ಬೆಳಗಾವಿ : ಇಲ್ಲಿನ ಹಿಂಡಲಗಾ ಜೈಲಲ್ಲಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರನ್ನು ಅವರ ಪತ್ನಿ ಶಿವಲೀಲಾ ಕುಲಕರ್ಣಿ, ಪುತ್ರಿಯರಾದ ವೈಶಾಲಿ, ದೀಪಾಲಿ ಹಾಗೂ ಪುತ್ರ ಹೇಮಂತ ಭೇಟಿಯಾದರು.
ಧಾರವಾಡದಿಂದ ಸಂಜೆ ನಾಲ್ಕು ಗಂಟೆಗೆ ಆಗಮಿಸಿದ್ದ ಕುಟುಂಬಸ್ಥರು, ಜೈಲಿನೊಳಗೆ ತೆರಳಿ ವಿನಯ್ ಕುಲಕರ್ಣಿ ಅವರನ್ನು ಭೇಟಿಯಾಗಿ ಅವರ ಯೋಗಕ್ಷೇಮ ವಿಚಾರಿಸಿದರು. ಸುಮಾರು 31 ದಿನಗಳ ಬಳಿಕ ಕುಟುಂಬಸ್ಥರನ್ನು ಕಂಡು ವಿನಯ್ ಕುಲಕರ್ಣಿ ಭಾವುಕರಾದರು.
ಕುಟುಂಬಸ್ಥರು ತಂದಿದ್ದ ಆಹಾರ ಸೇವಿಸಿದ ಕುಲಕರ್ಣಿ : ವಿನಯ್ ಕುಲಕರ್ಣಿ ಭೇಟಿ ಮಾಡಿದ ಕುಟುಂಬಸ್ಥರು, ತಾವು ತಂದಿದ್ದ ಆಹಾರವನ್ನು ನೀಡಿದರು. ತಿಂಗಳ ಬಳಿಕ ಮನೆ ಊಟವನ್ನು ವಿನಯ್ ಕುಲಕರ್ಣಿ ಸೇವಿಸಿದರು. ಒಂದು ಗಂಟೆ ಸಮಯಾವಕಾಶ ಮುಗಿದ ಬಳಿಕ ಕುಟುಂಬಸ್ಥರು ಹೊರ ಬಂದರು. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಲು ಕುಟುಂಬಸ್ಥರು ನಿರಾಕರಿಸಿದರು.
ಓದಿ : 'ಶೈಕ್ಷಣಿಕ ವರ್ಷ ಪ್ರಾರಂಭದ ಬಳಿಕ ಅತಿಥಿ ಉಪನ್ಯಾಸಕರ ನೇಮಕ'
ಧಾರವಾಡ ಜಿಲ್ಲೆಯ ಹೆಬ್ಬಳ್ಳಿ ಜಿಪಂ ಸದಸ್ಯ ಯೋಗೇಶಗೌಡ ಕೊಲೆ ಪ್ರಕರಣದ ಆರೋಪದಡಿ ವಿನಯ್ ಕುಲಕರ್ಣಿ 31 ದಿನಗಳಿಂದ ಹಿಂಡಲಗಾ ಜೈಲಲ್ಲಿದ್ದಾರೆ.