ಬೆಳಗಾವಿ: ಕುಂದಾನಗರಿಯಲ್ಲಿ ಒಂದೇ ದಿನಕ್ಕೆ 27 ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 383ಕ್ಕೆ ಏರಿಕೆಯಾಗಿದೆ.
ರಜೆಗೆ ಬಂದಿದ್ದ ಓರ್ವ ಸೈನಿಕ, ಮೂರು ವರ್ಷದ ಬಾಲಕಿ, ಮೂವರು ಪೊಲೀಸರು ಸೇರಿ 27 ಜನರಿಗೆ ಕೊರೊನಾ ದೃಢಪಟ್ಟಿದ್ದು, ಜಿಲ್ಲೆಯಲ್ಲಿಂದು ಅತಿಹೆಚ್ಚು ಪ್ರಕರಣಗಳು ದಾಖಲಾಗಿವೆ.
ಬೆಳಗಾವಿ 11, ಅಥಣಿ 12, ಸವದತ್ತಿ 3 ಹಾಗೂ ಖಾನಾಪುರದಲ್ಲಿ ಓರ್ವನಿಗೆ ಸೋಂಕು ತಗುಲಿದೆ. ಬೆಳಗಾವಿ ಬಿಮ್ಸ್ ಆಸ್ಪತ್ರೆಯಿಂದ 10 ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಈವರೆಗೆ ನಾಲ್ವರು ಕೊರೊನಾಗೆ ಮೃತಪಟ್ಟಿದ್ದು, 313 ಜನ ಡಿಸ್ವಾರ್ಜ್ ಆಗಿದ್ದಾರೆ. ಸದ್ಯ 66 ಆ್ಯಕ್ಟೀವ್ ಕೇಸ್‌ಗಳಿದ್ದು, ಕೋವಿಡ್ ವಾರ್ಡ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.