ETV Bharat / state

ಬೆಳಗಾವಿಯಲ್ಲಿ ಕುಖ್ಯಾತ ಅಂತಾರಾಜ್ಯ ಮನೆಗಳ್ಳರ ಬಂಧನ : ಒಂದು ಕೋಟಿ ಮೌಲ್ಯದ ಚಿನ್ನಾಭರಣ ಜಪ್ತಿ - Two natorious thieves arrested in belagavi

ಹಗಲು ಹೊತ್ತಿನಲ್ಲಿ ಮನೆಗಳ್ಳತನ ಮಾಡುತ್ತಿದ್ದ ಇಬ್ಬರು ಕುಖ್ಯಾತ ಕಳ್ಳರನ್ನು ಬೆಳಗಾವಿ ನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು 1 ಕೋಟಿಗೂ ಅಧಿಕ ಮೌಲ್ಯದ ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದೆ.

two-natorious-thieves-arrested-in-belagavi
ಬೆಳಗಾವಿಯಲ್ಲಿ ಕುಖ್ಯಾತ ಅಂತರರಾಜ್ಯ ಮನೆಗಳ್ಳರ ಬಂಧನ : ಒಂದು ಕೋಟಿ ಮೌಲ್ಯದ ಚಿನ್ನಾಭರಣ ಜಪ್ತಿ
author img

By

Published : Nov 11, 2022, 5:32 PM IST

ಬೆಳಗಾವಿ: ಹಗಲು ಹೊತ್ತಿನಲ್ಲಿಯೇ ಬೀಗ ಹಾಕಿದ ಮನೆಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದ ಇಬ್ಬರು ಕುಖ್ಯಾತ ಅಂತರರಾಜ್ಯ ಮನೆಗಳ್ಳರನ್ನು ನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು ಒಂದು ಕೋಟಿ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ನಗರದ ವಡಗಾಂವಿ ನಿವಾಸಿ ಪ್ರಕಾಶ ಪಾಟೀಲ(37) ಹಾಗೂ ಮಹಾರಾಷ್ಟ್ರ ರಾಜ್ಯದ ಸಿಂಧದುರ್ಗದ ವೈಭವವಾಡಿ ಗ್ರಾಮದ ಮಹೇಶ ಕಾಳಗಿನಕೊಪ್ಪ (37)ಬಂಧಿತ ಆರೋಪಿಗಳು.

ಬೀಗ ಹಾಕಿದ ಮನೆಗಳನ್ನು ಗುರುತಿಸಿ ಕಳ್ಳತನ : ಬಂಧಿತರಿಬ್ಬರು ಮೊದಲಿಗೆ ಹಗಲು ಹೊತ್ತಿನಲ್ಲಿಯೇ ಬೈಕ್ ನಲ್ಲಿ ನಗರದಲ್ಲಿ ತಿರುಗಾಡಿ ಬೀಗ ಹಾಕಿದ ಮನೆಗಳನ್ನು ಗುರುತಿಸುತ್ತಿದ್ದರು‌. ಅದರಲ್ಲಿ ಪ್ರಕಾಶ್​ ಬೀಗ ಮುರಿದು ಕಳ್ಳತನ ಮಾಡಲು ಮನೆಯ ಒಳಗಡೆ ಹೋದರೆ ಆತನ ಸಹಚರ ಮಹೇಶ ಮನೆಯ ಪಕ್ಕದಲ್ಲಿಯೇ ಬೈಕ್ ನಿಲ್ಲಿಸಿ ಹೊರಗಿನ ಮಾಹಿತಿಗಳನ್ನು ನೀಡುತ್ತಿದ್ದನು‌.

ಹೀಗೆ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳ ಮೇಲೆ ಬೆಳಗಾವಿ ಜಿಲ್ಲೆ, ನಗರ ಹಾಗೂ ಧಾರವಾಡ ಜಿಲ್ಲೆಯಲ್ಲಿ ಒಟ್ಟು 22 ಕಳ್ಳತನ ಪ್ರಕರಣಗಳು ಇರುವುದು ಪತ್ತೆಯಾಗಿದೆ. ಅದರಲ್ಲಿ 13 ಕಳ್ಳತನ ಪ್ರಕರಣಗಳು ಬೆಳಗಾವಿ ನಗರಕ್ಕೆ ಸಂಬಂಧಿಸಿವೆ. ಸದ್ಯ ಇಬ್ಬರು ಆರೋಪಿಗಳನ್ನು ಬಂಧಿಸಿದ ಪೊಲೀಸರು ಅಂದಾಜು 1ಕೋಟಿ ಮೌಲ್ಯದ ಚಿನ್ನಾಭರಣ ಹಾಗೂ ಬೆಳ್ಳಿಯ ಆಭರಣಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.

ಬೆಳಗಾವಿಯಲ್ಲಿ ಕುಖ್ಯಾತ ಅಂತಾರಾಜ್ಯ ಮನೆಗಳ್ಳರ ಬಂಧನ : ಒಂದು ಕೋಟಿ ಮೌಲ್ಯದ ಚಿನ್ನಾಭರಣ ಜಪ್ತಿ

ಆರೋಪಿಗಳು ಕಳ್ಳತನ ಮಾಡಿ ಬೇರೆಯವರಿಗೆ ಮಾರಾಟ ಮಾಡಿದ್ದ 75 ಲಕ್ಷ ಮೌಲ್ಯದ 1.5 ಕೆಜಿ ಬಂಗಾರ, 3ಲಕ್ಷ ಮೌಲ್ಯದ 4ಕೆಜಿ ಬೆಳ್ಳಿ ಹಾಗೂ ಕೃತ್ಯಕ್ಕೆ ಬಳಸಿದ್ದ 1.80ಲಕ್ಷ ಮೌಲ್ಯದ 1ಬಜಾಜ್ ಡಾಮಿನರ್ ಬೈಕ್‍ನ್ನು ಜಪ್ತಿ ಮಾಡಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಪೊಲೀಸರು ಒಪ್ಪಿಸಿದ್ದಾರೆ. ಆರೋಪಿಗಳನ್ನು ಬಂಧಿಸಿರುವ ಈ ವಿಶೇಷ ಅಪರಾಧ ಪತ್ತೆ ತಂಡಕ್ಕೆ ಹಿರಿಯ ಪೊಲೀಸ್​​ ಅಧಿಕಾರಿಗಳು ಅಭಿನಂದನೆ ಸಲ್ಲಿಸಿ ಬಹುಮಾನ ಘೋಷಿಸಿದ್ದಾರೆ.

ಮಜಾ ಮಾಡಲು ಕಳ್ಳತನ ಮಾಡುತ್ತಿದ್ದ ಆಸಾಮಿಗಳು : 22 ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವ ಪ್ರಕಾಶ ಮತ್ತು ಆತನ ಸಹಚರ ಮಹೇಶ ಕಳ್ಳತನ ಮಾಡಿದ ಹಣವನ್ನು ಮಜಾ ಮಾಡಲು ಬಳಸಿಕೊಳ್ಳುತ್ತಿದ್ದರು. ಕಳ್ಳತನ ಮಾಡುತ್ತಿದ್ದಂತೆ ಅವರಿಬ್ಬರೂ ಬೈಕ್ ನಲ್ಲಿಯೇ ಗೋವಾಕ್ಕೆ ತೆರಳಿ ಗೋವಾದಲ್ಲಿ ಮಜಾ ಮಾಡುತ್ತಿದ್ದರು ಎಂಬ ಮಾಹಿತಿ ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ.

ಬೆಳಗಾವಿ ನಗರದಲ್ಲಿನ ಕಳ್ಳತನ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು, ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಪಿ.ವಿ.ಸ್ನೇಹಾ ನೇತೃತ್ವದಲ್ಲಿ ಎಸಿಪಿಗಳಾದ ನಾರಾಯಣ ಭರಮನಿ,ಸದಾಶಿವ ಕಟ್ಟಿಮನಿ, ಚಂದ್ರಪ್ಪ ಮಾರ್ಗದರ್ಶನದಲ್ಲಿ ಸಿಸಿಬಿ ಘಟಕದ ಸಿಪಿಐ ನಿಂಗನಗೌಡ ಪಾಟೀಲ್, ಕ್ಯಾಂಪ್ ಸಿಪಿಐ ಪ್ರಭಾಕರ್ ಧರ್ಮಟ್ಟಿ ಅವರನ್ನೊಳಗೊಂಡ ಒಂದು ವಿಶೇಷ ಅಪರಾಧ ಪತ್ತೆ ತಂಡ ಕಾರ್ಯಾಚರಣೆಯಲ್ಲಿ ಭಾಗಿಯಾಗಿತ್ತು‌.

ಇದನ್ನೂ ಓದಿ : ಮಂಗಳೂರು ವಿಮಾನ ನಿಲ್ದಾಣದಲ್ಲಿ 2 ಕೋಟಿ ರೂ ಮೌಲ್ಯದ ಚಿನ್ನ​ ವಶ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.