ETV Bharat / state

ಪ್ರತ್ಯೇಕ ಲಿಂಗಾಯತ ಧರ್ಮ‌ ಹೋರಾಟದಿಂದ ನಾನು ಹಿಂದೆ ಸರಿದಿಲ್ಲ: ವಿನಯ್​ ಕುಲಕರ್ಣಿ - ಬಸವಜಯ ಮೃತ್ಯುಂಜಯ ಸ್ವಾಮೀಜಿ

ಲಿಂಗಾಯತ ಧರ್ಮದ ಎಲ್ಲ ಒಳಪಂಗಡಳಿಗೆ ಕೇಂದ್ರದ ಒಬಿಸಿ ಮೀಸಲಾತಿಗೆ ಆಗ್ರಹಿಸುತ್ತಿದ್ದೇವೆ. ಪ್ರತ್ಯೇಕ ಲಿಂಗಾಯತ ಧರ್ಮ‌ ಹೋರಾಟದಿಂದ ನಾನು ಹಿಂದೆ ಸರಿದಿಲ್ಲ ಎಂದು ಮಾಜಿ ಸಚಿವ ವಿನಯ್​ ಕುಲಕರ್ಣಿ ಸ್ಪಷ್ಟಪಡಿಸಿದ್ದಾರೆ.

vinay kulkarni
ವಿನಯ್​ ಕುಲಕರ್ಣಿ
author img

By

Published : Aug 19, 2023, 10:50 AM IST

ಬೆಳಗಾವಿಯ‌ಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ವಿನಯ್​ ಕುಲಕರ್ಣಿ

ಬೆಳಗಾವಿ : ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟದ ವೇಳೆ ವೀರಶೈವ ಮಹಾಸಭೆಯಲ್ಲಿದ್ದ ಕೆಲವರು ವಿರೋಧ ವ್ಯಕ್ತಪಡಿಸಿದ್ದರು. ಆದರೆ, ಅದರಲ್ಲಿನ ಬಹಳಷ್ಟು ಜನ ನಮಗೆ ಬೆಂಬಲ ಕೂಡ ಕೊಟ್ಟಿದ್ದರು. ಈಗ ನಾವೆಲ್ಲಾ ಒಂದಾಗಿ ಮತ್ತೆ ಹೋರಾಟ ಪ್ರಾರಂಭ ಮಾಡೋಣ ಎಂದು ಮಾತನಾಡಿದ್ದೇವೆ ಅಂತಾ ಮಾಜಿ ಸಚಿವ ವಿನಯ್​ ಕುಲಕರ್ಣಿ ಹೇಳಿದರು.

ಬೆಳಗಾವಿಯ‌ಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ನನ್ನನ್ನು ಯಾರೂ ಹೈಜಾಕ್ ಮಾಡಿಲ್ಲ, ಎಲ್ಲರೂ ಒಟ್ಟಾಗಿ ಹೋರಾಟ ಮಾಡೋಣ ಎಂದು ರಾಜ್ಯದ ಮುಖಂಡರನ್ನು ಮೊನ್ನೆ ಕರೆದು ಮನವರಿಕೆ ಮಾಡಲಾಗಿದೆ. ನಮ್ಮಲ್ಲಿನ ತಪ್ಪುಗಳನ್ನು ತಿದ್ದಿಕೊಂಡು ಒಂದಾಗಿ ಇರೋಣ ಎಂದಿದ್ದಾರೆ. ನಾವು ಸಮಾಜ ಒಡೆಯುವ ಕೆಲಸ ಮಾಡಿಲ್ಲ. ಬಸವಣ್ಣನವರ ತತ್ವದ ಮೇಲೆ ಹುಟ್ಟಿಕೊಂಡಿರುವ ಲಿಂಗಾಯತ ಧರ್ಮ‌‌ಕ್ಕೆ ಸಾಂವಿಧಾನಿಕ ಮಾನ್ಯತೆ ಕೇಳಿದ್ದೆವು. ಬೌದ್ಧ, ಸಿಖ್, ಮುಸ್ಲಿಂ, ಜೈನ ಧರ್ಮಗಳಂತೆ ಲಿಂಗಾಯತವನ್ನು ಪ್ರತ್ಯೇಕ ಧರ್ಮ ಮಾಡಿ ಎಂದು ಕೇಳಿದ್ದೆವು. ಆದರೆ, ಆ ಹೋರಾಟ ಕೆಲವರಿಗೆ ಅರ್ಥವಾಗಲಿಲ್ಲ. ಆ ಸಂದರ್ಭದಲ್ಲಿ ದಿಕ್ಕು ತಪ್ಪಿಸುವ ಕೆಲಸವಾಯಿತು. ಈಗ ಲಿಂಗಾಯತ ಧರ್ಮದ ಎಲ್ಲಾ ಒಳಪಂಗಡಳಿಗೆ ಕೇಂದ್ರದ ಒಬಿಸಿ ಮೀಸಲಾತಿಗೆ ಆಗ್ರಹಿಸುತ್ತಿದ್ದೇವೆ" ಎಂದರು.

ಲಿಂಗಾಯತ ಹೋರಾಟದಿಂದ ಹಿಂದೆ ಸರಿದಿಲ್ಲ : ಪ್ರತ್ಯೇಕ ಲಿಂಗಾಯತ ಧರ್ಮ‌ದ ಹೋರಾಟದಿಂದ ಹೊರಗೆ ಬಂದಿದ್ದೀರಾ? ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, "ಹೋರಾಟದಿಂದ ನಾನು ಹೊರಗೆ ಬಂದಿಲ್ಲ, ನಾನ್ಯಾಕೆ ಹೊರ ಬರಲಿ. ಜಾಮದಾರ್ ಅವರು ಹೋರಾಟ ಮಾಡುತ್ತಿದ್ದಾರೆ. ನಮ್ಮಲ್ಲಿ ಯಾವುದೇ ವ್ಯತ್ಯಾಸಗಳು ಇಲ್ಲ. ಆದರೆ, ವ್ಯವಸ್ಥೆಯನ್ನು ಸರಿ ಮಾಡುವ ಅವಶ್ಯಕತೆಯಿದೆ.‌ ಜನಗಣತಿಯಲ್ಲಿ ಲಿಂಗಾಯತ ಪದ ತೆಗೆದು ಹಿಂದೂ ಅಂತಾ ಸೇರಿಸಲಾಗಿದೆ. ಇದರಿಂದ ಲಿಂಗಾಯತ ಸಮಾಜದ ಜನಸಂಖ್ಯೆ ಕುಂಠಿತವಾಗಿದೆ. ಇದನ್ನು ನಾವು ವಿರೋಧ ಮಾಡದೇ ಇದ್ದರೆ ಸಮಾಜದ ವ್ಯವಸ್ಥೆ ಹದಗೆಡುತ್ತದೆ. ನಮ್ಮ ಸಮಾಜದ ಹಿರಿಯರು ಸೇರಿಕೊಂಡು ನಮ್ಮ ಜೊತೆ ಇರುವಂತೆ ನನಗೆ ಮೊನ್ನೆ ಹೇಳಿದ್ದಾರೆ" ಎಂದು ವಿವರಿಸಿದರು.

ಬಿಜೆಪಿ‌ ಸರ್ಕಾರದಲ್ಲಿ ನಮಗೆ ಮೋಸ : ಪಂಚಮಸಾಲಿ‌ ಮೀಸಲಾತಿ‌ ವಿಚಾರದಲ್ಲಿ ದೀರ್ಘ ಹಂತಕ್ಕೆ ಹೋಗುವ ರೀತಿಯಲ್ಲಿ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೋರಾಟ ಮಾಡಿದ್ದರು. ಆದರೆ, ಆ ಹೋರಾಟಕ್ಕೆ ಜಯ ಸಿಗಲಿಲ್ಲ, ಆಗ ನಮಗೆ ಮೋಸ ಆಯ್ತು. ಅಧಿವೇಶನಕ್ಕೂ ಮುಂಚೆ ಲಕ್ಷ್ಮಿ ಹೆಬ್ಬಾಳ್ಕರ್, ವಿಜಯಾನಂದ ಕಾಶಪ್ಪನವರ ಸೇರಿದಂತೆ ಹಲವು ನಾಯಕರೊಂದಿಗೆ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವಂತೆ ಮನವಿ ಮಾಡಿದ್ದೇವೆ. ಆಗ ಸಿಎಂ ಒಂದು ತಿಂಗಳು ಕಾಲಾವಕಾಶ ಕೇಳಿದ್ದರು. ಹೊಸದಾಗಿ ಸರ್ಕಾರ ರಚನೆ ಆಗಿದೆ, ಅಧಿವೇಶನ ಮುಗಿದ ನಂತರ ಸಮಯ ಕೊಡುವುದಾಗಿ ಸಿಎಂ ಹೇಳಿದ್ದಾರೆ. ಇದರ ಜೊತೆಗೆ ಲಿಂಗಾಯತ ಒಳಪಂಗಡಗಳಿಗೆ ಕೇಂದ್ರದ ಒಬಿಸಿ ಮೀಸಲಾತಿ ಸಿಗಬೇಕಿದೆ. ಈ ಬಗ್ಗೆ ಮೊನ್ನೆ ರಾಹುಲ್ ಗಾಂಧಿಯವರ ಸಭೆಯಲ್ಲೂ‌ ನಾನು ಪ್ರಸ್ತಾವನೆ ಮಾಡಿದ್ದೇನೆ ಎಂದರು.

ಇದನ್ನೂ ಓದಿ : 'ಹಿಂದೂ' ಎಂಬುದು ಧರ್ಮವೇ ಅಲ್ಲ, 'ಲಿಂಗಾಯತ'ವನ್ನು ಸ್ವತಂತ್ರ ಧರ್ಮವೆಂದು ಪರಿಗಣಿಸಿ: ಡಾ. ಸಿದ್ದರಾಮ ಸ್ವಾಮೀಜಿ

ಬಿಜೆಪಿ 2ಎ ಮೀಸಲಾತಿ ನೀಡಲಿಲ್ಲ ಎಂದು ಕಾಂಗ್ರೆಸ್​ಗೆ ಲಿಂಗಾಯತ ಸಮಾಜದಿಂದ ಹೆಚ್ಚಿನ ಸಂಖ್ಯೆಯಲ್ಲಿ ಮತಗಳು ಬಂದಿವೆ. ಇದನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮ ಪಕ್ಷದ ಮೇಲಿದೆ. ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ ನಾವು ಸಮಾಜಕ್ಕಾಗಿ ಹೋರಾಟ ಮಾಡಿಕೊಂಡು ಬಂದಿದ್ದೇವೆ, ಈಗಲೂ ಮಾಡ್ತೇವೆ. ನಮ್ಮ ಕಡೆಯಿಂದ ಸ್ವಾಮೀಜಿಗಳು ಹೋರಾಟ ಮಾಡ್ತಾರೆ, ಸರ್ಕಾರದಿಂದ ಅವರಿಗೆ ಶಕ್ತಿ ಕೊಡುತ್ತೇವೆ. ಸ್ವಾಮೀಜಿಗಳು ಮತ್ತು ಸರ್ಕಾರದ ನಡುವಿನ ಕೊಂಡಿಯಾಗಿ ನಾನು ಕೆಲಸ ಮಾಡುತ್ತೇನೆ. ಬಿಜೆಪಿ ಸರ್ಕಾರ ‌ನೀಡಿದ 2ಡಿ ಮೀಸಲಾತಿಯನ್ನು ನಾನು ವಿರೋಧ ಮಾಡಿದ್ದೆ. 2ಡಿ ಕೊಡುವ ವ್ಯವಸ್ಥೆಯೇ ಇಲ್ಲ. ಮತ್ತೊಂದು ಸಮಾಜದ ಮೀಸಲಾತಿ ಕಿತ್ತು ಕೊಡುವಂತೆ ನಾವು ಕೇಳಿಯೇ ಇಲ್ಲ ಎಂದು ವಿನಯ ಕುಲಕರ್ಣಿ ಸ್ಪಷ್ಟಪಡಿಸಿದರು‌.

ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೊಂದಾಣಿಕೆ ಮಾಡಿಕೊಂಡರಾ? ಎಂಬ ಪ್ರಶ್ನೆಗೆ, "ಸ್ವಾಮೀಜಿ ಅವರು ಯಾರ ಜೊತೆಗೂ ಹೊಂದಾಣಿಕೆ ಮಾಡಿಕೊಂಡಿಲ್ಲ. ಅವರ ಮಠಕ್ಕೆ ಒಮ್ಮೆ ನೀವು ಬನ್ನಿ, ನಿಮಗೆ ಗೊತ್ತಾಗುತ್ತದೆ.‌ ಕೆಲವೊಂದಿಷ್ಟು ಜನ‌ ತಮ್ಮ ಲಾಭಕ್ಕಾಗಿ ಸಮಾಜವನ್ನು ಬಳಕೆ ಮಾಡಿಕೊಳ್ಳುತ್ತಾರೆ. ಸಮಾಜದ ಎಲ್ಲರಿಗೂ ನಾವು ಬೆಂಬಲ ಕೊಡಬೇಕಾಗುತ್ತದೆ. ನಮ್ಮ ಸಮಾಜಕ್ಕೆ ಬೆಂಬಲ ಕೊಟ್ಟಂತೆ ಎಲ್ಲ ಸಮಾಜಗಳಿಗೂ ನಾವು ಬೆಂಬಲ ಕೊಡಬೇಕಾಗುತ್ತದೆ" ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.