ETV Bharat / state

ಶಾಂತ ರೀತಿಯ ಪ್ರತಿಭಟನೆ ನಡೆಸಿ.. ಕಾನೂನು ಪಾಲನೆಗೆ ನಮ್ಗೂ ಸಹಕರಿಸಿ - ಬೆಳಗಾವಿ ಎಸ್ಪಿ ಮನವಿ - Karnataka Bandh news

ಕಾನೂನು ‌ಮತ್ತು ಸುವ್ಯವಸ್ಥೆಗೆ ಧಕ್ಕೆ ತಂದ್ರೆ ಅಂಥವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು. ಯಾರೂ ಒತ್ತಡ ಹೇರಿ ಅಂಗಡಿ- ಮುಂಗಟ್ಡು ಬಂದ್ ಮಾಡುವ ಹಾಗಿಲ್ಲ. ಜಿಲ್ಲೆಯಾದ್ಯಂತ ನಾಳೆ ಸಾರಿಗೆ ಸಂಚಾರ ವ್ಯವಸ್ಥೆ ಎಂದಿನಂತೆ ಇರಲಿದೆ..

ಬೆಳಗಾವಿ ಎಸ್ಪಿ ಖಡಕ್ ಎಚ್ಚರಿಕೆ
ಬೆಳಗಾವಿ ಎಸ್ಪಿ ಖಡಕ್ ಎಚ್ಚರಿಕೆ
author img

By

Published : Sep 27, 2020, 7:39 PM IST

Updated : Sep 27, 2020, 8:55 PM IST

ಬೆಳಗಾವಿ : ರೈತ ವಿರೋಧಿ ನೀತಿ ಖಂಡಿಸಿ ರೈತ ಸಂಘಟನೆಗಳು ನಾಳೆ ಕರ್ನಾಟಕ ಬಂದ್​​ಗೆ ಕರೆ ನೀಡಿರುವ ಹಿನ್ನೆಲೆ ಈ ಸಂಬಂಧ ಬೆಳಗಾವಿಯಲ್ಲಿ ಎಸ್ಪಿ ಲಕ್ಷ್ಮಣ ನಿಂಬರಗಿ ಪ್ರತಿಕ್ರಿಯೆ ನೀಡಿದ್ದಾರೆ.

ಸುಪ್ರೀಂಕೋರ್ಟ್,‌ ಹೈಕೋರ್ಟ್ ‌ಗೈಡ್ ಲೈನ್ಸ್ ಉಲ್ಲಂಘಿಸದಂತೆ ಸಂಘಟನೆಗಳಿಗೆ ಸೂಚನೆ ನೀಡಲಾಗಿದೆ. ಬಂದ್ ವೇಳೆ ಸಾರ್ವಜನಿಕ ಆಸ್ತಿಗಳಿ ಹಾನಿ, ರಸ್ತೆ ತಡೆ ನಡೆಸಿದ್ರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಕಾನೂನಾತ್ಮಕ ಬಂದ್ ನಡೆಸುವಂತೆ ಸಂಘಟನೆಗಳಿಗೆ ಎಚ್ಚರಿಕೆ ನೀಡಲಾಗಿದೆ ಎಂದರು.

ಕಾನೂನು ಪಾಲನೆಗೆ ನಮ್ಗೂ ಸಹಕರಿಸಿ - ಬೆಳಗಾವಿ ಎಸ್ಪಿ ಮನವಿ

ಬಂದ್ ವೇಳೆ ಕೋವಿಡ್ ಮಾರ್ಗಸೂಚಿಗಳನ್ನು ಅಚ್ಚುಕಟ್ಟಾಗಿ ಪಾಲನೆ ಮಾಡಬೇಕು. ಸಾಮಾಜಿಕ ಅಂತರ ಕಾಯ್ದುಕೊಂಡು ಶಾಂತ ರೀತಿಯಿಂದ ಪ್ರತಿಭಟನೆ ನಡೆಸಬೇಕು. ಜಿಲ್ಲೆಯಲ್ಲಿ 4 ಸಾವಿರ ಸಿಸಿ ಕ್ಯಾಮೆರಾಗಳಿವೆ. ಸೂಕ್ಷ್ಮ ಪ್ರದೇಶಗಳಲ್ಲಿ ಡ್ರೋನ್ ಕ್ಯಾಮೆರಾ ‌ಆಪರೇಟ್ ಮಾಡಲಾಗುವುದು. ಕಾನೂನು ‌ಮತ್ತು ಸುವ್ಯವಸ್ಥೆಗೆ ಧಕ್ಕೆ ತಂದ್ರೆ ಅಂಥವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು. ಯಾರೂ ಒತ್ತಡ ಹೇರಿ ಅಂಗಡಿ- ಮುಂಗಟ್ಡು ಬಂದ್ ಮಾಡುವ ಹಾಗಿಲ್ಲ. ಜಿಲ್ಲೆಯಾದ್ಯಂತ ನಾಳೆ ಸಾರಿಗೆ ಸಂಚಾರ ವ್ಯವಸ್ಥೆ ಎಂದಿನಂತೆ ಇರಲಿದೆ ಎಂದರು.

ಶಾಂತ ರೀತಿಯ ಪ್ರತಿಭಟನೆ ನಡೆಸಿ ತಹಶೀಲ್ದಾರ್, ಎಸಿಗಳಿಗೆ ಮನವಿ ಸಲ್ಲಿಸಬೇಕು. ಕಾನೂನು ಕೈಗೆತ್ತುಕೊಳ್ಳುವ ಕೆಲಸಕ್ಕೆ ಯಾರೂ ಮುಂದಾಗಬಾರದು. ಪೊಲೀಸರಿಗೆ ಎಲ್ಲಾ ಸಂಘಟನೆ ಮುಖಂಡರು ಸಹಾಕರ ನೀಡಬೇಕು ಎಂದು ಎಸ್ಪಿ ಮನವಿ ಮಾಡಿದ್ದಾರೆ.

Last Updated : Sep 27, 2020, 8:55 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.