ಚಿಕ್ಕೋಡಿ (ಬೆಳಗಾವಿ): ಕಾಗವಾಡ ತಾಲೂಕಿನ ಕೆಂಪವಾಡ ಗ್ರಾಮದ ಬಳಿ ಅನುಮಾನಾಸ್ಪದ ರೀತಿಯಲ್ಲಿ ಮಹಿಳೆಯ ಮೃತದೇಹ ಸಿಕ್ಕಿದೆ.
ನವಲಿಹಾಳ ಗ್ರಾಮದ ಪೂಜಾ ಮಾನಿಂಗ ಬೆಳ್ಳುಬ್ಬಿ (32) ಮೃತ ಮಹಿಳೆ ಎಂದು ಗುರುತಿಸಲಾಗಿದೆ. ಈಕೆಯ ಮುಖದ ಮೇಲೆ ಗಾಯಗಳಿವೆ. ದುಷ್ಕರ್ಮಿಗಳು ಕೊಲೆ ಮಾಡಿರುವುದಾಗಿ ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ.
ಕಾಗವಾಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಚುಡಾಯಿಸಿದ್ದಕ್ಕೆ ಪೊಲೀಸರಿಗೆ ದೂರು: ಯುವತಿ ಕುಟುಂಬದ ಮೇಲೆ ಆರೋಪಿಗಳಿಂದ ಮಾರಣಾಂತಿಕ ಹಲ್ಲೆ