ETV Bharat / state

ಸಮಾಜದ ಜೊತೆಗೆ ಇರದವರು ನಾಲಾಯಕರು: ನಿರಾಣಿಗೆ ಕಾಶಪ್ಪನವರ ಟಾಂಗ್ - ಸಚಿವ ಮುರುಗೇಶ್ ನಿರಾಣಿ

ರಾಷ್ಟ್ರೀಯ ಲಿಂಗಾಯತ ಪಂಚಮಸಾಲಿ ಮಹಾಸಭಾ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಸಚಿವ ಮುರುಗೇಶ್ ನಿರಾಣಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

belgaum
ರಾಷ್ಟ್ರೀಯ ಲಿಂಗಾಯತ ಪಂಚಮಸಾಲಿ ಮಹಾಸಭಾ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ
author img

By

Published : Apr 9, 2021, 7:26 AM IST

ಬೆಳಗಾವಿ: ಯಾರು ಸಮಾಜದ ಜೊತೆಗೆ ಇರುತ್ತಾರೋ ಅವರು ನಾಯಕರು. ಸಮಾಜದ ಜೊತೆಗೆ ಇರದವರು ನಾಲಾಯಕರು ಎಂದು ಸಚಿವ ಮುರುಗೇಶ್ ನಿರಾಣಿಗೆ ಪರೋಕ್ಷವಾಗಿ ರಾಷ್ಟ್ರೀಯ ಲಿಂಗಾಯತ ಪಂಚಮಸಾಲಿ ಮಹಾಸಭಾ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಟಾಂಗ್ ಕೊಟ್ಟಿದ್ದಾರೆ.

ರಾಷ್ಟ್ರೀಯ ಲಿಂಗಾಯತ ಪಂಚಮಸಾಲಿ ಮಹಾಸಭಾ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ

ಬಸನಗೌಡ ಪಾಟೀಲ್ ಯತ್ನಾಳ ನಾಲಾಯಕ್ ರಾಜಕಾರಣಿ ಎಂದು ಮುರುಗೇಶ್ ನಿರಾಣಿ ಟೀಕಿಸಿದ ವಿಚಾರಕ್ಕೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ನಿರಾಣಿ ಅವರು ಸಚಿವರಾದ ಬಳಿಕ ಧೋರಣೆ ಬದಲಾಗಿದೆ. ಹೋರಾಟ ನಿಲ್ಲಿಸಲು ಪ್ರಯತ್ನ ಮಾಡಿದ್ರು, ಈಗ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಈಗ ಅಧಿಕಾರದ ವ್ಯಾಮೋಹ ಹುಚ್ಚು ಹಿಡಿದಿದೆ ಎಂದು ವಾಗ್ದಾಳಿ ನಡೆಸಿದರು.

ಹರಿಹರಪೀಠ ವಚನಾನಂದ ಸ್ವಾಮೀಜಿ ಸೆಲೆಬ್ರಿಟಿ ಸ್ವಾಮೀಜಿ. ಅವರು ಬಂದಾಗ ಕರೆದುಕೊಂಡಿದ್ವಿ ಅವರು ಹೋದಾಗ ಕೈಬಿಟ್ಟಿದ್ದೇವಿ ಅಷ್ಟೇ. ಹೀಗಾಗಿ ಅವರ ಬಗ್ಗೆ ಜಾಸ್ತಿ ಏನೂ ಹೇಳಕ್ಕಾಗಲ್ಲ. ಸಮಾಜ ಬೇಕೆಂದರೆ ಅವರು ಇರಬೇಕು. ಸಮಾಜದ ಕಟ್ಟಕಡೆಯ ಮನುಷ್ಯನಿಗೆ ಅನ್ಯಾಯ ಆದಾಗ ಅವರು ಜೊತೆಗೆ ಇರಬೇಕು. ಅವರು ಬಂದಾಗ ನಾವು ಸ್ವಾಗತ ಮಾಡ್ತೇವಿ. ಅವರು ಬರದಿದ್ದಾಗ ನಾವು ಏನು ಮಾಡಲು ಆಗುವುದಿಲ್ಲ. ಒಂದೇ ಸಂಘಟನೆ ಒಂದೇ ಪೀಠ ಇರಬೇಕು. ಗುರುಗಳು ಬೇಕಾದ್ರೆ ಎಷ್ಟು ಜನವಾದ್ರು ಇರಲಿ. ಅದನ್ನು ಒಂದು ಮಾಡುವ ಪ್ರಯತ್ನ ನಾವು ಮಾಡುತ್ತಿದ್ದೇವೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.