ಬೆಳಗಾವಿ : ಆಟವಾಡುತ್ತ ಕಾಲುವೆಗೆ ಇಳಿದಿದ್ದ ನಾಲ್ವರು ಮಕ್ಕಳ ಪೈಕಿ ಇಬ್ಬರು ಮೃತರಾಗಿದ್ದಾರೆ. ಮತ್ತಿಬ್ಬರನ್ನು ರಕ್ಷಿಸಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೋಹಳ್ಳಿ ಗ್ರಾಮದಲ್ಲಿ ನಡೆದಿದೆ.
ಸಪ್ನಾ ವಿನಾಯಕ್ ಪುಂಡಿಪಲ್ಲೆ (11) ಮತ್ತು ವಿಜಯ ವಿನಾಯಕ ಪುಂಡಿಪಲ್ಲೆ (7) ಎಂಬಿಬ್ಬರು ಮೃತ ಮಕ್ಕಳು. ಶ್ರೀಧರ್ ಶಂಕರ್ ಪುಂಡಿಪಲ್ಲೆ (4) ಪ್ರಥಮ ವಿನಾಯಕ ಪುಂಡಿಪಲ್ಲೆ(8) ಎಂಬಿಬ್ಬರು ಬದುಕುಳಿದಿದ್ದಾರೆ. ಇಂದು ಸಂಜೆ ಆಟ ಆಡುತ್ತ ನಾಲ್ವರು ಮಕ್ಕಳು ಕರಿಮಸೂತಿ ಏತ ನೀರಾವರಿ ಕಾಲುವೆಗೆ ಹೋಗಿದ್ದಾರೆ. ನೀರಿನ ಸೆಳೆತಕ್ಕೆ ನಾಲ್ವರು ಮಕ್ಕಳು ಸಿಲುಕಿದ್ದರು.
ತಕ್ಷಣವೇ ಸ್ಥಳೀಯರು ಇಬ್ಬರು ಮಕ್ಕಳನ್ನು ರಕ್ಷಿಸಿದ್ದಾರೆ. ನೀರಿನ ಸೆಳೆತಕ್ಕೆ ಸಿಲುಕಿದ್ದ ಮತ್ತಿಬ್ಬರು ಶವವಾಗಿ ಪತ್ತೆಯಾಗಿದ್ದಾರೆ. ಮೃತದೇಹಗಳನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಹೊರ ತೆಗೆದಿದ್ದಾರೆ. ಅಥಣಿ ತಾಲೂಕಿನ ಐಗಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: ಬಂಟ್ವಾಳ ಬಾಲಕಿ ಮೇಲೆ ಗ್ಯಾಂಗ್ ರೇಪ್ : ನಾಲ್ವರು ಆರೋಪಿಗಳ ಬಂಧನ