ETV Bharat / state

ಅಥಣಿ: ಮತಗಟ್ಟೆಗೆ ಪೂಜೆ ಸಲ್ಲಿಸಿ ಮತ ಚಲಾಯಿಸಿದ ಗ್ರಾಮಸ್ಥರು

ಗ್ರಾಮ ಪಂಚಾಯತ್​ ಚುನಾವಣೆ ಹಿನ್ನೆಲೆ ಅಥಣಿ ತಾಲೂಕಿನ ಜಕ್ಕಾರಟ್ಟಿ ಗ್ರಾಮದಲ್ಲಿ ಜನತೆ ಮತಗಟ್ಟೆಗೆ ಪೂಜೆ ಸಲ್ಲಿಸಿದ್ದಾರೆ.

voters worship the polling booth
ಅಥಣಿ: ಮತಗಟ್ಟೆಗೆ ಪೂಜೆ ಸಲ್ಲಿಸಿ ಮತ ಚಲಾಯಿಸಿದ ಗ್ರಾಮಸ್ಥರು
author img

By

Published : Dec 27, 2020, 1:07 PM IST

ಅಥಣಿ: 2ನೇ ಹಂತದ ಗ್ರಾಮ ಪಂಚಾಯತ್​ ಚುನಾವಣೆಗೆ ಮತದಾನ ಪ್ರಕ್ರಿಯೆ ಭರದಿಂದ ಸಾಗುತ್ತಿದೆ. ಅಥಣಿ ತಾಲ್ಲೂಕಿನ 41 ಗ್ರಾಮ ಪಂಚಾಯಿತಿ ಚುನಾವಣೆಗೆ ಮುಂಜಾನೆಯಿಂದಲೇ ಮತದಾರರು ಉತ್ಸಾಹದಿಂದ ಮತಗಟ್ಟೆಗಳ ಕಡೆಗೆ ಆಗಮಿಸಿದ್ದಾರೆ.

ಅಥಣಿ: ಮತಗಟ್ಟೆಗೆ ಪೂಜೆ ಸಲ್ಲಿಸಿ ಮತ ಚಲಾಯಿಸಿದ ಗ್ರಾಮಸ್ಥರು

ಕೋವಿಡ್- 19 ನಿಯಮಾನುಸಾರ ಸಾಮಾಜಿಕ ಅಂತರ ಕಾಪಾಡಿಕೊಂಡು ಮತದಾರರು ಹುಮ್ಮಸ್ಸಿನಿಂದ ತಮ್ಮ ಹಕ್ಕನ್ನು ಚಲಾಯಿಸುತ್ತಿದ್ದಾರೆ. ತಾಲೂಕಿನಲ್ಲಿ 1,735 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದು, 258 ಬೂತ್​ಗಳನ್ನು ನಿರ್ಮಿಸಿ ಮತ ಚಲಾವಣೆಗೆ ಅವಕಾಶ ಕಲ್ಪಿಸಲಾಗಿದೆ.

ಮತಗಟ್ಟೆ ಪೂಜಿಸಿದ ಗ್ರಾಮಸ್ಥರು:

ಅಥಣಿ ತಾಲೂಕಿನ ಜಕ್ಕಾರಟ್ಟಿ ಗ್ರಾಮಸ್ಥರು ಮತಗಟ್ಟೆ ಕೊಠಡಿಯ ಮುಖ್ಯದ್ವಾರಕ್ಕೆ ಪೂಜೆ ಸಲ್ಲಿಸಿ, ಆರತಿ ಎತ್ತಿ ಮತ ಚಲಾವಣೆ ಮಾಡಿದ್ದಾರೆ. ಜಕ್ಕಾರಟ್ಟಿ ಪಂಚಾಯಿತಿ ವ್ಯಾಪ್ತಿಯಲ್ಲಿ 12 ಸದಸ್ಯ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, 5 ಬೂತ್​ಗಳನ್ನು ನಿರ್ಮಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.