ETV Bharat / state

ಕುಂದಾನಗರಿಗೆ ಮಹಾ ನಂಟು: ಮಹಾರಾಷ್ಟ್ರದಿಂದ ಬಂದ ಮೂವರಲ್ಲಿ ಕೊರೊನಾ ದೃಢ

author img

By

Published : Jun 16, 2020, 11:50 PM IST

ಮಹಾರಾಷ್ಟ್ರದಿಂದ ಆಗಮಿಸಿದ ಆರು ವರ್ಷದ ಮಗು ಸೇರಿ ಮೂವರಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಅಲ್ಲದೇ ಇಂದು 9 ಜನ ಆಸ್ಪತ್ರೆಯಿಂದ ಗುಣಮುಖರಾಗಿ ಡಿಸ್ವಾರ್ಜ್ ಆಗಿದ್ದಾರೆ.

ಮಹಾರಾಷ್ಟ್ರದಿಂದ ಬಂದ ಮೂವರಲ್ಲಿ ಕೊರೊನಾ ದೃಢ
ಮಹಾರಾಷ್ಟ್ರದಿಂದ ಬಂದ ಮೂವರಲ್ಲಿ ಕೊರೊನಾ ದೃಢ

ಬೆಳಗಾವಿ: ಮಹಾರಾಷ್ಟ್ರದಿಂದ ಆಗಮಿಸಿದ ಆರು ವರ್ಷದ ಮಗು ಸೇರಿ ಮೂವರಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.

ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ಪ್ರಕಾರ ಮೂವರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ‌. ಸೋಂಕಿತರೆಲ್ಲರೂ ಮಹಾರಾಷ್ಟ್ರದಿಂದ ವಾಪಸ್ ಬಂದಿರುವವರಾಗಿದ್ದಾರೆ. P-7392 -6 ವರ್ಷದ ಗಂಡು ಮಗು, P-7391 52 ವರ್ಷದ ಪುರುಷ ಹಾಗೂ P-7390 21 ವರ್ಷದ ಯುವತಿಗೆ ಸೋಂಕು ಧೃಢವಾಗಿದೆ. ಈ ಮೂಲಕ ಜಿಲ್ಲೆಯ ಕೊರೊನಾ ಸೋಂಕಿತರ ಸಂಖ್ಯೆ 307ಕ್ಕೆ ಏರಿಕೆಯಾಗಿದೆ.

ಅಲ್ಲದೇ ಕೋವಿಡ್-19 ಸೋಂಕು ತಗುಲಿದ್ದ ಹುಕ್ಕೇರಿ ತಾಲ್ಲೂಕಿನ 8 ಜನರು ಹಾಗೂ ಬೆಳಗಾವಿ ನಗರದ ವಡಗಾವಿಯ ಓರ್ವ ಸೇರಿ 9 ಜನ ಸೋಂಕಿತರು ಗುಣಮುಖರಾಗಿ‌ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈ ವರೆಗೆ ಜಿಲ್ಲೆಯಲ್ಲಿ 307 ಕೊರೊನಾ ಸೋಂಕಿತರು ಪತ್ತೆಯಾಗಿದ್ದು, ಅದರಲ್ಲಿ 254 ಜನ ಸೋಂಕಿತರು ಬಿಡುಗಡೆ ಆಗಿದ್ದಾರೆ. ಇನ್ನುಳಿದಂತೆ 52 ಪ್ರಕರಣಗಳು ಸಕ್ರಿಯವಾಗಿವೆ. ಅವರೆಲ್ಲರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.