ETV Bharat / state

ಗ್ರಾಹಕರ ಸೋಗಿನಲ್ಲಿ ಬಂದು ಬೆಲೆಬಾಳುವ ಸೀರೆ ಕದ್ದೊಯ್ದ ಕಳ್ಳಿಯರು: ಸಿಸಿಟಿವಿಯಲ್ಲಿ ದೃಶ್ಯ ಸೆರೆ..! - ಬೆಳಗಾವಿಯಲ್ಲಿ ಸೀರೆ ಕಳ್ಳತನ

ಗ್ರಾಹಕರ ಸೋಗಿನಲ್ಲಿ ಬಂದ ಕಳ್ಳಿಯರ ಗುಂಪೊಂದು ಬೆಲೆಬಾಳುವ ಸೀರೆಗಳನ್ನು ಕದ್ದೊಯ್ದಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಗ್ರಾಹಕರ ಸೋಗಿನಲ್ಲಿ ಬಂದು ಬೆಲೆಬಾಳುವ ಸೀರೆ ಕದ್ದೊಯ್ದ ಕಳ್ಳಿಯರು

author img

By ETV Bharat Karnataka Team

Published : Nov 4, 2023, 10:02 PM IST

Updated : Nov 6, 2023, 5:46 PM IST

ಕಳ್ಳತನದ ದೃಶ್ಯ ಸೆರೆ

ಬೆಳಗಾವಿ: ಗ್ರಾಹಕರ ಸೋಗಿನಲ್ಲಿ ಹಾಡಹಗಲೇ ಬಟ್ಟೆ ಅಂಗಡಿಗೆ ಬಂದ ಖತರ್ನಾಕ ಕಳ್ಳರ ಲೇಡಿ ಗ್ಯಾಂಗ್​ವೊಂದು ಲಕ್ಷಾಂತರ ಮೌಲ್ಯದ ಸೀರೆಗಳನ್ನು ಅಂಗಡಿ ಮಾಲೀಕರ ಕಣ್ಮುಂದೆಯೇ ಕದ್ದೊಯ್ದಿರುವ ಘಟನೆ ಬೆಳಗಾವಿ ನಗರದಲ್ಲಿ ನಿನ್ನೆ ನಡೆದಿದೆ. ಬೆಳಗಾವಿಯ ಖಡೇ ಬಜಾರ್​ನಲ್ಲಿರುವ ಮಹೇಶ ವಿರೂಪಾಕ್ಷಿ ಎಂಬುವವರಿಗೆ ಸೇರಿದ ವಿರೂಪಾಕ್ಷಿ ಬಟ್ಟೆ ಅಂಗಡಿಗೆ ಶುಕ್ರವಾರ ಮಧ್ಯಾಹ್ನ 1.21ರ ಸುಮಾರಿಗೆ ಬಂದ ಕಳ್ಳರ ಗ್ಯಾಂಗ್ ಈ ಕೃತ್ಯ ಎಸಗಿದೆ. ಈ ಕಳ್ಳರ ಕರಾಮತ್ತು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಂದಾಜು ಎರಡು ಲಕ್ಷ ಮೌಲ್ಯದ 8 ಕಾಂಚಿಪುರಂ ಸೀರೆ, 1 ಇಳಕಲ್ ರೇಷ್ಮೆ ಸೀರೆ ಕಳ್ಳತನ ಮಾಡಲಾಗಿದೆ. ಕೃತ್ಯದಲ್ಲಿ ಭಾಗಿಯಾದ ಕಳ್ಳರ ಮುಖಚರ್ಯೆ ಸಿಸಿಟಿವಿಯಲ್ಲಿ ಸ್ಪಷ್ಟವಾಗಿದೆ.

ಮೊದಲಿಗೆ ಆ ಗ್ಯಾಂಗ್​ನ ಮೂವರು ಮಹಿಳೆಯರು ಮತ್ತು ಓರ್ವ ಪುರುಷ ಅಂಗಡಿಗೆ ಬಂದಿದ್ದು, ನಂತರ ಮತ್ತೆ ಮೂವರು ಮಹಿಳೆಯರು ಬಂದಿದ್ದಾರೆ. ಹೀಗೆ ಬಂದವರು ಒಬ್ಬರಿಗೊಬ್ಬರು ಪರಿಚಯ ಇಲ್ಲದಂತೆ, ಪ್ರತ್ಯೇಕವಾಗಿ ಸೀರೆಗಳನ್ನು ಚಾಯ್ಸ್ ಮಾಡಲು ಮುಂದಾಗಿದ್ದಾರೆ. ಇದೇ ವೇಳೆ, ಅಂಗಡಿಯ ಸಿಬ್ಬಂದಿಗಳ ಗಮನ ಬೇರೆಡೆ ಸೆಳೆದು ಮೂವರು ಮಹಿಳೆಯರು ಅಡ್ಡಲಾಗಿ ನಿಂತಿದ್ದಾರೆ. ಆಗ, ಓರ್ವ ಮಹಿಳೆ ಸೀರೆ ಬಾಕ್ಸ್​ಗಳನ್ನು ತನ್ನ ಸಿರೆಯೊಳಗೆ ಮುಚ್ಚಿಕೊಂಡಿದ್ದಾಳೆ. ಬಳಿಕ ಸೀರೆಗಳು ನಮಗೆ ಇಷ್ಟವಾಗಿಲ್ಲ ಎಂದು ಅಂಗಡಿಯಿಂದ ಸೀರೆಗಳ ಸಮೇತ ಕಳ್ಳರು ಎಸ್ಕೇಪ್ ಆಗಿದ್ದಾರೆ ಎಂದು ಗೊತ್ತಾಗಿದೆ.

ಘಟನೆ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಖಡೇಬಜಾರ್ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಅಂಗಡಿಯಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪಡೆದಿರುವ ಪೊಲೀಸರು ಕಳ್ಳರಿಗೆ ಬಲೆ ಬೀಸಿದ್ದಾರೆ. ಈ ಸಂಬಂಧ ಖಡೇಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಂಗರೂ ಚೀಲ ಬಳಕೆ: ಆ ಕಳ್ಳರ ಗ್ಯಾಂಗ್ ಮಹಿಳೆ ಯಾರಿಗೂ ಗೊತ್ತಾಗದಂತೆ ತಾನು ಧರಿಸಿದ ಸೀರೆಯೊಳಗೆ ಕಟ್ಟಿಕೊಂಡಿದ್ದ ಕಾಂಗರೂ ಚೀಲದಲ್ಲಿ ಸೀರೆಗಳ ಬಾಕ್ಸ್​ಗಳನ್ನು ಇರಿಸಿದ್ದಾಳೆ. ಬಳಿಕ ಅಂಗಡಿಯಿಂದ ಹೊರಗೆ ಬಂದ ಕಳ್ಳರು ಆಟೋ ಮೂಲಕ‌ ಬೆಳಗಾವಿಯ ಕೇಂದ್ರ ಬಸ್ ನಿಲ್ದಾಣಕ್ಕೆ ತೆರಳಿದ್ದಾರೆ. ಅಲ್ಲಿಂದ ಮುಂದೆ ಎಲ್ಲಿಗೆ ಹೋಗಿದ್ದಾರೆ ಗೊತ್ತಾಗಿಲ್ಲ. ಏಳು ಜನರನ್ನೊಳಗೊಂಡ ಈ ಟೀಂ ಅಂತಾರಾಜ್ಯ ಕಳ್ಳರ ಗ್ಯಾಂಗ್ ಆಗಿದ್ದು, ತಮಿಳು ಮತ್ತು ತೆಲುಗು ಭಾಷೆ ಮಾತನಾಡುತ್ತಿದ್ದರು. ಅವರಿಗೆ ಕನ್ನಡ ಬರುತ್ತಿರಲಿಲ್ಲ. ಒಂದಿಷ್ಟೂ ಅನುಮಾನ ಬರದಂತೆ ತಮ್ಮ ಕೆಲಸ ಮಾಡಿಕೊಂಡು ಹೋಗಿದ್ದಾರೆ ಎಂದು ಅಂಗಡಿ ಮಾಲೀಕ ಮಹೇಶ ವಿರೂಪಾಕ್ಷಿ ಈಟಿವಿ ಭಾರತಕ್ಕೆ ತಿಳಿಸಿದರು.

ಇದನ್ನೂ ಓದಿ: ಬೆಂಗಳೂರು: ಮಾರಕಾಸ್ತ್ರ ತೋರಿಸಿ ದರೋಡೆ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ

Last Updated : Nov 6, 2023, 5:46 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.