ETV Bharat / state

ನಕಲಿ ಅಂಕಪಟ್ಟಿ ನೀಡಿದ 51 ವಿದ್ಯಾರ್ಥಿಗಳಿಗೆ ಪ್ರವೇಶ ನಿರಾಕರಿಸಿದ ವಿಟಿಯು - fake marks card

ನಕಲಿ ಅಂಕಪಟ್ಟಿ ನೀಡಿ ಇಂಜಿನಿಯರಿಂಗ್​ ವಿವಿಧ ವಿಭಾಗಗಳಿಗೆ ಪ್ರವೇಶ ಪಡೆಯಲು ಬಯಸಿದ್ದ ವಿದ್ಯಾರ್ಥಿಗಳ ಪ್ರವೇಶವನ್ನು ವಿಟಿಯು ತಿರಸ್ಕರಿಸಿದೆ.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ
author img

By

Published : May 17, 2023, 11:23 AM IST

ಬೆಳಗಾವಿ: ನಕಲಿ ಅಂಕಪಟ್ಟಿ ನೀಡಿದ ಹಿನ್ನೆಲೆಯಲ್ಲಿ 51 ವಿದ್ಯಾರ್ಥಿಗಳ ಇಂಜಿನಿಯರಿಂಗ್ ಪ್ರವೇಶಾತಿಯನ್ನು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ತಿರಸ್ಕರಿಸಿದೆ. ಮೊದಲ ವರ್ಷದ ಇಂಜಿನಿಯರಿಂಗ್‌ನ ವಿವಿಧ ವಿಭಾಗಗಳಿಗೆ ಈ ವಿದ್ಯಾರ್ಥಿಗಳು ಪ್ರವೇಶ ಬಯಸಿದ್ದರು. ಎಲ್ಲ ವಿದ್ಯಾರ್ಥಿಗಳ ದ್ವಿತೀಯ ಪಿಯುಸಿ ಅಂಕಪಟ್ಟಿ ನಕಲಿ ಎಂದು ಸಾಬೀತಾಗಿದ್ದು ಕಠಿಣ ಕ್ರಮ ತೆಗೆದುಕೊಳ್ಳಲಾಗಿದೆ.

ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ ನೀಡಿದ ಈ ಪ್ರಮಾಣ ಪತ್ರಗಳು ನಕಲಿ ಎಂದು ತಿಳಿದುಬಂದಿದೆ. ದಾಖಲೆಗಳ ಪರಿಶೀಲನೆಯಲ್ಲಿ ‌ಕ್ಯೂ‌ಆರ್ ಕೋಡ್ ಸ್ಕ್ಯಾನ್ ನಡೆಸಿದಾಗ ಅಕ್ರಮ ದೃಢಪಟ್ಟಿದೆ. ಇದಕ್ಕೂ ಮುನ್ನ ಎಲ್ಲ ಅಂಕಪಟ್ಟಿಗಳನ್ನು ತಾಂತ್ರಿಕ ಶಿಕ್ಷಣ ಇಲಾಖೆ ಮಾನ್ಯ ಮಾಡಿತ್ತು. ಆದರೆ ಕಾಲೇಜುವಾರು ಅನುಮೋದನೆ ‌ನೀಡುವಾಗ ವಿಟಿಯು ಅಮಾನ್ಯ ಮಾಡಿದೆ.

ನಕಲಿ ಅಂಕಪಟ್ಟಿಗಳ ಹಿಂದೆ ದೊಡ್ಡ ಹಗರಣ ನಡೆದಿರುವ ಬಗ್ಗೆ ವಿಟಿಯು ಶಂಕೆ ವ್ಯಕ್ತಪಡಿಸಿದೆ. ರಾಜ್ಯ ಸರ್ಕಾರ ಮತ್ತು ಎನ್ಐಓಎಸ್‌ಗೆ ಪತ್ರ ಬರೆಯಲು ತೀರ್ಮಾನಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಅಕ್ರಮವೆಸಗಿದ ವಿದ್ಯಾರ್ಥಿಗಳು ಮ್ಯಾನೇಜ್‌ಮೆಂಟ್‌ ‌ಕೋಟಾದಡಿ ಬೆಂಗಳೂರಿನ ಪ್ರತಿಷ್ಠಿತ ‌ಇಂಜಿನಿಯರಿಂಗ್‌ ಕಾಲೇಜಿಗೆ ಪ್ರವೇಶ ಪಡೆದಿದ್ದರು. ವಿದ್ಯಾರ್ಥಿಗಳು ತುಮಕೂರು, ಚಿಕ್ಕಬಳ್ಳಾಪುರ ಮೂಲದವರೆಂಬ‌ ಮಾಹಿತಿ ಸಿಕ್ಕಿದೆ.

ಇದನ್ನೂ ಓದಿ: ಸ್ಟಡಿ ಸೆಂಟರ್ ಹೆಸರಿನಲ್ಲಿ ನಕಲಿ ಅಂಕಪಟ್ಟಿ ಮಾರಾಟ: ಮೂವರ ಬಂಧನ

ನಕಲಿ ಅಂಕಪಟ್ಟಿ ಮಾರಾಟ ಪ್ರಕರಣ: ಏ.28ರಂದು ರಂದು ದಾಖಲಾದ ಪ್ರಕರಣವೊಂದರಲ್ಲಿ ಸ್ಟಡಿ ಸೆಂಟರ್​ ಹೆಸರಲ್ಲಿ ಎಸ್ಎಸ್ಎಲ್​ಸಿ ಮತ್ತು ಪಿಯುಸಿಯ ನಕಲಿ ಅಂಕಪಟ್ಟಿ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಸಿಸಿವಿ ಪೊಲೀಸರು ಬಂಧಿಸಿದ್ದರು. ಮೈಲಾರಿ, ಮೊಹಮ್ಮದ್ ತೈಹೀದ್, ಪ್ರಭುರಾಜ್ ಬಂಧಿತರು. ಇವರು KIOS ಹೆಸರಿನಲ್ಲಿ ಕಚೇರಿ ತೆರೆದಿದ್ದು ಬೆಂಗಳೂರು ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿ ಅಂಕಪಟ್ಟಿಗಳನ್ನು ವಶಕ್ಕೆ ಪಡೆದಿದ್ದರು.

ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಅನುಮತಿ ಪಡೆಯದೇ ಸ್ಟಡಿ ಸೆಂಟರ್ ನಡೆಸುತ್ತಿರುವುದು ಪತ್ತೆಯಾಗಿತ್ತು. 10ನೇ ತರಗತಿ, ಪಿಯುಸಿ ಹಾಗೂ ಪದವಿಯ ನಕಲಿ ಅಂಕಪಟ್ಟಿ ತಯಾರು ಮಾಡಿ ಮಾರಾಟ ಮಾಡುತ್ತಿದ್ದರು. ಈ ಹಿಂದೆ ಸಾರ್ವಜನಿಕ ಶಿಕ್ಷಣ ಇಲಾಖೆ KIOSನಲ್ಲಿ ಅಂಕಪಟ್ಟಿ ವಿತರಿಸುತಿತ್ತು.

ಆರೋಪಿಗಳು ಸರ್ಕಾರಕ್ಕೆ ಸಮನಾಂತರವಾಗಿ ಅನುಮತಿ ಪಡೆಯದೇ ಮಾರ್ಕ್ಸ್ ಕಾರ್ಡ್ ನೀಡುತ್ತಿದ್ದರು. ದಾಳಿಯಲ್ಲಿ 70 ಅಂಕಪಟ್ಟಿಗಳು, ನೋಂದಣಿ ಸಂಖ್ಯೆ ನಮೂದಿಸದ 190 ಅಂಕಪಟ್ಟಿ, ಯಾವುದೇ ಮಾಹಿತಿ ಇಲ್ಲದ 7100 ಅಂಕಪಟ್ಟಿ, 5500 ಉತ್ತರ ಪ್ರತಿಗಳು, 25 ಅಡ್ಮಿಷನ್ ರಿಜಿಸ್ಟರ್​ಗಳು, ಕಲರ್ ಪ್ರಿಂಟ್, ಜೆರಾಕ್ಸ್ ಮಿಷನ್ ಸೀಜ್ ಮಾಡಲಾಗಿತ್ತು. ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ನಕಲಿ ಅಂಕಪಟ್ಟಿ ಜಾಲದ ವಿರುದ್ಧ ಸಿಸಿಬಿ ಸಮರ; ಆರೂವರೆ ಸಾವಿರಕ್ಕೂ ಅಧಿಕ ಅಂಕಪಟ್ಟಿಗಳು ಜಪ್ತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.