ETV Bharat / state

ಜೈನ ಮಂದಿರದ ಬಾಗಿಲಿನ ಬೀಗ ಮುರಿದು ಕಳ್ಳತನ - theft latest news

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಉಗಾರ ಗ್ರಾಮದಲ್ಲಿರುವ ಭಗವಾನ್​ ಮಹಾವೀರ ತೀರ್ಥಂಕರ ಜೈನ ಮಂದಿರದ ಬಾಗಿಲಿನ ಬೀಗ ಮುರಿದು 2 ಲಕ್ಷ ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಲಾಗಿದೆ.

Theft in the temple at Chikkodi!
ಜೈನ ಮಂದಿರದ ಬಾಗಿಲಿನ ಬೀಗ ಮುರಿದು ಕಳ್ಳತನ!
author img

By

Published : Feb 25, 2020, 6:10 PM IST

ಚಿಕ್ಕೋಡಿ: ಭಗವಾನ್​ ಮಹಾವೀರ ತೀರ್ಥಂಕರ ಜೈನ ಮಂದಿರದ ಬಾಗಿಲಿನ ಬೀಗ ಮುರಿದು 2 ಕೆಜಿ ಬೆಳ್ಳಿ, 20 ಗ್ರಾಂ ಚಿನ್ನ, ಎರಡು ದಾನದ ಪೆಟ್ಟಿಗೆಗಳು ಸೇರಿ 2 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಕಳವು ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಉಗಾರ ಗ್ರಾಮದಲ್ಲಿ ನಡೆದಿದೆ.

ಕಳವಾದ ವಸ್ತುಗಳಲ್ಲಿ ಭಗವಾನ್‌ ಮಹಾವೀರರ ಮೂರ್ತಿ ಮೇಲಿದ್ದ 1 ಕೆಜಿ ಬೆಳ್ಳಿಯ ಛತ್ತ, ಹಿಂಬದಿಯಲ್ಲಿದ್ದ 1 ಕೆಜಿ ತೂಕದ ಬೆಳ್ಳಿಯ ಭಾಮಂಡಲ, ಪದ್ಮಾವತಿ ದೇವರ ಕೊರಳಲಿದ್ದ ತಲಾ 10 ಗ್ರಾಂನ 2 ಚಿನ್ನದ ಮಂಗಳಸೂತ್ರ ಸೇರಿವೆ. ದಾನದ ಪೆಟ್ಟಿಗೆಯಲ್ಲಿ 20 ಸಾವಿರ ಹಣ ಇತ್ತು‌ ಎಂದು ಅಂದಾಜಿಸಲಾಗಿದೆ. ಸದ್ಯ ಈ ಕುರಿತು ಕಾಗವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.