ETV Bharat / state

ಮುಸ್ಲಿಂ ಸಮುದಾಯಕ್ಕೆ ಸಿಎಂ ಅನುದಾನ ಘೋಷಣೆ ವಿಚಾರ: ವಿಧಾನಸಭೆಯಲ್ಲಿ ಗದ್ದಲ, ಬಿಜೆಪಿ ಸಭಾತ್ಯಾಗ

Belagavi winter session-Uproar over grant issues: ಸಿಎಂ ಸಿದ್ದರಾಮಯ್ಯ ಮುಸ್ಲಿಂ ಸಮುದಾಯಕ್ಕೆ ಅನುದಾನ ಘೋಷಿಸಿದ ವಿಚಾರವಾಗಿ ವಿಧಾನಸಭೆಯಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ವಾಗ್ವಾದ ನಡೆಯಿತು.

Etv Bharatuproar-in-belagavi-assembly-session-over-cm-siddaramaiah-ten-thousand-crore-grant-statement
ಸಿಎಂ ಅನುದಾನ ಘೋಷಣೆ ವಿಚಾರ: ವಿಧಾನಸಭೆಯಲ್ಲಿ ಗದ್ದಲ, ಬಿಜೆಪಿ ಸದಸ್ಯರಿಂದ ಸಭಾತ್ಯಾಗ
author img

By ETV Bharat Karnataka Team

Published : Dec 6, 2023, 4:13 PM IST

Updated : Dec 6, 2023, 5:47 PM IST

ಸಿಎಂ ಅನುದಾನ ಘೋಷಣೆ ವಿಚಾರವಾಗಿ ವಿಧಾನಸಭೆಯಲ್ಲಿ ಗದ್ದಲ

ಬೆಳಗಾವಿ/ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ಹುಬ್ಬಳ್ಳಿಯಲ್ಲಿ ನಡೆದ ಸಮಾವೇಶದಲ್ಲಿ ಮುಸ್ಲಿಂ ಸಮುದಾಯದ ಅಭಿವೃದ್ಧಿಗೆ 10 ಸಾವಿರ ಕೋಟಿ ರೂ. ನೀಡುವುದಾಗಿ ಘೋಷಿಸಿದ ವಿಚಾರ ಇಂದು ವಿಧಾನಸಭೆಯಲ್ಲಿ ಪ್ರತಿಧ್ವನಿಸಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ವಾಕ್ಸಮರಕ್ಕೆ ಕಾರಣವಾಯಿತು. ಸದನದಲ್ಲಿ ಗದ್ದಲ ಉಂಟುಮಾಡಿದ ಪ್ರತಿಪಕ್ಷದ ಸದಸ್ಯರು, ಮುಖ್ಯಮಂತ್ರಿಗಳು ಹೇಳಿಕೆಯನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು. ಆದರೆ, ಇದಕ್ಕೆ ಸರ್ಕಾರ ಸ್ಪಂದಿಸಲಿಲ್ಲ. ಇದರಿಂದ ಆಕ್ರೋಶಗೊಂಡ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದರು.

ಪ್ರಶ್ನೋತ್ತರ ಸಮಯ ಮುಗಿದ ಬಳಿಕ ಸದನದಲ್ಲಿ ಬಿಜೆಪಿ ಶಾಸಕ ಟಿ.ಸುನೀಲ್ ಕುಮಾರ್ ವಿಷಯ ಪ್ರಸ್ತಾಪಿಸಿ, ವಿಧಾನಮಂಡಲದ ಅಧಿವೇಶನ ನಡೆಯುವಾಗ ಮುಖ್ಯಮಂತ್ರಿಗಳು, ಈ ರೀತಿ ಅನುದಾನ ಘೋಷಣೆ ಮಾಡುವುದು ಎಷ್ಟರ ಮಟ್ಟಿಗೆ ಸರಿ?. ಈ ಕುರಿತು ಸಿಎಂ ಸದನಕ್ಕೆ ವಿವರಣೆ ನೀಡಬೇಕೆಂದು ಆಗ್ರಹಿಸಿದರು.

ಇದಕ್ಕೆ ಆಡಳಿತ ಪಕ್ಷದ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದು ಗದ್ದಲ ಉಂಟಾಯಿತು. ಸ್ಪೀಕರ್ ಯು.ಟಿ.ಖಾದರ್ ಪದೇ ಪದೇ ಮಾಡಿದ ಮನವಿಯೂ ವಿಫಲವಾಯಿತು. ಎರಡೂ ಕಡೆಯ ಸದಸ್ಯರು ಮಾತಿನ ಚಕಮಕಿಯಲ್ಲೇ ತೊಡಗಿದ್ದರು. ನಂತರ ಸ್ಪೀಕರ್ ಪ್ರತಿಪಕ್ಷದ ನಾಯಕರಿಗೆ ಮಾತನಾಡಲು ಅವಕಾಶ ನೀಡಿದಾಗ ಗದ್ದಲ ಸ್ವಲ್ಪಮಟ್ಟಿಗೆ ತಗ್ಗಿತು. ಆಗ ಆರ್.ಅಶೋಕ್ ಮಾತನಾಡಿ, ರೈತರಿಗೆ ಅನುದಾನ ಕೊಡಲು ಹಣವಿಲ್ಲ. ಅಲ್ಲಿ ಹತ್ತು ಸಾವಿರ ಕೋಟಿ ರೂ. ಅನುದಾನ ನೀಡುವುದಾಗಿ ಘೋಷಿಸಿದ್ದಾರೆ. ಸದನ ನಡೆಯುವಾಗ ಈ ರೀತಿ ಘೋಷಣೆ ಮಾಡುವುದು ತಪ್ಪು. ಮುಖ್ಯಮಂತ್ರಿ ಘೋಷಣೆ ಮಾಡಿರುವ ವಿಡಿಯೋ ತುಣುಕು ನೋಡಿದ್ದೇನೆ. ಅವರು 10 ಸಾವಿರ ಕೋಟಿ ರೂ. ಅನುದಾನ ಘೋಷಣೆ ಮಾಡಿರುವುದು ಸತ್ಯ. ಹಾಗಾಗಿ ಮುಖ್ಯಮಂತ್ರಿಗಳು ತಮ್ಮ ಹೇಳಿಕೆಯನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.

ದಿನೇಶ್ ಗುಂಡೂರಾವ್ ಸಮರ್ಥನೆ: ಮುಖ್ಯಂಮತ್ರಿಗಳು ಈ ಬಗ್ಗೆ ವಿವರ ನೀಡಿ ಹೇಳಿಕೆಯನ್ನು ವಾಪಸ್ ಪಡೆಯದಿದ್ದರೆ ಅವರಿಗೆ ಸದನದಲ್ಲಿ ಮಾತನಾಡಲು ಅವಕಾಶ ನೀಡಲ್ಲ ಎಂದು ಹೇಳಿದ್ದು ಮತ್ತೆ ಸದನದಲ್ಲಿ ಆಡಳಿತ ಪಕ್ಷದ ಸದಸ್ಯರನ್ನು ಕೆರಳಿಸಿತು. ಮಾತಿನ ಚಕಮಕಿ ನಡೆದು ಗದ್ದಲದ ವಾತಾವರಣ ನಿರ್ಮಾಣವಾಯಿತು. ಪ್ರತಿಪಕ್ಷದ ನಾಯಕರ ಮಾತಿಗೆ ಉತ್ತರ ನೀಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಮುಖ್ಯಮಂತ್ರಿಗಳು ಹತ್ತು ಸಾವಿರ ಕೋಟಿ ರೂ. ಕೊಡುತ್ತೇನೆ ಎಂದು ಹೇಳಿಲ್ಲ. ಹಂತ ಹಂತವಾಗಿ ಕೊಡುತ್ತೇನೆ ಎಂದು ಹೇಳಿದ್ದಾರೆ. ಇದರಲ್ಲಿ ತಪ್ಪೇನಿದೆ? ಎಂದು ಸಮರ್ಥಿಸಿಕೊಂಡರು.

ಮುಖ್ಯಮಂತ್ರಿಗಳು ಮಾಡಿರುವ ಘೋಷಣೆ ಆಕ್ಷೇಪಾರ್ಹ ಅಲ್ಲ ಎಂದರು. ಇದನ್ನು ಒಪ್ಪದ ಪ್ರತಿಪಕ್ಷದ ಸದಸ್ಯರು, ಸಿಎಂ ಹೇಳಿಕೆ ವಾಪಸ್ ಪಡೆಯಬೇಕು ಎಂದು ಪಟ್ಟುಹಿಡಿದರು. ಸರ್ಕಾರದಿಂದ ಸೂಕ್ತ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಸಭಾತ್ಯಾಗ ಮಾಡುವುದಾಗಿ ಹೇಳಿ ಆರ್.ಅಶೋಕ್ ತಮ್ಮ ಸದಸ್ಯರ ಜೊತೆ ಸದನದಿಂದ ಹೊರನಡೆದರು. ಆಗ ಸ್ಪೀಕರ್ ಈ ರೀತಿ ನೀವು ಮಾಡುವುದು ಸರಿಯಲ್ಲ. ಬರ, ಉತ್ತರ ಕರ್ನಾಟಕದ ಬಗ್ಗೆ ಚರ್ಚೆ ಆಗಬೇಕಾಗಿದೆ. ಸಣ್ಣ ವಿಚಾರ ಇಟ್ಟುಕೊಂಡು ಈ ರೀತಿ ಮಾಡಿದರೆ ಹೇಗೆ? ಎಂದು ಹೇಳಿದರಾದರೂ ಯಾವುದನ್ನೂ ಲೆಕ್ಕಿಸದ ಬಿಜೆಪಿ ಸದಸ್ಯರು ಸದನದಿಂದ ಹೊರನಡೆದರು.

ಸದನದಲ್ಲೇ ಉಳಿದ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್: ಪ್ರತಿಪಕ್ಷದ ನಾಯಕ ಆರ್.ಅಶೋಕ್ ನೇತೃತ್ವದಲ್ಲಿ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದರು. ಆದರೆ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಮಾತ್ರ ಸಭಾತ್ಯಾಗ ಮಾಡದೆ ಸದನದಲ್ಲೇ ಉಳಿದಿದ್ದು ಅಚ್ಚರಿ ಮೂಡಿಸಿತು.

ಅಶೋಕ್​ ಕ್ಷಮೆ ಕೇಳಬೇಕು: ಬಿಜೆಪಿ ಸದಸ್ಯರ ಸಭಾತ್ಯಾಗದ ನಂತರ ಮಾತನಾಡಿದ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ.ಪಾಟೀಲ್, ಸದನದಲ್ಲಿ ಪ್ರತಿಪಕ್ಷ ನಾಯಕ ಆರ್. ಅಶೋಕ್, ಮುಖ್ಯಮಂತ್ರಿಗಳಿಗೆ ಮಾತನಾಡಲು ಅವಕಾಶ ಕೊಡಲ್ಲ ಎಂದು ಹೇಳಿದ್ದಾರೆ. ನಾವು 85 ಶಾಸಕರಿದ್ದೇವೆ ಎಂಬ ಅಶೋಕ್ ಅವರ ಹೇಳಿಕೆ ಸದನಕ್ಕೆ ಮಾಡಿರುವ ಅವಮಾನ. ಸದನದಲ್ಲಿ ಸಂಖ್ಯಾಬಲದ ಮೇಲೆ ಎಲ್ಲವೂ ತೀರ್ಮಾನ ಆಗಲ್ಲ. ಮಾತನಾಡಲು ಬಿಡಲ್ಲ ಎನ್ನುವುದು ಸರಿಯಲ್ಲ. ಅವರು ತಮ್ಮ ಹೇಳಿಕೆಯನ್ನು ವಾಪಸ್ ಪಡೆದು ಕ್ಷಮೆ ಯಾಚಿಸಬೇಕು ಎಂದರು.

ಇದನ್ನೂ ಓದಿ: 10 ಸಾವಿರ ಕೋಟಿ‌ ಅನುದಾನ ಹೇಳಿಕೆ ವಿಚಾರ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ಹೀಗಿದೆ

Last Updated : Dec 6, 2023, 5:47 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.