ETV Bharat / state

ಕಾಡಿನಿಂದ ನಾಡಿಗೆ ಬಂದು ವಿಶ್ರಾಂತಿ ಪಡೆಯುತ್ತಿರುವ ಕಾಡುಕೋಣ: ಜನರಲ್ಲಿ ಹೆಚ್ಚಿದ ಆತಂಕ

author img

By

Published : Jul 10, 2021, 2:19 PM IST

ಕಾಡಿನಿಂದ ನಾಡಿಗೆ ಬಂದ ಕಾಡುಕೋಣವೊಂದು ಗ್ರಾಮದಲ್ಲೇ ವಿಶ್ರಾಂತಿ ಪಡೆಯುತ್ತಿದ್ದು, ಜನರಲ್ಲಿ ಆತಂಕ ಹೆಚ್ಚಿದ ಘಟನೆ ಬೆಳಗಾವಿ ಜಿಲ್ಲೆಯ ಗೂಡಿಹಾಳ್​ ಗ್ರಾಮದಲ್ಲಿ ಕಂಡು ಬಂದಿದೆ.

Wild bull rest, Wild bull rest in City, Wild bull rest in City at Belagavi, Belagavi news, ಕಾಡಿನಿಂದ ನಾಡಿಗೆ ಬಂದ್ ಕಾಡುಕೋಣ, ಬೆಳಗಾವಿಯಲ್ಲಿ ಕಾಡಿನಿಂದ ನಾಡಿಗೆ ಬಂದ್ ಕಾಡುಕೋಣ, ಕಾಡಿನಿಂದ ನಾಡಿಗೆ ಬಂದ್ ಕಾಡುಕೋಣ ವಿಶ್ರಾಂತಿ,
ಕಾಡಿನಿಂದ ನಾಡಿಗೆ ಬಂದು ವಿಶ್ರಾಂತಿ ಪಡೆಯುತ್ತಿರುವ ಕಾಡುಕೋಣ

ಬೆಳಗಾವಿ: ಅನಾರೋಗ್ಯಕ್ಕೆ ತುತ್ತಾಗಿರುವ ಕಾಡುಕೋಣವೊಂದು ಕಾಡಿನಿಂದ ನಾಡಿಗೆ ಆಗಮಿಸಿ ಜನರಲ್ಲಿ ಆತಂಕ ಸೃಷ್ಟಿಸಿದ ಘಟನೆ ಗೂಡಿಹಾಳ್ ಗ್ರಾಮದಲ್ಲಿ ನಡೆದಿದೆ. ಕಳೆದ ಎರಡು ದಿನಗಳ ಹಿಂದೆ ಕಾಡಿನಿಂದ ನಾಡಿಗೆ ಬಂದಿರುವ ಕಾಡುಕೋಣ ತಾಲೂಕಿನ ಭೂತರಾಮನಹಟ್ಟಿ ಬಳಿಯ ಗೂಡಿಹಾಳ್ ಗ್ರಾಮದ ಪಕ್ಕದಲ್ಲಿರುವ ಕಾಡಿನಲ್ಲಿ ಪ್ರತ್ಯಕ್ಷವಾಗಿದೆ.‌

ಇತ್ತ ಕಾಡುಕೋಣ ಜನಸಂಚಾರ ಇರುವ ರಸ್ತೆ ಪಕ್ಕದಲ್ಲಿ ಓಡಾಡುತ್ತಿರುವ ಹಿನ್ನೆಲೆ ಜನರು ಆತಂಕದಿಂದ ಓಡಾಡುವಂತಾಗಿದೆ. ನಾಡಿಗೆ ಬಂದಿರುವ ಕಾಡುಕೋಣ ಅನಾರೋಗ್ಯಕ್ಕೆ ತುತ್ತಾಗಿ ಒಂದೇ ಸ್ಥಳದಲ್ಲಿ ಬಳಲಿ ಮಲಗಿಕೊಂಡಿದೆ. ಹೀಗಾಗಿ ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿರುವ ಅರಣ್ಯ ಇಲಾಖೆ ಪಶುವೈದ್ಯಾಧಿಕಾರಿ ನಿರುಪಮಾ ಸೂಕ್ತ ಚಿಕಿತ್ಸೆ ನೀಡಿ ಆರೈಕೆ ಮಾಡಿದ್ದಾರೆ.

ಈ ವೇಳೆ ಮಾಹಿತಿ ನೀಡಿದ ವೈದ್ಯಾಧಿಕಾರಿ, ಕಾಡುಕೋಣಕ್ಕೆ ವಯಸ್ಸಾಗಿದೆ‌. ಕಣ್ಣು ಕಾಣದ ಹಿನ್ನೆಲೆ ಕಾಡಿನಿಂದ ನಾಡಿಗೆ ಬಂದಿದ್ದು, ಕಾಡುಕೋಣದ ಮೇಲೆ ನಿಗಾ ಇಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.