ETV Bharat / state

ಸಾರಿಗೆ ಸಚಿವರ ಸ್ವಕ್ಷೇತ್ರದಲ್ಲೇ ಸಂಚಾರಿ ನಿಯಮಗಳಿಗಿಲ್ಲ ಕಿಮ್ಮತ್ತು: ಹೆಚ್ಚುತ್ತಿವೆ ರಸ್ತೆ ಅಪಘಾತಗಳು - DCM Lakshmana Savadi

ಪಟ್ಟಣದ ಅಂಬೇಡ್ಕರ್ ವೃತ್ತ, ಹಲ್ಯಾಳ ವೃತ, ಅನಂತಪುರ ವೃತ, ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿ ಸಿಗ್ನಲ್ ಲೈಟ್ ಇಲ್ಲದೆ ಇರುವುದು ಅಪಘಾತ ಹೆಚ್ಚಳಕ್ಕೆ ಕಾರಣವಾಗಿದೆ. ಇನ್ನೂ ನಿತ್ಯ ಸಾವಿರಾರು ವಾಹನಗಳು ಓಡಾಡುವ ಸ್ಥಳದಲ್ಲಿಯೂ ಸಿಗ್ನಲ್​ ಇರದ ಹಿನ್ನೆಲೆ ನಗರದಲ್ಲಿ ಅಪಘಾತ ಪ್ರಕರಣ ಏರಿಕೆಯಾಗುತ್ತಿದೆ ಎಂಬುದು ಸಾರ್ವಜನಿಕರ ಅಳಲು.

There are no traffic rules in Transport Minister homeland: increasing in road accidents
ಸಾರಿಗೆ ಸಚಿವರ ಸ್ವಕ್ಷೇತ್ರದಲ್ಲೇ ಸಂಚಾರಿ ನಿಯಮಗಳಿಗಿಲ್ಲ ಕಿಮ್ಮತ್ತು: ಹೆಚ್ಚುತ್ತಿವೆ ರಸ್ತೆ ಅಪಘಾತಗಳು
author img

By

Published : Jun 22, 2020, 10:18 PM IST

ಅಥಣಿ (ಬೆಳಗಾವಿ): ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರ ಸ್ವಕ್ಷೇತ್ರದಲ್ಲಿ ವಾಹನಗಳು ಅಡ್ಡಾದಿಡ್ಡಿ ಓಡಾಟದ ಪರಿಣಾಮ ಭಯದಲ್ಲೇ ಸಂಚಾರ ಮಾಡುವುದರ ಜೊತೆಗೆ ಪಟ್ಟಣದಲ್ಲಿ ಅಪಘಾತಗಳು ಸಂಭವಿಸುತ್ತಿವೆ.

ಸಾರಿಗೆ ಸಚಿವರ ಸ್ವಕ್ಷೇತ್ರದಲ್ಲೇ ಸಂಚಾರಿ ನಿಯಮಗಳಿಗಿಲ್ಲ ಕಿಮ್ಮತ್ತು: ಹೆಚ್ಚುತ್ತಿವೆ ರಸ್ತೆ ಅಪಘಾತಗಳು

ಪಟ್ಟಣದ ಅಂಬೇಡ್ಕರ್ ವೃತ್ತ, ಹಲ್ಯಾಳ ವೃತ, ಅನಂತಪುರ ವೃತ, ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿ ಸಿಗ್ನಲ್ ಲೈಟ್ ಇಲ್ಲದೆ ಇರುವುದರಿಂದ ಬೇಕಾ ಬಿಟ್ಟಿಯಾಗಿ ವಾಹನ ಸಂಚಾರದಿಂದ ಅಪಘಾತಗಳು ಸಾಮಾನ್ಯ ಎಂಬಂತಾಗಿದೆ. ಅಥಣಿ-ಸಂಕೇಶ್ವರ ರಸ್ತೆಯಲ್ಲಿನ ಶಿವಾಜಿ ವೃತ್ತದಲ್ಲಿ ಕಳೆದ ಜೂನ್ 11ರಂದು ಪಾದಾಚಾರಿ ಮಹೇಶ್ ಬೋಸ್ಲೆ ಮೇಲೆ ವಾಹನ ಹರಿದ ಪರಿಣಾಮ ಸ್ಥಳದಲ್ಲೇ ಸಾವನಪ್ಪಿದ್ದರು.

ರಸ್ತೆ ನಿಯಮ ಇಲ್ಲದೆ ಇರುವುದಕ್ಕೆ ಈ ಅಪಘಾತಕ್ಕೆ ಹಿಡಿದ ಕೈಗನ್ನಡಿಯಾಗಿದೆ. ತಾಲೂಕಿನ ಜನಸಾಮಾನ್ಯರ ಬೇಡಿಕೆಯಂತೆ ಆರ್​​​ಟಿಒ ಕಚೇರಿಗೆ ಕಳೆದ ಜನವರಿಯಲ್ಲಿ ಗುದ್ದಲಿ ಪೂಜೆ ಸಲ್ಲಿಸಿದ ಡಿಸಿಎಂ ಸವದಿ ಅವರು ಇನ್ನು ಕಚೇರಿ ಕಾರ್ಯರೂಪಕ್ಕೆ ಬಂದಿಲ್ಲಾ, ಸರ್ಕಾರಿ ಕಟ್ಟಡ ನಿರ್ಮಾಣವಾಗುವರೆಗೂ ನಿರ್ದಿಷ್ಟ ಸ್ಥಳಗಳಲ್ಲಿ ಬಾಡಿಗೆಯಾಗಿ ಸಾರಿಗೆ ಸಹಾಯಕ ಪ್ರಾದೇಶಿಕ ಆಯುಕ್ತರ ಕಚೇರಿ ಗುರುತಿಸಿದರು, ಕಾರ್ಯ ವಿಳಂಬವಾಗಿದೆ ಶಿವಯೋಗಿಗಳ ನಾಡಿನಲ್ಲಿ ಆರ್​​ಟಿಒ ಕಚೇರಿ ಜನರ ಬಹುದಿನಗಳ ಬೇಡಿಕೆಯಾಗಿತ್ತು.

ನಮ್ಮ ಕ್ಷೇತ್ರದ ಸಾರಿಗೆ ಸಚಿವರೂ ಆದಷ್ಟು ಬೇಗ ಈ ಕಾರ್ಯ ಪ್ರಾರಂಭ ಮಾಡುವಂತೆ ಮುತುವರ್ಜಿ ವಹಿಸಬೇಕೆಂದು ರೈತ ಮುಖಂಡ ರಾಜು ಜಂಬಗಿ ಕಳವಳ ವ್ಯಕ್ತಪಡಿಸಿದರು.

ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿಭಾಗದ ಕೃಷಿ ಮತ್ತು ವಾಣಿಜ್ಯ ಚಟುವಟಿಕೆಗಳಿಗೆ ಅಥಣಿ ಕೇಂದ್ರ ಸ್ಥಳವಾಗಿರುವುದರಿಂದ ವಾಹನ ಸಂಚಾರ, ಸಾಗಾಟಗಳ ವಹಿವಾಟುಗಳು ಅಧಿಕವಾಗಿರುತ್ತವೆ. ಆದಷ್ಟು ಬೇಗನೆ ರಸ್ತೆ ನಿಯಮಗಳು ಪಾಲನೆ ಆಗುವಂತೆ ವ್ಯವಸ್ಥೆ ಮಾಡಬೇಕೆಂದು ಸಾರ್ವಜನಿಕರ ಆಗ್ರಹವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.