ಬೆಳಗಾವಿ: ರಷ್ಯಾ ಯುದ್ಧ ಸಾರಿರುವ ಉಕ್ರೇನ್ ದೇಶದಲ್ಲಿ ಜಿಲ್ಲೆಯ ಇಬ್ಬರು ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದಾರೆ. ಉಕ್ರೇನ್ ಮೇಲೆ ರಷ್ಯಾ ನಿರಂತರ ದಾಳಿ ನಡೆಸುತ್ತಿದ್ದು, ಇಲ್ಲಿರುವ ವಿದ್ಯಾರ್ಥಿನಿಯರ ಪೋಷಕರು ಆತಂಕಕ್ಕೆ ಒಳಗಾಗಿದ್ದಾರೆ. ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕಂಕಣವಾಡಿ ಗ್ರಾಮದ ಪ್ರಿಯಾ ಭಗವಂತ ನಿಡಗುಂದಿ, ಗೋಕಾಕ್ ತಾಲೂಕಿನ ಘಟಪ್ರಭಾ ನಿವಾಸಿ ಅಮೋಘಾ ಚೌಗಲಾ ಯುಕ್ರೇನ್ನಲ್ಲಿ ಸಿಲುಕಿರುವ ವಿದ್ಯಾರ್ಥಿನಿಯರು.
ಇದನ್ನೂ ಓದಿ: ಯುದ್ಧಪೀಡಿತ ಉಕ್ರೇನ್ನಲ್ಲಿ ನೀರು, ಆಹಾರ ಸಿಗದೇ ಹಾವೇರಿ ವಿದ್ಯಾರ್ಥಿಗಳ ಪರದಾಟ
ಬೆಳಗಿನಿಂದ ಉಕ್ರೇನಿನ ಮೇಲೆ ರಷ್ಯಾ ಯುದ್ಧ ನಡೆಸುತ್ತಿದ್ದು, ವಿದ್ಯಾರ್ಥಿನಿಯರು ಭಯಗೊಂಡಿದ್ದಾರೆ. ಪ್ರಿಯಾ ನಿಡಗುಂದಿ ಹಾಗೂ ಅಮೋಘಾ ಚೌಗಲಾ ಉಕ್ರೇನಿನಲ್ಲಿ ವ್ಯಾಸಂಗ ಮಾಡುವ ಕಾಲೇಜಿನ ವಸತಿ ನಿಲಯದಲ್ಲಿದ್ದಾರೆ. ಯುದ್ಧ ಆರಂಭ ಹಿನ್ನೆಲೆ ಇಬ್ಬರು ಕುಟುಂಬಸ್ಥರ ಮನೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.