ಬೆಳಗಾವಿ: ಯೋಗೇಶ್ ಗೌಡ ಕೊಲೆ ಕೇಸ್‌ನಲ್ಲಿ ಬಂಧಿತರಾಗಿರುವ ವಿನಯ್ ಕುಲಕರ್ಣಿ ಅವರನ್ನು ಜೈಲಿನ ನಿಯಮಾವಳಿ ಪ್ರಕಾರ ಹಸ್ತಾಂತರ ಮಾಡದ ಹಿನ್ನೆಲೆ ಶುಕ್ರವಾರ ರಾತ್ರಿ ಹಿಂಡಲಗಾ ಜೈಲಿನಲ್ಲಿಯೇ ಕಳೆಯಲಿದ್ದಾರೆ.
ಹಿಂಡಲಗಾ ಜೈಲು ಮೂಲಗಳ ಪ್ರಕಾರ, ಕೊಲೆ ಕೇಸ್‌ನಲ್ಲಿ ಬಂಧಿತನಾಗಿರುವ ವಿನಯ್ ಕುಲಕರ್ಣಿ ಅವರನ್ನು ನಾಳೆ ಬೆಳಗ್ಗೆ 7ಕ್ಕೆ ಸಿಬಿಐ ಅಧಿಕಾರಿಗಳು ವಶಕ್ಕೆ ಪಡೆಯಲಿದ್ದಾರೆ. ಜೈಲು ನಿಯಮದ ಪ್ರಕಾರ ಸಂಜೆ 6.15ಕ್ಕೆ ಹಿಂಡಲಗಾ ಜೈಲಿನ ಲಾಕಪ್ ಕ್ಲೋಸ್ ಆಗಿದೆ.
ಹೀಗಾಗಿ ಜೈಲಿನಲ್ಲಿ ನ್ಯಾಯಾಂಗ ವಶದಲ್ಲಿರುವ ವಿನಯ್ ಕುಲಕರ್ಣಿಯನ್ನ ಹಸ್ತಾಂತರ ಮಾಡಲು ಬರುವುದಿಲ್ಲ. ನಾಳೆ ಬೆಳಗ್ಗೆ 7ಕ್ಕೆ ವಿನಯ್ ಕುಲಕರ್ಣಿಯನ್ನ ಸಿಬಿಐನವರು ವಶಕ್ಕೆ ಪಡೆಯಲಿದ್ದಾರೆ ಎನ್ನಲಾಗಿದೆ. ನಾಳೆ ವಿನಯ್ ಕುಲಕರ್ಣಿಗೆ 55ನೇ ಹುಟ್ಟುಹಬ್ಬ ಇತ್ತು.