ಬೆಳಗಾವಿ: ಅಜ್ಮೀರ್ ಪ್ರವಾಸ ಕೈಗೊಂಡಿದ್ದ ಬಾಗಲಕೋಟೆಯ 8 ಮಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಅವರೆಲ್ಲರನ್ನು ಬೆಳಗಾವಿಯ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಮಾಧ್ಯಮ ಬುಲೆಟಿನ್ನಲ್ಲಿ ಈ ವಿವರ ಬಹಿರಂಗ ಮಾಡಿದೆ. ಇದರಿಂದಾಗಿ ಬೆಳಗಾವಿಯಲ್ಲಿರುವ ಸೋಂಕಿತರ ಸಂಖ್ಯೆ ಬಾಗಲಕೋಟೆ ಸೇರಿ 113ಕ್ಕೆ ಏರಿಕೆಯಾಗಿದೆ.
ಬಾಗಲಕೋಟೆಯಿಂದ ಸುಮಾರು 8 ಮಂದಿ ಅಜ್ಮೀರ್ ಯಾತ್ರೆ ಕೈಗೊಂಡಿದ್ದರು. ಇದರೊಂದಿಗೆ ಬೆಳಗಾವಿಯ 35 ಮಂದಿಯೂ ಅರ್ಜೀರ್ ದರ್ಗಾಕ್ಕೆ ತೆರಳಿದ್ದರು. ಲಾಕ್ಡೌನ್ ಹಿನ್ನೆಯಲ್ಲಿ ಅವರೆಲ್ಲರನ್ನೂ ಬೇರೆ ರಾಜ್ಯದಲ್ಲಿ ಕ್ವಾರಂಟೈನ್ನಲ್ಲಿ ಇಡಲಾಗಿತ್ತು. ಲಾಕ್ಡೌನ್ ಸಡಿಲಿಕೆ ಆದ ಹಿನ್ನೆಲೆಯಲ್ಲಿ ಅವರೆಲ್ಲರೂ ಕೂಡಾ ರಾಜ್ಯಕ್ಕೆ ವಾಪಸ್ ಬಂದಿದ್ದರು.
ಈ ಎಲ್ಲರನ್ನೂ ನಿಪ್ಪಾಣಿಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಈ ಕ್ವಾರಂಟೈನ್ನಲ್ಲಿದ್ದವರಲ್ಲಿ ಬೆಳಗಾವಿಯ 25 ಮಂದಿಗೆ ಹಾಗೂ ಬಾಗಲಕೋಟೆಯ 8 ಮಂದಿಗೆ ಸೋಂಕು ದೃಢಪಟ್ಟಿದೆ. ಈಗ ಅವರೆಲ್ಲರನ್ನೂ ಬೆಳಗಾವಿಯ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.