ETV Bharat / state

ಪ್ರೀತಿಗೆ ಅಡ್ಡಿಯಾದ ಸತೀಶ್​ ಜಾರಕಿಹೊಳಿ ಆಪ್ತನ ಮೇಲೆ ಫೈರಿಂಗ್​: ವಿಚಾರಣೆ ವೇಳೆ ಸತ್ಯ ಬಯಲು - ಬೆಳಗಾವಿ ಶೂಟೌಟ್​ ಸುದ್ದಿ

ತಾನು ಪ್ರೀತಿಸಿದ ಯುವತಿಗೆ ಬೇರೊಬ್ಬನ ಜೊತೆ ಮದುವೆ ಮಾಡ್ತಿದ್ದ ಕೆಪಿಸಿಸಿ ಕಾರ್ಯಧ್ಯಕ್ಷ ಸತೀಶ್ ಜಾರಕಿಹೊಳಿ ಆಪ್ತ ಭರಮಾ ದುಪದಾಳೆ ಮೇಲೆ ವಿನಾಯಕ್ ಎಂಬಾತ ಫೈರಿಂಗ್​ ಮಾಡಿದ್ದಾನೆ.

belgavi
ಸತೀಶ್​ ಜಾರಕಿಹೊಳಿ ಆಪ್ತನ ಮೇಲೆ ಫೈರಿಂಗ್
author img

By

Published : Jan 8, 2021, 2:28 PM IST

ಬೆಳಗಾವಿ: ಗ್ರಾಮ ಪಂಚಾಯಿತಿ ಚುನಾವಣೆ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯಧ್ಯಕ್ಷ ಸತೀಶ್ ಜಾರಕಿಹೊಳಿ ಆಪ್ತನ ಮೇಲಿನ ಶೂಟೌಟ್ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ರಾಜಕೀಯ ಮುಖಂಡನೋರ್ವ ಮಧ್ಯಸ್ಥಿಕೆ ವಹಿಸಿಕೊಂಡು ತಾನು ಪ್ರೀತಿಸಿದ ಯುವತಿಗೆ ಬೇರೊಬ್ಬನ ಜೊತೆ ಮದುವೆ ಮಾಡ್ತಿದ್ದು, ಈ ಹಿನ್ನೆಲೆಯಲ್ಲಿ ಆತನ ಮೇಲೆ ಫೈರಿಂಗ್ ಮಾಡಿದ್ದೇನೆ ಎಂದು ಪೊಲೀಸ್ ವಿಚಾರಣೆ ವೇಳೆ ಆರೋಪಿ ವಿನಾಯಕ್ ಬಾಯಿಬಿಟ್ಟಿದ್ದಾನೆ.

ಹೌದು, ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಯಮಕನಮರಡಿ ಗ್ರಾಮದ ಕಾಂಗ್ರೆಸ್ ಮುಖಂಡ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಆಪ್ತ ಭರಮಾ ದುಪದಾಳೆ ಎಂಬುವವರ ಮೇಲೆ ಆರೋಪಿ ವಿನಾಯಕ ಹೊರಿಕೇರಿ (26) ಫೈರಿಂಗ್ ಮಾಡಿದ್ದ. ಶೂಟೌಟ್‌ನಲ್ಲಿ ಅದೃಷ್ಟವಶಾತ್ ಭರಮಾ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆರಂಭದಲ್ಲಿ ರಾಜಕೀಯ ದ್ವೇಷದಿಂದ ಈ ಘಟನೆ ಆಗಿದೆ ಎಂದುಕೊಂಡು ತನಿಖೆಗಿಳಿದ್ದ ಪೊಲೀಸರು ಆರೋಪಿಯನ್ನ ಬಂಧಿಸಿ ವಿಚಾರಣೆ ಮಾಡಿದ್ಮೇಲೆ ಆರೋಪಿ ಮಾತು ಕೇಳಿ ಶಾಕ್ ಆಗಿದ್ದಾರೆ. ಪ್ರೀತಿಸಿದವಳನ್ನ ಬೇರೊಬ್ಬನೊಂದಿಗೆ ಮದುವೆ ಮಾಡಲು ಮಧ್ಯಸ್ಥಿಕೆ ವಹಿಸಿದ್ದವನ ಕೊಲೆ ಮಾಡಿ ಮದುವೆ ನಿಲ್ಲಿಸಲು ಐಡಿಯಾ ಮಾಡಿ ಸಿಕ್ಕಿಹಾಕಿಕೊಂಡು ಹುಡುಗಿಯನ್ನ ಕಳೆದುಕೊಂಡ ವಿನಾಯಕ್​ ಇದೀಗ ಜೈಲು ಸೇರಿದ್ದಾನೆ.

ಘಟನೆ ಹಿನ್ನೆಲೆ:
ಡಿ.16ರಂದು ರಾತ್ರಿ 11ಗಂಟೆ ಸುಮಾರಿಗೆ ಕೆಪಿಸಿಸಿ ಕಾರ್ಯಧ್ಯಕ್ಷ ಸತೀಶ್ ಜಾರಕಿಹೊಳಿ ಆಪ್ತ ಭರಮಾ ದುಪದಾಳಿ ಅಂಗಡಿ ಮುಂಭಾಗದಲ್ಲಿ ಹಿರಿಯರೊಂದಿಗೆ ಮಾತನಾಡುತ್ತಾ ಕುಳಿತಾಗ ಆರೋಪಿ ವಿನಾಯಕ ಮುಖಕ್ಕೆ ಮಾಸ್ಕ್ ತಲೆಗೆ ಮಂಕಿ ಕ್ಯಾಪ್ ಹಾಕಿಕೊಂಡು ಭರಮಾ ಬಳಿ ಬಂದು ಅಡ್ರೆಸ್ ಕೇಳುವ ನೆಪದಲ್ಲಿ ಶೂಟ್ ಮಾಡಿ ಹತ್ಯೆ ಮಾಡಲು ಯತ್ನಿಸಿದ್ದ. ಆದರೆ, ಸರಿಯಾಗಿ ಫೈಯರ್ ಆಗದ ಹಿನ್ನೆಲೆಯಲ್ಲಿ ಆತನ ಎದೆ ಗುಂಡಿಗೆಗೆ ಸ್ವಲ್ಪ ಪ್ರಮಾಣದಲ್ಲಿ ಗುಂಡು ತಾಗಿ ಆತ ಬದುಕುಳಿದಿದ್ದ. ಇತ್ತ ಫೈರಿಂಗ್ ಮಾಡಿ ಸ್ಥಳದಿಂದ ಆರೋಪಿ ಎಸ್ಕೇಪ್ ಆಗಿದ್ದ. ಫೈರಿಂಗ್ ಪ್ರಕರಣ ಕುರಿತು ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಿಸಲಾಗಿತ್ತು. ಅಂದು ಖುದ್ದು ಬೆಳಗಾವಿ ಎಸ್.ಪಿ ಲಕ್ಷ್ಮಣ ನಿಂಬರಗಿಯವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಇನ್ನೂ ಕೇಸ್ ದಾಖಲಿಸಿಕೊಂಡು ಪ್ರಕರಣ ಬೆನ್ನತ್ತಿದ ಪೊಲೀಸರು ಆರೋಪಿಯನ್ನ ಹಿಡಿಯುವಲ್ಲಿ ಯಶಸ್ವಿಯಾಗಿದ್ದರು.

ಇಲ್ಲಿ ಕೊಲೆಗೆ ಯತ್ನಿಸಿದ್ದು ಅದೇ ಗ್ರಾಮದ ವಿನಾಯಕ ಹೊರಿಕೇರಿ. ಅಷ್ಟಕ್ಕೂ ಈ ಭರಮಾ ದುಪದಾಳೆ ಮೇಲೆ ಮೊದಲಿನಿಂದಲೂ ಈತನಿಗೆ ಯಾವುದೇ ದ್ವೇಷ ಇರಲಿಲ್ಲ. ಆದ್ರೆ, ಕಳೆದ ಒಂದು ತಿಂಗಳಿಂದ ವಿನಾಯಕ್​, ಅದೇ ಗ್ರಾಮದ ಯುವತಿಯನ್ನು ಪ್ರೀತಿಸುತ್ತಿದ್ದ. ಆದರೆ, ಪ್ರೀತಿಸುತ್ತಿದ್ದ ಹುಡುಗಿಯನ್ನ ಬೇರೊಬ್ಬ ಯುವಕನೊಂದಿಗೆ ಈ ಭರಮಾ ಮಧ್ಯಸ್ಥಿಕೆ ವಹಿಸಿ ಮದುವೆ ಮಾಡಲು ಮುಂದಾಗಿದ್ದರಂತೆ. ಅಷ್ಟೇ ಅಲ್ಲದೆ ಎಂಗೆಜ್ಮೆಂಟ್ ಕೂಡ ಮಾಡಿದ್ದರಂತೆ. ಇದರಿಂದ ಆಕ್ರೋಶಗೊಂಡಿದ್ದ ವಿನಾಯಕ್ ಮಧ್ಯಸ್ಥಿಕೆ ವಹಿಸಿದವನನ್ನೇ ಮುಗಿಸಿದ್ರೇ ತನ್ನ ರೂಟ್ ಕ್ಲಿಯರ್ ಆಗುತ್ತೆ ಮದುವೆ ಕೂಡ ನಿಲ್ಲುತ್ತೆ ಅಂದುಕೊಂಡು ಡಿ.16ರಂದು ಕಂಟ್ರಿ ಪಿಸ್ತೂಲ್‌ನಿಂದ ಶೂಟ್ ಮಾಡಿದೆ ಅಂತಾ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ.

ಇನ್ನೂ ತನಿಖೆ ಮುಂದುವರೆಸಿರುವ ಪೊಲೀಸರು ಕಂಟ್ರಿ ಪಿಸ್ತೂಲ್ ಎಲ್ಲಿಂದ ಬಂತೂ ಅದನ್ನ ಯಾರು ಕೊಟ್ಟರು ಎಂಬ ಬಗ್ಗೆ ತನಿಖೆ ಕೈಗೊಂಡಿದ್ದಾರೆ. ಗ್ರಾಮ ಪಂಚಾಯಿತಿ ಚುನಾವಣೆ ದ್ವೇಷದಿಂದಾಗಿ ಈ ರೀತಿ ಕೊಲೆ ಮಾಡಲು ಯತ್ನಿಸಿದ್ದಾರೆ ಅಂದುಕೊಂಡಿದ್ದ ಗ್ರಾಮಸ್ಥರು ಮತ್ತು ಕುಟುಂಬಸ್ಥರು ಆರೋಪಿ ವಿನಾಯಕ್ ಮಾತು ಕೇಳಿ ಶಾಕ್ ಆಗಿದ್ದಾರೆ. ಇತ್ತ ಮಧ್ಯಸ್ಥಿಕೆ ವಹಿಸಿದವರನ್ನ ಕೊಂದು ಪ್ರೀತಿಸಿದವಳನ್ನ ಮದುವೆಯಾಗಬೇಕು ಅಂದುಕೊಂಡವ ಇದೀಗ ಜೈಲು ಸೇರಿದ್ದಾನೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.