ಬೆಳಗಾವಿ/ಚಿಕ್ಕೋಡಿ: ರಾಜ್ಯಾದ್ಯಂತ ವೀಕೆಂಡ್ ಕರ್ಫ್ಯೂ ಹಿನ್ನೆಲೆ ನಗರದ ಗಲ್ಲಿಗಳೆಲ್ಲವೂ ಕೂಡ ಖಾಲಿಖಾಲಿ ಆಗಿದ್ದು, ವ್ಯಾಪಾರ ವಹಿವಾಟು ಇಲ್ಲದೇ ಬಿಕೋ ಎನ್ನುತ್ತಿದ್ದು, ಕರ್ಫ್ಯೂ ಗೆ ಕುಂದಾನಗರಿ ಸಂಪೂರ್ಣ ಸ್ತಬ್ಧವಾಗಿದೆ.
ನಗರದಲ್ಲಿ ಎಲ್ಲ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದು, ಸಂಪೂರ್ಣ ವ್ಯಾಪಾರ ವಹಿವಾಟು ಸ್ಥಗಿತವಾಗಿದೆ. ಇಂದಿನ ವೀಕೆಂಡ್ ಕರ್ಫ್ಯೂ ವೇಳೆ ಯಾರಾದರೂ ಅನಗತ್ಯವಾಗಿ ಓಡಾಟ ನಡೆಸಿದರೆ ಪೊಲೀಸರು ಲಾಠಿ ರುಚಿ ತೋರಿಸುತ್ತಿದ್ದಾರೆ. ನಗರದಲ್ಲಿ ಪೋಲಿಸರು ಬ್ಯಾರಿಕೇಡ್ ಹಾಕಿ ಸಾರ್ವಜನಿಕರು ಓಡಾಡದಂತೆ ನಿರ್ಬಂಧ ಹೆರಿದ್ದಾರೆ. ಸದ್ಯ ಜನರಿಗೇ ಅವಶ್ಯಕತೆ ಇರುವ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಬಟ್ಟೆ ಅಂಗಡಿಗಳು, ಸ್ಟೇಷನರಿ ಶಾಪ್, ಮೊಬೈಲ್, ಬಾರ್ ಮತ್ತು ರೆಸ್ಟೋರೆಂಟ್, ಹೋಟೆಲ್ ಗಳು ಬಂದ್ ಆಗಿದ್ದು, ಒಟ್ಟಾರೆ ಕುಂದಾನಗರಿ ಜನರು ಸರ್ಕಾರ ಹೊರಡಿಸಿದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುತ್ತಿದ್ದಾರೆ.
ಇತ್ತ ಕೊರೊನಾ ನಿಯಂತ್ರಣಕ್ಕ ವೀಕೆಂಡ್ ಕರ್ಪ್ಯೂ ಇದ್ದರೂ ಅನಗತ್ಯ ಓಡಾಟ ನಡೆಸುವ ಬೈಕ್ ಸವಾರರಿಗೆ ಹುಕ್ಕೇರಿ ಪೊಲೀಸರು ಲಾಠಿ ರುಚಿ ತೊರಿಸುತ್ತಿದ್ದಾರೆ. ಚಿಕ್ಕೋಡಿ ಪಟ್ಟಣದಲ್ಲಿ ಸಂಪೂರ್ಣವಾಗಿ ಎಲ್ಲ ಅಂಗಡಿ ಮುಂಗಟ್ಟುಗಳನ್ನು ಬಂದ ಮಾಡಲಾಗಿದ್ದು, ಅನಗತ್ಯವಾಗಿ ತಿರುಗಾಡಿದರೆ ಡಿವೈಎಸ್‌ಪಿ ಮನೋಜಕುಮಾರ ಅವರ ನೇತೃತ್ವದಲ್ಲಿ ಆರೋಗ್ಯ ಇಲಾಖೆ ಸಿಬ್ಬಂಧಿಗಳು ರ‍್ಯಾಪಿಡ್ ಟೆಸ್ಟ್ ಮಾಡುತ್ತಿದ್ದಾರೆ.
ಓದಿ : ಮಾಸ್ಕ್ ಹಾಕಲು ಹೇಳಿದ ಅಧಿಕಾರಿಗಳಿಗೇ ಯುವಕನಿಂದ ಅವಾಜ್ - ವಿಡಿಯೋ