ETV Bharat / state

ಉಪ ಚುನಾವಣೆ: ಅಥಣಿಯಿಂದ ಕೆಜೆಪಿ ಅಭ್ಯರ್ಥಿಯಾಗಿ ಯುವ ಪತ್ರಕರ್ತ ಕಣಕ್ಕೆ! - Young Journalist Vinayaka Mathpathi contest as KJP candidate

ವಿಧಾನಸಭಾ ಉಪ ಚುನಾವಣೆಯಲ್ಲಿ ಬೆಳಗಾವಿಯ ಅಥಣಿ ಮತ ಕ್ಷೇತ್ರದಿಂದ ಕೆಜೆಪಿ ಅಭ್ಯರ್ಥಿಯಾಗಿ ಯುವ ಪತ್ರಕರ್ತ ವಿನಾಯಕ ಮಠಪತಿ ಅಖಾಡಕ್ಕೆ ಧುಮುಕಿದ್ದು, ಇಂದು ಉಮೇದುವಾರಿಕೆ ಸಲ್ಲಿಸಲಿದ್ದಾರೆ.

ಕೆಜೆಪಿ ಅಭ್ಯರ್ಥಿಯಾಗಿ ಯುವ ಪತ್ರಕರ್ತ ಕಣಕ್ಕೆ
author img

By

Published : Nov 18, 2019, 1:06 PM IST

Updated : Nov 18, 2019, 1:15 PM IST

ಚಿಕ್ಕೋಡಿ: ರಾಜ್ಯದಲ್ಲಿ ತೀವ್ರ ಕುತೂಹಲ ಮೂಡಿಸಿರುವ ಉಪ ಚುನಾವಣೆಗೆ ಬೆಳಗಾವಿಯ ಅಥಣಿ ಕ್ಷೇತ್ರದಿಂದ ಕೆಜೆಪಿ‌ ಅಭ್ಯರ್ಥಿಯಾಗಿ ಯುವ ಪತ್ರಕರ್ತ ವಿನಾಯಕ ಮಠಪತಿ ಅಖಾಡಕ್ಕೆ ಧುಮುಕಿದ್ದು, ಇಂದು ನಾಮಪತ್ರ ಸಲ್ಲಿಸಲಿದ್ದಾರೆ.

ಪತ್ರಕರ್ತ ವಿನಾಯಕ ಮಠಪತಿ ಅಥಣಿ ತಾಲೂಕಿನ ಸಪ್ತಸಾಗರ ಗ್ರಾಮದವರಾಗಿದ್ದು, ಅನರ್ಹ ಶಾಸಕ ಮಹೇಶ್​ ಕುಮಟಳ್ಳಿಯಿಂದ ತೆರವಾದ ಅಥಣಿ ಕ್ಷೇತ್ರದಿಂದ ಕರ್ನಾಟಕ ಜನತಾ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ವಿನಾಯಕ ಮಠಪತಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದ್ದು, ಸದ್ಯ ಖಾಸಗಿ ಮಾಧ್ಯಮ ಸಂಸ್ಥೆಯೊಂದರ ಬೆಳಗಾವಿ ಜಿಲ್ಲಾ ವರದಿಗಾರರಾಗಿದ್ದಾರೆ.

ಸದ್ಯ ಘಟಾನುಘಟಿ ರಾಜಕಾರಣಿಗಳ ವಿರುದ್ಧ ಚುನಾವಣಾ ಅಖಾಡಕ್ಕೆ ಧುಮುಕಿರುವ ಪತ್ರಕರ್ತ ವಿನಾಯಕ ಮಠಪತಿ, ಅದಮ್ಯ ಫೌಂಡೇಶನ್ ಎಂಬ ಸೇವಾ ಸಂಸ್ಥೆಯೊಂದನ್ನು ಪ್ರಾರಂಭಿಸಿದ್ದಾರೆ. ಉತ್ತರ ಕರ್ನಾಟಕದಲ್ಲಿ ನೆರೆ ಹಾವಳಿ ಉಂಟಾದಾಗ ತಮ್ಮ ಸಂಸ್ಥೆ ಮೂಲಕ ಸಂತ್ರಸ್ತರಿಗೆ ನೆರೆವಾಗುವ ಮೂಲಕ ಜನರ ವಿಶ್ವಾಸ ಗಳಿಸುವ ಪ್ರಯತ್ನ ಮಾಡಿದ್ದರು.

ಚಿಕ್ಕೋಡಿ: ರಾಜ್ಯದಲ್ಲಿ ತೀವ್ರ ಕುತೂಹಲ ಮೂಡಿಸಿರುವ ಉಪ ಚುನಾವಣೆಗೆ ಬೆಳಗಾವಿಯ ಅಥಣಿ ಕ್ಷೇತ್ರದಿಂದ ಕೆಜೆಪಿ‌ ಅಭ್ಯರ್ಥಿಯಾಗಿ ಯುವ ಪತ್ರಕರ್ತ ವಿನಾಯಕ ಮಠಪತಿ ಅಖಾಡಕ್ಕೆ ಧುಮುಕಿದ್ದು, ಇಂದು ನಾಮಪತ್ರ ಸಲ್ಲಿಸಲಿದ್ದಾರೆ.

ಪತ್ರಕರ್ತ ವಿನಾಯಕ ಮಠಪತಿ ಅಥಣಿ ತಾಲೂಕಿನ ಸಪ್ತಸಾಗರ ಗ್ರಾಮದವರಾಗಿದ್ದು, ಅನರ್ಹ ಶಾಸಕ ಮಹೇಶ್​ ಕುಮಟಳ್ಳಿಯಿಂದ ತೆರವಾದ ಅಥಣಿ ಕ್ಷೇತ್ರದಿಂದ ಕರ್ನಾಟಕ ಜನತಾ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ವಿನಾಯಕ ಮಠಪತಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದ್ದು, ಸದ್ಯ ಖಾಸಗಿ ಮಾಧ್ಯಮ ಸಂಸ್ಥೆಯೊಂದರ ಬೆಳಗಾವಿ ಜಿಲ್ಲಾ ವರದಿಗಾರರಾಗಿದ್ದಾರೆ.

ಸದ್ಯ ಘಟಾನುಘಟಿ ರಾಜಕಾರಣಿಗಳ ವಿರುದ್ಧ ಚುನಾವಣಾ ಅಖಾಡಕ್ಕೆ ಧುಮುಕಿರುವ ಪತ್ರಕರ್ತ ವಿನಾಯಕ ಮಠಪತಿ, ಅದಮ್ಯ ಫೌಂಡೇಶನ್ ಎಂಬ ಸೇವಾ ಸಂಸ್ಥೆಯೊಂದನ್ನು ಪ್ರಾರಂಭಿಸಿದ್ದಾರೆ. ಉತ್ತರ ಕರ್ನಾಟಕದಲ್ಲಿ ನೆರೆ ಹಾವಳಿ ಉಂಟಾದಾಗ ತಮ್ಮ ಸಂಸ್ಥೆ ಮೂಲಕ ಸಂತ್ರಸ್ತರಿಗೆ ನೆರೆವಾಗುವ ಮೂಲಕ ಜನರ ವಿಶ್ವಾಸ ಗಳಿಸುವ ಪ್ರಯತ್ನ ಮಾಡಿದ್ದರು.

Intro:ಯುವ ಪತ್ರಕರ್ತ ಅಥಣಿ ಮತಕ್ಷೇತ್ರದ ಕೆಜೆಪಿ ಅಭ್ಯರ್ಥಿBody:

ಚಿಕ್ಕೋಡಿ :
ಸ್ಟೋರಿ

ರಾಜ್ಯದಲ್ಲಿ ತೀವ್ರ ಕುತೂಹಲ ಮೂಡಿಸಿರುವ ಉಪ  ಚುನಾವಣೆ ಹಿನ್ನಲೆ ಬೆಳಗಾವಿಯ ಅಥಣಿ ವಿಧಾನಸಭೆಗೆ, ಕೆಜೆಪಿ‌ ಪಕ್ಷದಿಂದ ಅಥಣಿ ತಾಲಳಕಿನ ನದಿ ಸಪ್ತಸಾಗರ ಗ್ರಾಮದ ಯುವ ಪತ್ರಕರ್ತ ವಿನಾಯಕ ಮಠಪತಿ ಇಂದು ನಾಮಪತ್ರ ಸಲ್ಲಿಸಲಿದ್ದಾರೆ. 

ಈ ಮೂಲಕ ರಾಜ್ಯದ ಗಮನಸೆಳೆಯುವ ಪ್ರಯತ್ನ ಮಾಡಲಿದ್ದಾರೆ. ರಾಜ್ಯದ ಪ್ರವಾಹಪೀಡಿತ ಪ್ರದೇಶವಾದ ಕೃಷ್ಣಾ ನದಿ ತೀರದಲ್ಲಿ ಬರುವ ಅಥಣಿ ತಾಲೂಕಿನ ವಿವಿಧ ಹಳ್ಳಿಗಳು ಪ್ರತಿ ವರ್ಷವೂ ಪ್ರವಾಹಕ್ಕೆ ಸಿಲುಕಿ ನಲುಗುತ್ತಿವೆ. ಈ ನಿಟ್ಟಿನಲ್ಲಿ ತಾಲೂಕಿನ ಸಮಸ್ಯೆ ನಿವಾರಣೆಗಾಗಿ ಯುವ ಪತ್ರಕರ್ತ ಈಗ ರಾಜಕೀಯ ಸೇರುವ ಮೂಲಕ ಸಮಾಜ ಸುಧಾರಣೆಗೆ ಮುಂದಾಗುತ್ತಿದ್ದಾರೆ. ಅವರ ಪ್ರಯತ್ನಕ್ಕೆ ಯುವಕರು ಕೈಜೋಡಿಸಿದ್ದು, ವಿನಾಯಕ ಅವರ ಪಾಲಿಗೆ ಮತ್ತಷ್ಟು ಉತ್ಸಾಹ ತಂದುಕೊಟ್ಟಿದೆ. ಒಟ್ಟಾರೆ, ಯುವಕನ ಸ್ಪರ್ಧೆ ಅಥಣಿಯ ಚುನಾವಣಾ ಕಣದಲ್ಲಿ ಸಂಚಲನಕ್ಕೆ ಕಾರಣವಾಗಿದೆ.

ಈ ಯುವ ಪತ್ರಕರ್ತ ಯಾರು ಏನು ಇತನ ಹಿನ್ನಲೆ?

ಮಹೇಶ್ ಕುಮಠಳ್ಳಿ ರಾಜೀನಾಮೆಯಿಂದ ತೆರವಾದ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆಯುತ್ತಿದ್ದು, ಹೊಸ ಮುಖ ರಾಜಕೀಯಕ್ಕೆ ಧುಮುಕಿದೆ. ಪತ್ರಿಕೋದ್ಯಮದಲ್ಲಿ ಪದವಿ ಪೂರೈಸಿ ರಾಜ್ಯದ ಪ್ರತಿಷ್ಠಿತ ಖಾಸಗಿ ಸುದ್ದಿ ವಾಹಿನಿಯಲ್ಲಿ ವರದಿಗಾರರಾಗಿ ಕೆಲಸ ಮಾಡುತ್ತಿದ್ದ ಯುವಕ, ಸದ್ಯ ನಡೆಯಲಿರುವ ವಿಧಾನಸಭೆ ಚುನಾವಣೆ ಹಿನ್ನಲೆ ಕರ್ನಾಟಕ ಜನತಾ ಪಕ್ಷದ ವತಿಯಿಂದ ಅಭ್ಯರ್ಥಿಯಾಗಿ ಕಣಕ್ಕೆ ಧುಮುಕಿದ್ದಾರೆ.

ವಿನಾಯಕ ಮಠಪತಿ ಹುಟ್ಟಿದ್ದು ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಸಪ್ತಸಾಗರ ಗ್ರಾಮದಲ್ಲಿ. ಅತ್ಯಂತ ಬಡ ಮನೆತನದಲ್ಲಿ ಹುಟ್ಟಿದ್ದರು ಇವರ ವಿಧ್ಯಾಭ್ಯಾಸಕ್ಕೆ ಯಾವುದೇ ತೊಂದರೆ ಆಗದಂತೆ ಕಲಿಕೆಯನ್ನು ಮುಂದುವರೆಸಿದರು. ಅಥಣಿ ಕೆಎಲ್ಇ ಕಾಲೇಜಿನಲ್ಲಿ ವಿಜ್ಞಾನ ಪದವಿ ಪಡೆದು ಮುಂದೆ ಓದಲು ಹಣಕಾಸಿನ ನೆರವು ಇಲ್ಲದ ಕಾರಣ ಮನೆಯ ಒಂದು ಎಕರೆ ಜಮೀನಿನಲ್ಲಿ ಕೃಷಿ ಮಾಡಿದರು. ನಂತರ ಸ್ವಂತ ದುಡಿಮೆಯಿಂದ ರಾಜ್ಯದ ಪ್ರತಿಷ್ಠಿತ ಕಾಲೇಜಿನಲ್ಲಿ ಒಂದಾದ ಎಸ್ ಡಿ ಎಂ  ಶಿಕ್ಷಣ ಸಂಸ್ಥೆಯಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದಾರೆ. ಸಾಹಿತ್ಯದಲ್ಲಿ ಅಪಾರ ಆಸಕ್ತಿ ಹೊಂದಿದುವ ಇವರು ಎಸ್ ಎಲ್ ಭೈರಪ್ಪ, ಪೂರ್ಣಚಂದ್ರ ತೇಜಸ್ವಿ, ರವಿ ಬೆಳಗೆರೆ ಅವರ ಎಲ್ಲಾ ಸಾಹಿತ್ಯ ಪುಸ್ತಕಗಳನ್ನು ಓದುತ್ತಾ ಸಮಾಜದ ಒಳ ಸಂಕಟಗಳನ್ನು ಅರಿಯುವ ಮನೆಭಾವನೆ ಹೊಂದಿದ್ದಾರೆ‌. 

ಸ್ನಾತಕೋತ್ತರ ಪದವಿ ಪಡೆದ ನಂತರ ಬೆಂಗಳೂರಿನ first news ಸಂಸ್ಥೆಯಲ್ಲಿ ಕೆಲಸ ಮಾಡಿದ್ದಾರೆ. ನಂತರ ರಾಜ್ಯದ ಪ್ರತಿಷ್ಠಿತ ಸಂಸ್ಥೆ ಈ ಟಿವಿ ಭಾರತದಲ್ಲಿ ಬೆಳಗಾವಿ ಜಿಲ್ಲಾ ಬಿಡಿ ವರದಿಗಾರರಾಗಿ ಇಲ್ಲಿಯವರೆಗೆ ಕೆಲಸ ಮಾಡುತ್ತಿದ್ದಾರೆ. ಆದರೆ ರಾಜ್ಯದಲ್ಲಿ ಬದಲಾದ ರಾಜಕೀಯ ವಿದ್ಯಾಮಾನಗಳನ್ನು ಗಮನಿಸಿ ಸಮಾಜಕ್ಕೆ ತಮ್ಮದೆ ಆದಂತ ಸೈದ್ಧಾಂತಿಕ ಆಶಯಗಳಿಂದ ಏನಾದರೂ  ಮಾಡಬೇಕೆಂದು ಈಗ ಅಥಣಿ ವಿಧಾನಸಭೆಯ ಉಪ ಚುನಾವಣೆಗೆ ಧುಮುಕಿದ್ದಾರೆ. 

ಇಷ್ಟೇ ಅಲ್ಲದೆ ತಮ್ಮದೆ ಒಂದು ಸರ್ಕಾರೇತರ ಸೇವಾ ಸಂಸ್ಥೆಯಾದ ಅದಮ್ಯ ಫೌಂಡೇಶನ್ ಹುಟ್ಟುಹಾಕಿ ಸಮಾಜದ ಯುವ ಶಕ್ತಿಗೆ ಪೂರಕವಾಗುವ ನಿಟ್ಟಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕಳೆದ ಎರಡು ತಿಂಗಳ ಹಿಂದೆ ಉಂಟಾದ ಭೀಕರ ಪ್ರವಾಹಕ್ಕೆ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳು ನಲುಗಿ ಹೋಗಿದ್ದ ಸಂದರ್ಭದಲ್ಲಿ ಅದಮ್ಯ ಫೌಂಡೇಶನ್ ವತಿಯಿಂದ ತಂಡ ಕಟ್ಟಿಕೊಂಡು ಸಂತ್ರಸ್ತರ ಕಣ್ಣೀರು ಒರೆಸುವ ಕೆಲಸ ಮಾಡಿದ್ದಾರೆ. ಬಡ ಮನೆತನದಿಂದ ಹುಟ್ಟಿ ಬೆಳದ ವಿನಾಯಕ ಮಠಪತಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮೂಲಕ ಸಮಾಜ ಸೇವೆಗೆ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ಒಟ್ಟಿನಲ್ಲಿ ಹಣ, ಹೆಂಡ, ಸಾರಾಯಿ, ಇವುಗಳಿಂದಲೇ ಚುನಾವಣೆ ಮಾಡಬೇಕೆಂದು ಸ್ವಯಂ ಘೋಷಿತ ವ್ಯವಸ್ಥೆಯ ಮಧ್ಯೆ, ಹೊಸ ಆಲೋಚನೆಗಳ ಮೂಲಕ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಬೇಕೆಂಬ ಆಶಯದೊಂದಿಗೆ ಅಥಣಿ ವಿಧಾನಸಭೆಗೆ ಕರ್ನಾಟಕ ಜನತಾ ಪಕ್ಷದ ವತಿಯಿಂದ ಅಧಿಕೃತ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದು ಇಂದು ಅಥಣಿಯಲ್ಲಿ ನಾಮಪತ್ರ ಸಲ್ಲಿಸಲ್ಲಿದ್ದಾರೆ.


(ಸೂಚನೆ - ವಿನಾಯಕ ಮಠಪತಿ ಇವರು ಬೆಳಗಾವಿ ಈಟಿವಿ ಭಾರತ ಸ್ಟ್ರೇಂಜರ್ ಆಗಿ ಕೆಲಸ ಮಾಡುತ್ತಿದ್ದರು)
Conclusion:ಸಂಜಯ ಕೌಲಗಿ
ಚಿಕ್ಕೋಡಿ
Last Updated : Nov 18, 2019, 1:15 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.