ETV Bharat / state

ಬೆಳಗಾವಿ: ಟಿಳಕವಾಡಿಯಲ್ಲಿ 144 ಸೆಕ್ಷನ್ ಜಾರಿ, ಐವರು ಎಂಇಎಸ್ ಕಾರ್ಯಕರ್ತರು ವಶಕ್ಕೆ

ಟಿಳಕವಾಡಿಯಲ್ಲಿ 144 ಸೆಕ್ಷನ್ ಅಡಿ ನಿಷೇಧಾಜ್ಞೆ ಜಾರಿ ಮಾಡಿದ್ದು, ಐವರು ಎಂಇಎಸ್ ಕಾರ್ಯಕರ್ತರನ್ನು ವಶಕ್ಕೆ ಪಡೆಯಲಾಗಿದೆ.

Belagavi
ಎಂಇಎಸ್
author img

By

Published : Dec 19, 2022, 9:19 AM IST

Updated : Dec 19, 2022, 11:01 AM IST

ಟಿಳಕವಾಡಿಯಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ ಎಂದು ಎಡಿಜಿಪಿ ಅಲೋಕ್​ ಕುಮಾರ್​ ತಿಳಿಸಿದ್ದಾರೆ.

ಬೆಳಗಾವಿ: ಚಳಿಗಾಲದ ಅಧಿವೇಶನ ಆರಂಭದ ದಿನವಾದ ಇಂದು ಎಂಇಎಸ್ ಮಹಾಮೇಳ ನಡೆಸಲು ಮಹಾರಾಷ್ಟ್ರ ಏಕೀಕರಣ ಸಮಿತಿ ಮುಂದಾಗಿದೆ. ಬೆಳಗ್ಗೆ 11 ಗಂಟೆಗೆ ವ್ಯಾಕ್ಸಿನ್ ಡಿಪೋಗೆ ಆಗಮಿಸುವಂತೆ ಎಂಇಎಸ್ ಮುಖಂಡರು ಕರೆ ನೀಡಿ, ವ್ಯಾಕ್ಸಿನ್ ಡಿಪೋ ಚಲೋ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಪ್ರಾರಂಭಿಸಿದ್ದಾರೆ.

ಬೆಳಗಾವಿಯ ಟಿಳಕವಾಡಿಯ ವ್ಯಾಕ್ಸಿನ್ ಡಿಪೋಗೆ ಆಗಮಿಸುವಂತೆ ಎಂಇಎಸ್ ಕರೆ ನೀಡಿದೆ. ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ ಓರ್ವ ಎಸಿಪಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.

ಮತ್ತೊಂದೆಡೆ ಮಹಾರಾಷ್ಟ್ರದ ರಾಜಕೀಯ ನಾಯಕರಿಗೆ ಬೆಳಗಾವಿಗೆ ಬರುವಂತೆ ಮಹಾರಾಷ್ಟ್ರ ಏಕೀಕರಣ ಸಮಿತಿ ಆಹ್ವಾನ ನೀಡಿತ್ತು. ಆದ್ರೆ ಮಹಾರಾಷ್ಟ್ರ ಗಡಿ ಸಮಿತಿ ಅಧ್ಯಕ್ಷ, ಸಂಸದ ಧೈರ್ಯಶೀಲ ಮಾನೆ ಬೆಳಗಾವಿ ಪ್ರವೇಶಕ್ಕೆ ಜಿಲ್ಲಾಡಳಿತ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದೆ.

ಮಹಾರಾಷ್ಟ್ರದ ಮಾಜಿ ಸಚಿವ ಹಸನ್ ಮುಶ್ರಿಫ್ ಸೇರಿ ಹಲವು ನಾಯಕರು ಆಗಮಿಸುವ ಸಾಧ್ಯತೆ ಇದೆ. ನಿಪ್ಪಾಣಿ ತಾಲೂಕಿನ ಕೊಗನೊಳ್ಳಿ ಟೋಲ್‌ಗೇಟ್ ಅಥವಾ ಮಹಾರಾಷ್ಟ್ರದ ಶಿನೋಳಿ ಮೂಲಕ ಆಗಮನ ಸಾಧ್ಯತೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಗಡಿ ಭಾಗದ ಎರಡೂ ಚೆಕ್‌ಪೋಸ್ಟ್‌ಗಳಲ್ಲಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.

ಇದೇ ಸಂದರ್ಭದಲ್ಲಿ ಬೆಳಗಾವಿಯ ವ್ಯಾಕ್ಸಿನ್ ಡಿಪೋಗೆ ಎಡಿಜಿಪಿ ಅಲೋಕ್ ಕುಮಾರ್ ಭೇಟಿ ಪರಿಶೀಲನೆ ನಡೆಸಿದರು. ಎಂಇಎಸ್ ಸಂಘಟನೆಗೆ ಮಹಾಮೇಳಕ್ಕೆ ಅನುಮತಿ ನಿರಾಕರಣೆ ಮಾಡಿ ಕೂಡಲೇ ವೇದಿಕೆಯನ್ನು ತೆರವು ಗೊಳಿಸುವಂತೆ ಸೂಚನೆ ನೀಡಿದ್ದಾರೆ.

ಈ ವೇಳೆ ಮಾತನಾಡಿದ ಎಡಿಜಿಪಿ ಅಲೋಕ್​ ಕುಮಾರ್​, ಎಂಇಎಸ್ ಮುಖಂಡರು ಬೆಳಗಾವಿ ನಗರದಲ್ಲಿ ಮಹಾಮೇಳ ಹಮ್ಮಿಕೊಂಡಿದ್ದರು. ಆ ಸ್ಥಳದಲ್ಲಿ 144 ಸೆಕ್ಷನ್ ಅಡಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಎಂಇಎಸ್ ಟಿಳಕವಾಡಿಯಲ್ಲಿರುವ ಕಾರ್ಯಕ್ರಮ ಮಾಡಲು ಕೇಳಿದ್ದ ಅವಕಾಶವನ್ನು ಡಿಸಿಪಿ ರವೀಂದ್ರ ಗಡಾದಿ ನಿರಾಕರಿಸಿದ್ದಾರೆ. ಬೇರೆಡೆ ಕಾರ್ಯಕ್ರಮ ಮಾಡುತ್ತಾರೆ ಎಂಬ ವದಂತಿಗಳಿಗೆ ಕಿವಿಗೊಡಬೇಡಿ. ಆ ರೀತಿ ಒಪ್ಪಿಗೆ ಪಡೆಯದೇ ಕಾರ್ಯಕ್ರಮ ಮಾಡಿದ್ದಲ್ಲಿ ಅವರನ್ನು ಬಂಧಿಸಲಾಗುವುದು ಎಂದು ಹೇಳಿದ್ದಾರೆ.

ಎಂಇಎಸ್​ಗೆ ಮುಖಭಂಗ: ಕಾರ್ಯಕ್ರಮದ ಹಿನ್ನೆಲೆ ಅನುಮತಿ ಪಡೆಯುವ ಮುನ್ನವೇ ಹಾಕಲಾಗಿದ್ದ ವೇದಿಕೆಯನ್ನು ತೆರವುಗೊಳಿಸಲಾಗಿದೆ. ಕಳೆದ ವರ್ಷ ಅಧಿವೇಶನ ಸಮಯದಲ್ಲಿ ಎಂಇಎಸ್ ಪುಂಡರ ಅಟ್ಟಹಾಸಕ್ಕೆ ಈ ಬಾರಿ ಬೆಳಗಾವಿ ಪೊಲೀಸರು ಎಚ್ಚೆತ್ತುಕೊಂಡು ಎಂಇಎಸ್ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ.

ಎಂಇಎಸ್ ಪುಂಡರು ವಶಕ್ಕೆ: ನಿರ್ಬಂಧ ನಡುವೆಯೂ ಮಹಾಮೇಳಾವ್ ನಡೆಸಲು ಆಗಮಿಸುತ್ತಿದ್ದ ಎಂಇಎಸ್ ಪುಂಡರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಎಂಇಎಸ್ ಮಾಜಿ ಜಿ.ಪಂ.ಸದಸ್ಯ ಆರ್.ಐ.ಪಾಟೀಲ್ ಸೇರಿ ಐವರನ್ನು ವ್ಯಾಕ್ಸಿನ್ ಡಿಪೋ ಬಳಿ ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ: ಬೆಳಗಾವಿಯಲ್ಲಿ ಇಂದಿನಿಂದ ಚಳಿಗಾಲದ ಅಧಿವೇಶನ ಆರಂಭ

Last Updated : Dec 19, 2022, 11:01 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.