ಬೆಳಗಾವಿ: ನಿರ್ಮಾಣ ಹಂತದಲ್ಲಿರುವ ಕಟ್ಟಡವೊಂದರ ಸಂಪ್‌ನಲ್ಲಿ ಆಕಸ್ಮಿಕವಾಗಿ ಬಿದ್ದು ಇಬ್ಬರು ಬಾಲಕರು ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದ ಗುರ್ಲಹೊಸೂರಲ್ಲಿ ಮಂಗಳವಾರ ನಡೆದಿದೆ. ಶ್ಲೋಕ ಶಂಭುಲಿಂಗಪ್ಪ ಗುಡಿ (4) ಮತ್ತು ಚಿದಾನಂದ ಪ್ರಕಾಶ ಸಾಲುಂಕೆ (4) ಮೃತ ಮಕ್ಕಳೆಂದು ತಿಳಿದು ಬಂದಿದೆ.
ಆಟವಾಡುತ್ತ ನಿರ್ಮಾಣ ಹಂತದ ಕಟ್ಟದ ಏರಿದ್ದ ಶ್ಲೋಕ ಮತ್ತು ಚಿದಾನಂದ ಆಕಸ್ಮಿಕವಾಗಿ ನೀರು ತುಂಬಿರುವ ಸಂಪ್‌ನಲ್ಲಿ ಬಿದ್ದಿದ್ದಾರೆ. ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ದೌಡಾಯಿಸಿರುವ ಪೊಲೀಸರು, ಪರಿಶೀಲನೆ ನಡೆಸಿದ್ದಾರೆ. ಸಂಪ್ನಲ್ಲಿರುವ ನೀರನ್ನು ಯಂತ್ರದ ಮೂಲಕ ಹೊರಕ್ಕೆ ತೆಗೆದು, ಮಕ್ಕಳ ಮೃತದೇಹವನ್ನು ಮೇಲಕ್ಕೆತ್ತಲಾಗಿದೆ. ಮೃತ ಮಕ್ಕಳ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಬೆಳಗ್ಗೆ ಸುಮಾರುಗೆ 9:30ಕ್ಕೆ ಈ ಘಟನೆ ನಡೆದಿರಬಹುದು. ಮನೆಯಿಂದ ಹೊರ ತಕ್ಷಣ ಅವರನ್ನು ಹುಡುಕಲು ಹೋದೆವು. ಎಲ್ಲಿಯೂ ಕಾಣದಿದ್ದಾಗ ಎಲ್ಲ ಕಡೆಯೂ ಹುಡುಕಲು ಆರಂಭಿಸಿದೆವು. ನಾವು ಹುಡುಕಾಡುತ್ತಿರುವುದನ್ನು ನೋಡಿದ ಅಕ್ಕಪಕ್ಕದ ಜನ, ಈಕಡೆಗೆ ಹೋಗಿರುವುದಾಗಿ ಹೇಳಿದರು. ಬಂದು ನೋಡಿದಾಗ ಗೊತ್ತಾಯಿತು ಎಂದು ಮೃತ ಬಾಲಕ ಚಿದಾನಂದ ಅವರ ಅಜ್ಜಿ ಮೊಮ್ಮಗನನ್ನು ಕಳೆದುಕೊಂಡು ನೋವು ತೋಡಿಕೊಂಡರು.
ಹೆಚ್ಚಿನ ಸುದ್ದಿಯನ್ನು ನಿರೀಕ್ಷಿಸಲಾಗಿದೆ...
ಇದನ್ನೂ ಓದಿ: ವಶಪಡಿಸಿಕೊಂಡ ಗಾಂಜಾ ಇಲಿಗಳು ತಿಂದಿವೆಯಂತೆ.. ಹೀಗಂತಾ ಕೋರ್ಟ್ಗೆ ಉತ್ತರ ನೀಡಿದ ಪೊಲೀಸರು!