ETV Bharat / state

'ನನಗಿನ್ನೂ 20 ವರ್ಷ ಆಯುಷ್ಯ ಇದೆ, ಮಂತ್ರಿಯಾಗುವೆ, ಮುಂದೊಂದಿನ ಸಿಎಂ ಆಗುವೆ' - latest news for umesh katti

12 ಜನ ಅನರ್ಹ ಶಾಸಕರು ಬಂದ ಮೇಲೆ ಅವರನ್ನು ಮಂತ್ರಿ ಮಾಡಬೇಕಾಯಿತು. ಹೊಸದಾಗಿ ಆಯ್ಕೆಯಾದ ಶಾಸಕರಿಗೆ ಮಂತ್ರಿಸ್ಥಾನ ನೀಡಿದ್ದರಿಂದ ನನ್ನನ್ನು ಕೈಬಿಟ್ಟಿರಬಹುದು ಎಂದು ಶಾಸಕ ಉಮೇಶ್ ಕತ್ತಿ ಹೇಳಿದರು.

ಮುಂದೆ ರಾಜ್ಯದ
umesh-katti
author img

By

Published : Mar 15, 2020, 3:32 PM IST

ಬೆಳಗಾವಿ : ನನಗೀಗ 60 ವರ್ಷ. ನನಗಿನ್ನೂ 20 ವರ್ಷ ರಾಜಕೀಯ ಭವಿಷ್ಯವಿದೆ. ಬರುವ ದಿನಗಳಲ್ಲಿ ಮಂತ್ರಿ ಮಾತ್ರವಲ್ಲ, ರಾಜ್ಯದ ಮುಖ್ಯಮಂತ್ರಿಯೂ ಆಗುವೆ ಎಂದು ಶಾಸಕ ಉಮೇಶ ಕತ್ತಿ ಮಾಧ್ಯಮದವರೊಂದಿಗೆ ಮಾತನಾಡುತ್ತಾ ಹೇಳಿದರು.

ಸಿಎಂ ಬೆಳಗಾವಿಗೆ ಬರುವ ಮುನ್ನ ತಾವು ಹೊರಟಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಕತ್ತಿ, ಮುಖ್ಯಮಂತ್ರಿಗಳು ನಮ್ಮ ನಾಯಕರು. ನಾನು ಇನ್ನೊಂದು ಮದುವೆ ಸಮಾರಂಭಕ್ಕೆ ಹೋಗಬೇಕಿದೆ. ಸಿಎಂ ಜೊತೆ ಮುನಿಸಿಕೊಂಡು ಹೋಗುತ್ತಿಲ್ಲ. ಅದು ನಿಮ್ಮ ಅನಿಸಿಕೆ ಅಷ್ಟೇ. ಸಿಎಂ ಜೊತೆಗೆ ಮುನಿಸಿಕೊಳ್ಳುವ ಪ್ರಶ್ನೆಯೇ ಉದ್ಭವಿಸದು ಎಂದರು.

12 ಜನ ಅನರ್ಹ ಶಾಸಕರು ಬಂದಮೇಲೆ ಅವರನ್ನು ಮಂತ್ರಿ ಮಾಡಬೇಕಾಯಿತು ಎಂದು ನುಡಿದ ಕತ್ತಿ, ನಂತರ ಹೊಸದಾಗಿ ಆಯ್ಕೆಯಾದ ಶಾಸಕರಿಗೆ ಮಂತ್ರಿ ಸ್ಥಾನ ನೀಡಿದ್ದರಿಂದ ನನ್ನನ್ನು ಕೈಬಿಟ್ಟಿರಬಹುದು ಎಂದು ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.