ಚಿಕ್ಕೋಡಿ : ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಭಾರಿ ಮಳೆ ಹಿನ್ನಲೆ ಕೃಷ್ಣಾ, ಪಂಚಗಂಗಾ ನದಿಗಳಲ್ಲಿ ನೀರಿನ ಮಟ್ಟ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ನರಸಿಂಹವಾಡಿಯ ಶ್ರೀಕ್ಷೇತ್ರ ದತ್ತ ಮಂದಿರ ಜಲಾವೃತಗೊಂಡಿದೆ.
ಕೃಷ್ಣಾ ಹಾಗೂ ಪಂಚಗಂಗಾ ನದಿ ಸಂಗಮ ಪ್ರದೇಶ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ನರಸಿಂಹವಾಡಿ ಗ್ರಾಮದ ಶ್ರೀಕ್ಷೇತ್ರ ದತ್ತ ಮಂದಿರಕ್ಕೆ ನದಿ ನೀರು ನುಗ್ಗಿದ್ದರಿಂದ ದೇವರಿಗೆ ಪೂಜೆ ನೆರವೇರಿಸಿ, ದತ್ತ ಪಾದುಕೆ, ಉತ್ಸವಮೂರ್ತಿಯನ್ನು ಹತ್ತಿರದ ನಾರಾಯಣಸ್ವಾಮಿ ದೇವಸ್ಥಾನಕ್ಕೆ ಸ್ಥಳಾಂತ ಮಾಡಲಾಗಿದೆ.
ಕಳೆದ ನಾಲ್ಕೈದು ದಿನಗಳಿಂದ ಬಿಟ್ಟುಬಿಡದೆ ಸುರಿಯುತ್ತಿರುವ ಮಹಾಮಳೆಗೆ ನದಿತೀರದಲ್ಲಿ ಪ್ರವಾಹ ಆತಂಕ ಎದುರಾಗಿದೆ.