ಬೆಳಗಾವಿ: ಕೇಂದ್ರ ಸರ್ಕಾರದ ಅನ್ಲಾಕ್ 3.0 ಹೊಸ ಮಾರ್ಗಸೂಚಿ ಅನ್ವಯ ರಾಜ್ಯದಲ್ಲಿ ಸಂಡೇ ಲಾಕ್ಡೌನ್ ರದ್ದುಪಡಿಸಿ, ಬಸ್, ಆಟೋ ಹಾಗೂ ಕ್ಯಾಬ್ ಸಂಚಾರಕ್ಕೆ ಅವಕಾಶ ನೀಡಿದೆ. ಆದರೆ ಜನರು ಮಾತ್ರ ಮನೆಯಿಂದ ಹೊರ ಬರಲು ಹಿಂದೇಟು ಹಾಕಿದ್ದಾರೆ.
ನಗರದ ಪ್ರಯಾಣಿಕರ ಕೊರತೆಯಿಂದಾಗಿ ಕೇಂದ್ರ ಬಸ್ ನಿಲ್ದಾಣ ಬಿಕೋ ಎನ್ನುತ್ತಿದ್ದು, ಬಸ್ನಲ್ಲಿ ಬೆರಳೆಣಿಕೆಯ ಪ್ರಯಾಣಿಕರು ಮಾತ್ರ ಸಂಚರಿಸುತ್ತಿದ್ದಾರೆ. ರವಿವಾರಪೇಟೆ, ಚೆನ್ನಮ್ಮ ವೃತ್ತ ಹಾಗೂ ಗಣೇಶ ಪೇಟೆಯಲ್ಲಿ ಕೆಲವೇ ಕೆಲವು ಅಂಗಡಿಗಳು ತೆರೆದಿದ್ದು, ಬಹುತೇಕ ಅಂಗಡಿಗಳ ಬಾಗಿಲು ಮುಚ್ಚಿವೆ.
ಕೆಲ ಅಂಗಡಿ ಮಾಲೀಕರು ಮಾತ್ರ ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ. ನಗರದ ಪ್ರಮುಖ ರಸ್ತೆಗಳಲ್ಲಿ ಬೆರಳೆಣಿಕೆಯಷ್ಟು ವಾಹನಗಳು ಮಾತ್ರ ಸಂಚರಿಸುತ್ತಿದ್ದು, ಕುಂದಾ ನಗರಿ ಜನರು ಇನ್ನೂ ಸಂಡೇ ಲಾಕ್ಡೌನ್ ಮೂಡ್ನಿಂದ ಹೊರಬಂದಿಲ್ಲ ಎನ್ನುವಂತಾಗಿದೆ.