ್ಕಳನ್ನು ಕೊಂದು ತಾಯಿ ಸಹ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜಿಲ್ಲೆಯ ಸವದತ್ತಿ ಠಾಣಾ ವ್ಯಾಪ್ತಿಯ ವಟ್ನಾಳ ಬಳಿ ನವಿಲು ತೀರ್ಥ ಜಲಾಶಯ ಹಿನ್ನೀರಿನಲ್ಲಿ ಈ ಘಟನೆ ನಡೆದಿದೆ.
ರಾಮದುರ್ಗ ತಾಲೂಕಿನ ಚುಂಚನೂರು ಗ್ರಾಮದ ತನುಜಾ ಗೋಡಿ (32), ಸುದೀಪ್ (4) ಹಾಗೂ ರಾಧಿಕಾ (3) ಮೃತರು. ನವಿಲು ತೀರ್ಥ ಡ್ಯಾಂ ಹಿನ್ನೀರಿಗೆ ಇಬ್ಬರು ಮಕ್ಕಳನ್ನು ಎಸೆದಿರುವ ತಾಯಿ ಬಳಿಕ ಆಕೆಯೂ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಮೊದಲು ಇಬ್ಬರು ಮಕ್ಕಳನ್ನು ನೀರಿಗೆ ಎಸೆದಿದ್ದ ತಾಯಿ ತನುಜಾ ಬಳಿಕ ತಾನು ಜಲಾಶಯದ ಹಿನ್ನೀರಿಗೆ ಹಾರಿದ್ದಾರೆ. ಜೀವನದಲ್ಲಿ ಜಿಗುಪ್ಸೆಯೇ ಆತ್ಮಹತ್ಯೆಗೆ ಕಾರಣ ಎಂದು ತಿಳಿದುಬಂದಿದೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಮೃತದೇಹಗಳನ್ನು ಹೊರತಗೆದಿದ್ದಾರೆ. ಸವದತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಶಿವಮೊಗ್ಗದಲ್ಲಿ ಇಬ್ಬರು ಮಕ್ಕಳ ಕೊಂದು ತಾಯಿ ಆತ್ಮಹತ್ಯೆ: ವರದಕ್ಷಿಣೆ ಕಿರುಕುಳ ಆರೋಪ