ಬೆಳಗಾವಿ: ಜನತಂತ್ರ, ರೈತರನ್ನು ಬದುಕಿಸಲಿಕ್ಕಾಗಿ ಬಿಜೆಪಿಗೆ ನಮ್ಮ ಮತ ಇಲ್ಲ. ಬೆಳಗಾವಿ ಲೋಕಸಭೆ ಉಪಚುನಾವಣೆಯೇ ರೈತರ ಆಂದೋಲನದ ಒಂದು ಭಾಗವಾಗಲಿದೆ ಎಂದು ಮಾಜಿ ಕೇಂದ್ರ ಸಚಿವ ಬಾಬಾಗೌಡ ಪಾಟೀಲ ತಿಳಿಸಿದ್ದಾರೆ.
ನಗರದಲ್ಲಿ ಮಾಧ್ಯಮದಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ರೈತರನ್ನು ಬದುಕಿಸಲಿಕ್ಕೆ ಬಿಜೆಪಿಗೆ ಮತ ನೀಡೊದಿಲ್ಲ. ರೈತರನ್ನು ಅರೆಸ್ಟ್ ಮಾಡಿದ್ರೆ, ದೇಶ ಉದ್ಧಾರ ಆಗೋದಿಲ್ಲ. ಇತ್ತೀಚಿನ ಬಿಜೆಪಿ ಪಕ್ಷದ ಚಟುವಟಿಕೆಗಳನ್ನು ನೋಡಿದ್ರೆ ದೇಶದಲ್ಲಿ ಜನತಂತ್ರ ಉಳಿಯೋ ಲಕ್ಷಣಗಳು ಕಾಣುತ್ತಿಲ್ಲ ಎಂದು ಆರೋಪ ಮಾಡಿದರು.
ಡಿಕೆಶಿ ಭೇಟಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಇವತ್ತು ನಮ್ಮ ಮನೆಗೆ ಬಂದು ಉಪಚುನಾವಣೆಯಲ್ಲಿ ಬೆಂಬಲಿಸುವಂತೆ ಮನವಿ ಮಾಡಿದ್ದಾರೆ. ನಾವು ಈಗಾಗಲೇ ನರೇಂದ್ರ ಮೋದಿ ಅವರನ್ನು ಅಧಿಕಾರದಿಂದ ಕೆಳಗೆ ಇಳಿಸೋ ತೀರ್ಮಾನ ಮಾಡಿದ್ದೇವೆ. ಇದಲ್ಲದೇ ಕಾಂಗ್ರೆಸ್ ಪ್ರಣಾಳಿಕೆ ಮಾಡುವ ಸಂದರ್ಭದಲ್ಲಿ ರೈತರನ್ನು ಕೇಳಿ ಅನೇಕ ವಿಷಯ ಸೇರಿಸಬೇಕು ಎಂದು ಹೇಳಿದ್ದೇನೆ. ಇದಕ್ಕೆ ಡಿಕೆಶಿ ಹೈಕಮಾಂಡ್ ಜತೆಗೆ ಮಾತನಾಡುವ ಭರವಸೆ ಕೊಟ್ಟಿದ್ದಾರೆ ಎಂದರು.
ನಾವು ಬಿಜೆಪಿಗೆ ಮತ ನೀಡಲ್ಲ ಎಂದು ತೀರ್ಮಾನ ಮಾಡಿದ್ದೇವೆ. ಸಹಜವಾಗಿ ಕಾಂಗ್ರೆಸ್ ಬೆಂಬಲಿಸುವಂತೆ ಅರ್ಥವಾಗುತ್ತದೆ. ಯಾವುದೇ ಪರಿಸ್ಥಿತಿಯಲ್ಲೂ
ರೈತರ ಉಳಿವಿಗಾಗಿ ಬಿಜೆಪಿಯನ್ನು ಸೋಲಿಸಲು ಕೆಲಸ ಮಾಡಲಾಗುವುದು. ಪಕ್ಷಕ್ಕಿಂತ ಕೃಷಿ ಉಳಿಸುವುದು ನಮ್ಮ ಮೂಲ ಉದ್ದೇಶವಾಗಿದೆ ಎಂದು ಬಾಬಾಗೌಡ ಪಾಟೀಲ ತಿಳಿಸಿದರು.
ಓದಿ: ಹಠ ಬಿಟ್ಟು ಮಾತುಕತೆಗೆ ಬನ್ನಿ, ಪರಿಸ್ಥಿತಿ ಬಂದರೆ ಎಸ್ಮಾ ಜಾರಿ: ಸಾರಿಗೆ ಇಲಾಖೆ ಪ್ರಧಾನ ಕಾಯದರ್ಶಿ