ETV Bharat / state

ನಾನು ನ್ಯಾಯಾಲಯದ ಮೊರೆ ಹೋಗುವ ಪ್ರಶ್ನೆಯೇ ಇಲ್ಲ: ಸಚಿವ ಶ್ರೀಮಂತ ಪಾಟೀಲ - There is no question that I am going to court

ಕಾಂಗ್ರೆಸ್​ನಿಂದ ಬಂದ ಆರು ಜನ ಸಚಿವರು, ಅವರ ಬಗ್ಗೆ ಸುಳ್ಳು ಆರೋಪ ಹಾಗೂ ವದಂತಿಗಳನ್ನು ಹಬ್ಬಿಸಬಹುದೆಂದು ಮುಂಜಾಗ್ರತಾ ಕ್ರಮವಾಗಿ ನ್ಯಾಯಾಲಯದ ಮೊರೆ ಹೋಗಿದ್ದು, ಸುಳ್ಳು ವರದಿ ಬಿತ್ತರವಾಗದಂತೆ ತಡೆ ಆಜ್ಞೆಯನ್ನೂ ತಂದಿದ್ದಾರೆ. ಆದ್ರೆ ನಾನು ಯಾವುದಕ್ಕೂ ಹೆದರುವ ಅಗತ್ಯವಿಲ್ಲ. ನಾನು ನ್ಯಾಯಾಲಯದ ಮೊರೆ ಹೋಗುವುದಿಲ್ಲ ಎಂದು ಸಚಿವ ಪಾಟೀಲ ಹೇಳಿದ್ದಾರೆ.

Minister Shrimanth Patil
ಸಚಿವ ಶ್ರೀಮಂತ ಪಾಟೀಲ್
author img

By

Published : Mar 7, 2021, 3:05 PM IST

Updated : Mar 7, 2021, 3:29 PM IST

ಅಥಣಿ (ಬೆಳಗಾವಿ): ಆರು ಜನ ಸಚಿವರು ಅವರಿಗೆ ಸಂಬಂಧಿಸಿದ ಮಾನಹಾನಿ ಕುರಿತ ಸುದ್ದಿಗಳನ್ನು ಮಾಧ್ಯಮದಲ್ಲಿ ಪ್ರಸಾರ ಮಾಡದಂತೆ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಆದ್ರೆ ನಾನು ಯಾವುದೇ ಕೋರ್ಟ್ ಮೊರೆ ಹೋಗುವುದಿಲ್ಲ ಎಂದು ಸಚಿವ ಶ್ರೀಮಂತ ಪಾಟೀಲ ಹೇಳಿದ್ದಾರೆ.

ಸಚಿವ ಶ್ರೀಮಂತ ಪಾಟೀಲ

ಅಥಣಿ ತಾಲೂಕಿನ ಸಂಬರಗಿ ಗ್ರಾಮದಲ್ಲಿ ಅಂದಾಜು ಎರಡು ಕೋಟಿ ರೂಪಾಯಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದ ಬಳಿಕ ಈಟಿವಿ ಭಾರತ ಜೊತೆ ಮಾತನಾಡಿದ ಅವರು, ಕಾಂಗ್ರೆಸ್​ನಿಂದ ಬಂದ ಆರು ಜನ ಸಚಿವರು, ಅವರ ಬಗ್ಗೆ ಸುಳ್ಳು ಆರೋಪ ಹಾಗೂ ವದಂತಿಗಳನ್ನು ಹಬ್ಬಿಸಬಹುದೆಂದು ಮುಂಜಾಗ್ರತಾ ಕ್ರಮವಾಗಿ ನ್ಯಾಯಾಲಯದ ಮೊರೆ ಹೋಗಿದ್ದು, ಸುಳ್ಳು ವರದಿ ಬಿತ್ತರವಾಗದಂತೆ ತಡೆ ಆಜ್ಞೆಯನ್ನೂ ತಂದಿದ್ದಾರೆ. ಕೆಲವರು ದುರುದ್ದೇಶ ಇಟ್ಟುಕೊಂಡು ಸಿಡಿ ಬಿಡುಗಡೆ ಮಾಡುತ್ತಿದ್ದಾರೆ. ಆದರೆ ನಾನು ಯಾವುದಕ್ಕೂ ಹೆದರುವ ಅಗತ್ಯವಿಲ್ಲ. ನಾನು ನ್ಯಾಯಾಲಯದ ಮೊರೆ ಹೋಗುವುದಿಲ್ಲ ಎಂದು ಸಚಿವ ಪಾಟೀಲ ಹೇಳಿದ್ದಾರೆ.

ಓದಿ:'ಟೆಕ್ನಾಲಜಿ ತುಂಬಾ ಬೆಳೆದಿದೆ, ಜಾರಕಿಹೊಳಿ ವಿಷಯದಲ್ಲಿ ಏನೇನು‌ ಮಾಡಿದ್ದಾರೆ ಗೊತ್ತಿಲ್ಲ'

ರಮೇಶ ಜಾರಕಿಹೊಳಿ ಅವರು ಸ್ಪಷ್ಟವಾಗಿ ಹೇಳಿದ್ದಾರೆ. ಇದರಲ್ಲಿ ನನ್ನ ಪಾತ್ರವಿಲ್ಲ, ಇದು ನಕಲಿ ವಿಡಿಯೋ ಅಂತಾ. ಅವರು ಆದಷ್ಟು ಬೇಗನೆ ಈ ಆರೋಪದಿಂದ ಮುಕ್ತರಾಗಿ ಬರುತ್ತಾರೆ. ಹಾಗೆ ಅವರಿಂದ ತೆರವಾದ ಸಚಿವ ಸ್ಥಾನವನ್ನು ವರಿಷ್ಠರು ಯಾರಿಗೆ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕು. ಆದಷ್ಟು ಬೇಗನೆ ರಮೇಶ ಜಾರಕಿಹೊಳಿ ಸಿಡಿ ಪ್ರಕರಣದಿಂದ ಮುಕ್ತರಾದ್ರೆ, ಅವರೇ ಸಚಿವ ಸ್ಥಾನ ನಿಭಾಯಿಸುತ್ತಾರೆ ಮತ್ತು ಅಥಣಿ, ಕಾಗವಾಡ ನೀರಾವರಿ ಯೋಜನೆ ತ್ವರಿತಗತಿಯಲ್ಲಿ ಆಗಬೇಕಾದರೆ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಹೇಳಿದರು.

Last Updated : Mar 7, 2021, 3:29 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.